10:01 PM (IST) Aug 08

India Latest News Live 8 August 2026ಸಾವರ್ಕರ್ ಬಗ್ಗೆ ಶಾಲಾ ರಸಪ್ರಶ್ನೆಯಲ್ಲಿ ಕೇಳಿದ್ದೇ ತಪ್ಪಾಯ್ತಾ? ಕೇರಳದಲ್ಲಿ ಭುಗಿಲೆದ್ದ ವಿವಾದ, ವಿವಾದಕ್ಕೆ VHP ಎಂಟ್ರಿ

ಕೇರಳದ ಶಾಲೆಯೊಂದರ ರಸಪ್ರಶ್ನೆಯಲ್ಲಿ ಸಾವರ್ಕರ್ ಕುರಿತ ಪ್ರಶ್ನೆ ಕೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಎಡಪಂಥೀಯ ಸಂಘಟನೆಗಳು ಇದನ್ನು ವಿರೋಧಿಸಿದರೆ, ವಿಎಚ್‌ಪಿ ನಾಯಕ ವಿನೋದ್ ಬನ್ಸಲ್, 'ರಾಷ್ಟ್ರ ನಾಯಕರ ಬಗ್ಗೆ ಪ್ರಶ್ನೆ ಕೇಳಿದರೆ ಯಾಕಿಷ್ಟು ವಿರೋಧ?' ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
Read Full Story
09:48 PM (IST) Aug 08

India Latest News Live 8 August 2026Praggnanandhaa - ಪ್ರಜ್ಞಾನಂದನಿಗೆ ಮತ್ತೊಂದು ಚಾಂಪಿಯನ್ ಪಟ್ಟ! ಸೇಂಟ್ ಲೂಯಿಸ್‌ನಲ್ಲೂ ಭಾರತೀಯನದ್ದೇ ಮೇಲುಗೈ

ಸೇಂಟ್ ಲೂಯಿಸ್ ರಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಚಾಂಪಿಯನ್ ಆಗಿದ್ದಾರೆ. ಅವರ ಈ ಸಾಧನೆಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅಭಿನಂದನೆ ಸಲ್ಲಿಸಿದ್ದಾರೆ. 20 ವರ್ಷದ ಪ್ರಜ್ಞಾನಂದ 23/35 ಅಂಕಗಳೊಂದಿಗೆ ಈ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
Read Full Story
07:11 PM (IST) Aug 08

India Latest News Live 8 August 2026ಭಾರತಕ್ಕೂ ಬಂತು ಹಾರುವ ಕಾರು - ಪೆಟ್ರೋಲ್​, ಡೀಸೆಲ್​, ಎಥೆನಾಲ್​ ಬೇಡ್ವೇ ಬೇಡ- ಯಶಸ್ವಿ ಪರೀಕ್ಷೆ

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರವಿ ತಮ್ತಾ ಎಂಬ ಯುವಕ ಎಲೆಕ್ಟ್ರಿಕ್ ಹಾರುವ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಸಂಪೂರ್ಣವಾಗಿ ವಿದ್ಯುತ್ ಚಾಲಿತ ಮತ್ತು ಪರಿಸರ ಸ್ನೇಹಿಯಾಗಿರುವ ಈ ವಾಹನವು, ನಗರ ಸಾರಿಗೆ, ವಿಪತ್ತು ನಿರ್ವಹಣೆ ಮತ್ತು ಪ್ರವಾಸೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
Read Full Story
07:00 PM (IST) Aug 08

India Latest News Live 8 August 2026ದೆವ್ವ, ಆತ್ಮ, ನಿಗೂಢ ಶಬ್ದಗಳು.. ಹೈದರಾಬಾದ್‌ನ ಈ 7 ಜಾಗಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಿ!

Hyderabad Haunted Places: ಕೋಟ್ಯಂತರ ಜನಸಂಖ್ಯೆ, ಸದಾ ಗಿಜಿಗುಡುವ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಆಧುನಿಕ ಗಗನಚುಂಬಿ ಕಟ್ಟಡಗಳಿಂದ ಕೂಡಿರುವ ಹೈದರಾಬಾದ್‌ ನಗರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ.

Read Full Story
06:21 PM (IST) Aug 08

India Latest News Live 8 August 2026ಬಿಸಿನೆಸ್ ಶುರು ಮಾಡೋ ಮುನ್ನ ಮರೆಯದೇ ಇದೊಂದು ಕೆಲಸ ಮಾಡಿ..! ಯುವ ಉದ್ಯಮಿಯ ಕಿವಿಮಾತು ವೈರಲ್..!

ಲಕ್ನೋ ಮೂಲದ ಉದ್ಯಮಿ ಆಕಾಶ್ ಸಿಂಗ್, ಸ್ವಂತ ಬಿಸಿನೆಸ್ ಆರಂಭಿಸುವ ಮುನ್ನ ಉದ್ಯೋಗ ಮಾಡಿ ವೃತ್ತಿಪರ ಅನುಭವ ಗಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಕಚೇರಿ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಸಿಗುವ ಪ್ರಾಯೋಗಿಕ ಜ್ಞಾನವು, ಬಿಸಿನೆಸ್ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ.
Read Full Story
05:54 PM (IST) Aug 08

India Latest News Live 8 August 2026ವಿಶ್ವದ ಹಳೆಯ ದೈತ್ಯ ಆಮೆಗೀಗ 195 ವರ್ಷ - ಪ್ರಧಾನಿ ಮೋದಿಗೂ ಇದೆ ಕುತೂಹಲ ಲಿಂಕ್​- ಏನಿದು ವಿಷ್ಯ

ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.

Read Full Story
05:29 PM (IST) Aug 08

India Latest News Live 8 August 20261917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ - ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ

ಮಧ್ಯಪ್ರದೇಶದ ಸೆಹೋರ್‌ನ ನಾಗರ್ ಸೇಠ್ ಕುಟುಂಬವು 109 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ದಾಖಲೆಯನ್ನು ಪತ್ತೆಹಚ್ಚಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ತಮ್ಮ ಪೂರ್ವಜರು ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ 35,000 ರೂ. ಯುದ್ಧ ಸಾಲವನ್ನು ಮರುಪಾವತಿಸುವಂತೆ ಈ ದಾಖಲೆಯ ಆಧಾರದ ಮೇಲೆ ಕುಟುಂಬವು ಬ್ರಿಟಿಷರಲ್ಲಿ ಮನವಿ ಮಾಡಿದೆ.
Read Full Story
05:05 PM (IST) Aug 08

India Latest News Live 8 August 2026ಟಿಂಡರ್‍‌ನಲ್ಲಿ ಸ್ನೇಹ, ಬೆಡ್‌ರೂಮ್‌ನಲ್ಲಿ ವಿಡಿಯೋ.. 6 ಕೋಟಿ ರೂಪಾಯಿ ಲೂಟಿ ಹೊಡೆದ ಕಿಲಾಡಿ ಲೇಡಿ

ಪ್ರಯಾಗ್‌ರಾಜ್‌ನಲ್ಲಿ ಪಲ್ಲವಿ ಸಿಂಗ್ ರಜಪೂತ್ ನೇತೃತ್ವದ ಹನಿಟ್ರ್ಯಾಪ್ ಜಾಲವೊಂದು ಡೇಟಿಂಗ್ ಆ್ಯಪ್‌ಗಳ ಮೂಲಕ ಪುರುಷರನ್ನು ಬಲೆಗೆ ಬೀಳಿಸಿ, 6 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿದೆ. ಹೈಕೋರ್ಟ್ ವಕೀಲರೊಬ್ಬರು ದೂರು ನೀಡಿದ ನಂತರ ಈ ಬ್ಲ್ಯಾಕ್‌ಮೇಲ್ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
04:39 PM (IST) Aug 08

India Latest News Live 8 August 2026ಇದು Gen Z ಡೇಟಿಂಗ್ ನಿಘಂಟು - ಪ್ರೀತಿಯ ಹೊಸ ಟ್ರೆಡಿಂಗ್ ಭಾಷೆ ನಿಮಗೆ ಗೊತ್ತೇ?

ಇಂದಿನ ಜೆನ್ ಜಿ ಕಾಲದಲ್ಲಿ ಪ್ರೀತಿ ಮತ್ತು ಸಂಬಂಧಗಳಿಗೆ 'ಸಿಚುವೇಷನ್‌ಶಿಪ್', 'ಘೋಸ್ಟಿಂಗ್' ಮುಂತಾದ ಹೊಸ ಪದಗಳು ಬಂದಿವೆ. ಈ ಲೇಖನವು ಇಂತಹ ಆಧುನಿಕ ಡೇಟಿಂಗ್ ಪದಗಳ ಅರ್ಥವನ್ನು ವಿವರಿಸುತ್ತದೆ ಮತ್ತು ಯಾವುದೇ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವದ ಮಹತ್ವವನ್ನು ಒತ್ತಿಹೇಳುತ್ತದೆ.
Read Full Story
04:09 PM (IST) Aug 08

India Latest News Live 8 August 2026ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಶಾಕ್; ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಔಟ್, ಕನ್ನಡಿಗನಿಗೆ ಇದು ಜಾಕ್‌ಪಾಟ್

ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ, ಜಸ್ಪ್ರೀತ್ ಬುಮ್ರಾ ಹಾಗೂ ಸಾಯಿ ಸುದರ್ಶನ್ ಗಾಯದ ಕಾರಣದಿಂದ ಹೊರಬಿದ್ದಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿರುವ ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ.
Read Full Story
03:52 PM (IST) Aug 08

India Latest News Live 8 August 2026ಉದ್ಯೋಗಿಗಳಿಗೆ Unhappy Leave ಘೋಷಣೆ.. IT ಕಂಪನಿಗಳು ಹೊಸ ಸಂಚಲನ..!

ಚೀನಾದ ಈ ಪಾಲಿಸಿಯನ್ನು ಭಾರತೀಯ ಕಂಪನಿಗಳಲ್ಲಿ ಅಳವಡಿಸಲು ಸಾಧ್ಯವೇ? ಉದ್ಯೋಗಿಗಳು ಬೇಸರಗೊಂಡ ನಂತರ ರಜೆ ನೀಡುವುದಕ್ಕಿಂತ, ಅವರು ಬೇಸರಗೊಳ್ಳದಂತಹ (Burnout) ಉತ್ತಮ ಕೆಲಸದ ವಾತಾವರಣ ನಿರ್ಮಿಸುವುದು ಹೆಚ್ಚು ಮುಖ್ಯವಲ್ಲವೇ? ಎಂದು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಪ್ರಶ್ನೆ ಮಾಡಿದ್ದಾರೆ.

Read Full Story
03:06 PM (IST) Aug 08

India Latest News Live 8 August 2026BMW ಬೈಕ್‌ನಲ್ಲಿ ಬಂದ Gen-Z ಉಬರ್ ರೈಡರ್.. ಲಕ್ಷಾಂತರ ಬೆಲೆಯ ಬೈಕ್‌ನಲ್ಲಿ ಟ್ಯಾಕ್ಸಿ ಓಡಿಸಲು ಕೊಟ್ಟ ಕಾರಣ ಅಚ್ಚರಿಯಾಗಿದೆ..

ಜೀವನದ ದೊಡ್ಡ ಪಾಠಗಳು ಅಥವಾ ಸಂದೇಶಗಳು ಯಾವಾಗಲೂ ದಪ್ಪ ದಪ್ಪ ಪುಸ್ತಕಗಳಿಂದ ಅಥವಾ ಮೋಟಿವೇಷನಲ್ ಸ್ಪೀಕರ್‌ಗಳಿಂದಲೇ ಬರಬೇಕೆಂದಿಲ್ಲ. ಕೆಲವೊಮ್ಮೆ ನಾವು ಅನಿರೀಕ್ಷಿತವಾಗಿ ಭೇಟಿಯಾಗುವ ಅಪರಿಚಿತ ವ್ಯಕ್ತಿಗಳು ಕೂಡ ಪಾಠ ಕಲಿಸುತ್ತಾರೆ. ಮುಂಬೈನ ಉದ್ಯಮಿ ಆಶಿಶ್ ಜೈನ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಅಪರೂಪದ ಅನುಭವವಾಗಿದೆ.

Read Full Story
03:00 PM (IST) Aug 08

India Latest News Live 8 August 2026World Record Alert - ಬರೋಬ್ಬರಿ 8 ಅಡಿ 10 ಇಂಚು ಉದ್ದದ ಕೂದಲು ಬೆಳೆಸಿ ವಿಶ್ವದಾಖಲೆ; ಉಕ್ರೇನ್ ಮಹಿಳೆಯ ದಾಖಲೆ ಮುರಿದ 'ಭಾರತ ನಾರಿ'

ಉತ್ತರಾಖಂಡದ ರೇಣು ಧರಿಯಾಲ್, 8 ಅಡಿ 10 ಇಂಚು ಉದ್ದದ ಕೂದಲಿನೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉಕ್ರೇನ್ ಮಹಿಳೆಯ ಹಿಂದಿನ ದಾಖಲೆಯನ್ನು ಮುರಿದಿರುವ ಇವರು, ಕಳೆದ 10 ವರ್ಷಗಳಿಂದ ಅವರು ಕೂದಲು ಕತ್ತರಿಸಿಲ್ಲ.

Read Full Story
02:47 PM (IST) Aug 08

India Latest News Live 8 August 20262027ರ ಏಕದಿನ ವಿಶ್ವಕಪ್‌ಗೆ ಡೈರೆಕ್ಟ್ ಎಂಟ್ರಿ ಪಡೆದ ಆಫ್ಘಾನಿಸ್ತಾನ..! ಎರಡು ಬಾರಿಯ ಚಾಂಪಿಯನ್‌ ತಂಡದ ಕನಸು ನುಚ್ಚುನೂರು

ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಆಫ್ಘಾನಿಸ್ತಾನ, 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಈ ಗೆಲುವಿನಿಂದಾಗಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ನೇರ ಅರ್ಹತೆಯ ಕನಸು ಬಹುತೇಕ ನುಚ್ಚುನೂರಾಗಿದೆ.
Read Full Story
01:29 PM (IST) Aug 08

India Latest News Live 8 August 2026Pulsar N160 ಬೈಕ್‌ S & SS ವೇರಿಯಂಟ್‌ನಲ್ಲಿ ಲಾಂಚ್; ಫೀಚರ್ಸ್, ಬೆಲೆಯ ಮಾಹಿತಿ ಇಲ್ಲಿದೆ

ಬಜಾಜ್ ತನ್ನ ಜನಪ್ರಿಯ ಪಲ್ಸರ್ N160 ಬೈಕ್‌ನ S ಮತ್ತು SS ಎಂಬ ಎರಡು ಹೊಸ ವೇರಿಯಂಟ್‌ಗಳನ್ನು ಬಿಡುಗಡೆ ಮಾಡಿದೆ. ಈ ಬೈಕ್‌ಗಳು 4-ವಾಲ್ವ್ ತಂತ್ರಜ್ಞಾನದ ಹೊಸ ಇಂಜಿನ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಕ್ಲಸ್ಟರ್ ಮತ್ತು ಡ್ಯುಯಲ್-ಚಾನೆಲ್ ABS ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ.
Read Full Story
01:09 PM (IST) Aug 08

India Latest News Live 8 August 2026ಈ ಬ್ಯೂಟಿಫುಲ್ ನಟಿ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ! ಗುಟ್ಟಾಗಿ ಆದ ಮದುವೆಯ ಫೋಟೋ ವೈರಲ್

ಟೀಂ ಇಂಡಿಯಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕ್ರಿಕೆಟಿಗ ರಮಣ್‌ದೀಪ್ ಸಿಂಗ್, ಜನಪ್ರಿಯ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರೊಂದಿಗೆ ಗುಟ್ಟಾಗಿ ವಿವಾಹವಾಗಿದ್ದಾರೆ. ಅರ್ಶದೀಪ್ ಸಿಂಗ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಿಂದ ಈ ಮದುವೆ ವಿಚಾರ ಬೆಳಕಿಗೆ ಬಂದಿದ್ದು, ಖಾಸಗಿ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದರು.
Read Full Story
12:39 PM (IST) Aug 08

India Latest News Live 8 August 2026ಸಿಎಂ ವಿಜಯ್ ಪತ್ನಿ ಡಿವೋರ್ಸ್‌ ಅರ್ಜಿ ವಾಪಸ್ ಪಡೆದಿದ್ದೇಕೆ..? ಮೂರು ಕಾರಣಗಳು ರಿವೀಲ್..!

ದಳಪತಿ ವಿಜಯ್ ಸಂಸಾರದಲ್ಲಿ ಬಿರುಗಾಳಿ ತಣ್ಣಗಾಯಿತೇ? ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ! ಅಸಲಿ ಕಾರಣವೇನು? ಈ ಸ್ಟೋರಿ ಓದಿ..

Read Full Story
11:31 AM (IST) Aug 08

India Latest News Live 8 August 2026ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಆಘಾತ; ಟೀಂ ಇಂಡಿಯಾಗೆ ಆಸರೆಯಾದ ಕನ್ನಡಿಗರ ಜೋಡಿ

ಶ್ರೀಲಂಕಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ, ಭಾರತವು ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಜೊತೆಯಾದ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಶ್ರೀಲಂಕಾ ಇಲೆವೆನ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 363 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.
Read Full Story
11:15 AM (IST) Aug 08

India Latest News Live 8 August 2026ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್‌ನ ಡಬಲ್ ಸ್ಟ್ಯಾಂಡರ್ಡ್‌ಗೆ ಬಿಜೆಪಿ ಕಿಡಿ

ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ನೀಡಿ, ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ನೌಕರಿ ನೇಮಕಾತಿ ವಿರೋಧಿ ಹೋರಾಟವನ್ನು ಕಡೆಗಣಿಸಿರುವ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇದು ಕಾಂಗ್ರೆಸ್‌ನ ಡಬಲ್ ಸ್ಟ್ಯಾಂಡರ್ಡ್ಎಂದು ಕಟು ಟೀಕೆ.

Read Full Story
11:05 AM (IST) Aug 08

India Latest News Live 8 August 2026Mahindra Thar Facelift - ಹೊಸ ಲುಕ್, ಹೈ-ಟೆಕ್ ಫೀಚರ್‌ಗಳೊಂದಿಗೆ ರಸ್ತೆಗಿಳಿಯಲು ಸಜ್ಜಾದ ಹೊಸ ಥಾರ್

ಮಹೀಂದ್ರಾ ತನ್ನ ಜನಪ್ರಿಯ SUV ಥಾರ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದೇ ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಇದು ಹೊಸ ವಿನ್ಯಾಸ, ADAS ಸೂಟ್, ಮತ್ತು ನವೀಕರಿಸಿದ ಇಂಟೀರಿಯರ್‌ನಂತಹ ಹಲವು ಬದಲಾವಣೆಗಳನ್ನು ಹೊಂದಿರಲಿದೆ.
Read Full Story