LIVE NOW
India Latest News Live: ಮಿಥಿ ನದಿ ಹೂಳು ಹಗರಣ: ನಟ ಡಿನೋ ಮೊರೆಯಾ ವಿಚಾರಣೆ

ಸಾರಾಂಶ
ಮುಂಬೈ: ಕನ್ನಡದ ‘ಜೂಲಿ’ ಅಲ್ಲದೆ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಪ್ರಸಿದ್ಧ ನಟ ಡಿನೋ ಮೊರೆಯಾ ಅವರನ್ನು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗ ಶುಕ್ರವಾರ 6 ತಾಸು ವಿಚಾರಣೆ ನಡೆಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮುಂಬೈನ ಮಿಥಿ ನದಿ ಹೂಳೆತ್ತುವಿಕೆ ಮತ್ತು ಶುದ್ಧೀಕರಣದ ₹65.54 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಮತ್ತೆ ಅಗತ್ಯ ಬಿದ್ದರೆ ವಿಚಾರಣೆಗೆ ಕರೆಯಯವಯದಾಗಿ ಹೇಳಿದ್ದಾರೆ.
ಆರೋಪ ಏನು?:
ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಮಿಥಿ ನದಿ ಶುದ್ಧೀಕರಣದಲ್ಲಿ ಅಕ್ರಮ ಎಸಗಿದ್ದರು. ಈ ಆರೋಪಿಗಳೊಂದಿಗೆ ಡಿನೋ ಮೊರೆಯಾ ಅವರು ಫೋನ್ ಸಂಪರ್ಕ ಮತ್ತು ಆರ್ಥಿಕ ವಹಿವಾಟು ಹೊಂದಿದ್ದರು ಆರೋಪವಿದೆ. ಈ ಪ್ರಕರಣದಲ್ಲಿ 2025ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಡಿನೋ ಮೊರೆಯಾ ಅವರ ಮನೆ ಮೇಲೆ ದಾಳಿ ನಡೆಸಿ ವಿಚಾರಣೆಗೆ ಒಳಪಡಿಸಿತ್ತು.