07:59 AM (IST) Oct 22

India Latest News Live 22 October 2026 ಸಂಸತ್ತಿನ ಐತಿಹಾಸಿಕ ಸೆಂಗೋಲ್ ಹಿಂದಿನ ಮಹಾನ್ ಶಿಲ್ಪಿ ವುಮ್ಮಿಡಿ ಎಥಿರಾಜ್ (99) ನಿಧನ

ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಹಸ್ತಾಂತರಿಸಿದ್ದ ಹಾಗೂ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲಾದ ಐತಿಹಾಸಿಕ ಸೆಂಗೋಲ್ ನಿರ್ಮಾತೃ ವುಮ್ಮಿಡಿ ಎಥಿರಾಜ್ (99) ನಿಧನರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪ ರಾಷ್ಟ್ರಪತಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Read Full Story
07:34 AM (IST) Oct 22

India Latest News Live 22 October 2026 ಪ್ಯಾರಾ ಏಷ್ಯನ್‌ ಗೇಮ್ಸ್ - ಮೂರೇ ದಿನಗಳಲ್ಲಿ 62 ಪದಕ ಬೇಟೆಯಾಡಿದ ಭಾರತ!

Asian Para Games 2026: ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಕೇವಲ 3 ದಿನಗಳಲ್ಲಿ 62 ಪದಕಗಳನ್ನು ಗೆದ್ದು ಬೀಗಿದೆ. ಇದರಲ್ಲಿ 42 ಪದಕಗಳು ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲೇ ಬಂದಿದ್ದು, ಕನ್ನಡಿಗರಾದ ನಿರಂಜನ್ ಮತ್ತು ಶರತ್ ಕೂಡ ಪದಕ ಗೆದ್ದಿದ್ದಾರೆ.

Read Full Story
07:19 AM (IST) Oct 22

India Latest News Live 22 October 2026 ಕಬ್ಬು ಬೆಳೆಗಾರರಿಗೆ ವಿಜಯದಶಮಿ ದಿನ ಜಂಟಿ ಸಮಿತಿ ಶುಭ ಸಂದೇಶ; ಹೊಸ ಮಾರ್ಗಸೂಚಿ ಸಾಧ್ಯತೆ

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಮಿತಿಯು ನವದೆಹಲಿಯಲ್ಲಿ ತನ್ನ ಮೊದಲ ಸಭೆ ನಡೆಸಿದೆ. ಸಕ್ಕರೆ ವಲಯದ ಸಮಗ್ರ ಅಭಿವೃದ್ಧಿಗಾಗಿ ರೈತರು, ಕಾರ್ಖಾನೆಗಳು ಮತ್ತು ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಹೊಸ ಮಾರ್ಗಸೂಚಿ ರೂಪಿಸಲು ಸಮಿತಿ ನಿರ್ಧರಿಸಿದೆ.
Read Full Story
07:11 AM (IST) Oct 22

India Latest News Live 22 October 2026 ಬಾಹ್ಯಾಕಾಶದಲ್ಲಿ ಸಂಘರ್ಷವಲ್ಲ, ಸಹಕಾರ ಅಗತ್ಯ - ವಿಶ್ವಸಂಸ್ಥೆ ಸಭೆಯಲ್ಲಿ ಸುಧಾಮೂರ್ತಿ

ಬಾಹ್ಯಾಕಾಶವು ಸಂಘರ್ಷದ ತಾಣವಾಗದೆ ಸಹಕಾರದ ಕ್ಷೇತ್ರವಾಗಿ ಉಳಿಯಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಪ್ರತಿಪಾದಿಸಿದ್ದಾರೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯಲು ಅಂತಾರಾಷ್ಟ್ರೀಯ ಒಪ್ಪಂದದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

Read Full Story