- Home
- News
- India News
- India Latest News Live: ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್ ಮಾಡಿದ ರಹಸ್ಯ ತೈಲ ಒಪ್ಪಂದ? ರಷ್ಯಾ-ಉಕ್ರೇನ್ ಸಂಧಾನ
LIVE NOW
India Latest News Live: ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್ ಮಾಡಿದ ರಹಸ್ಯ ತೈಲ ಒಪ್ಪಂದ? ರಷ್ಯಾ-ಉಕ್ರೇನ್ ಸಂಧಾನ

ಸಾರಾಂಶ
ನವದೆಹಲಿ: ‘ಪೊಲೀಸರು ನನ್ನನ್ನು ಬಂಧಿಸಲೂ ಇಲ್ಲ, ವಶಕ್ಕೆ ಪಡೆಯಲೂ ಇಲ್ಲ. ಬದಲಾಗಿ ಕಿಡ್ನಾಪ್ ಮಾಡಿದರು’ ಎಂದು ಯುಟ್ಯೂಬರ್ ಹಾಗೂ ಸಿಜೆಪಿ ಬೆಂಬಲಿಗ ಧ್ರುವ್ ರಾಠಿ ಭಾನುವಾರ ಆರೋಪಿಸಿದ್ದಾರೆ. ಅ.10ರಂದು ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ಹೊರಡಲು ಸಜ್ಜಾಗಿದ್ದ ಧ್ರುವ್ರನ್ನು ಗುರುಗ್ರಾಮದ ಅವರ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ತಮ್ಮ ಬಿಡುಗಡೆ ಬಳಿಕ ಮೊದಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಧ್ರುವ್, ‘ಅವರು ನನ್ನನ್ನು ಬಂಧಿಸಲಿಲ್ಲ, ವಶಕ್ಕೆ ಪಡೆಯಲೂ ಇಲ್ಲ. ಬದಲಾಗಿ ನಾನು ಮಲಗಿದ್ದಾಗ ನನ್ನ ಮನೆಗೆ ಬಂದು ಕಿಡ್ನಾಪ್ ಮಾಡಿದರು’ ಎಂದು ಕಿಡಿ ಕಾರಿದ್ದಾರೆ. ಇದೇ ವೇಳೆ, ತಾವು ಭಾರತೀಯ ಪ್ರಜೆ ಅಲ್ಲ ಎಂಬ ಆರೋಪಕ್ಕೆ ಪಾಸ್ಪೋರ್ಟ್ ತೋರಿಸಿ ಸ್ಪಷ್ಟನೆ ನೀಡಿದ ಅವರು, ‘ಇಲ್ಲಿದೆ ನನ್ನ ಪಾಸ್ಪೋರ್ಟ್. ನಾನು ಭಾರತೀಯ ಪ್ರಜೆಯಾಗಿದ್ದೇನೆ, ಆಗಿದ್ದೆ ಮತ್ತು ಮುಂದೆಯೂ ಆಗಿರುತ್ತೇನೆ. ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
05:34 AM (IST) Oct 12
India Latest News Live 12 October 2026 ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್ ಮಾಡಿದ ರಹಸ್ಯ ತೈಲ ಒಪ್ಪಂದ? ರಷ್ಯಾ-ಉಕ್ರೇನ್ ಸಂಧಾನ
ಅಮೆರಿಕದಲ್ಲಿ ಮುಂಬರುವ ಚುನಾವಣೆ ಗೆಲ್ಲುವ ಉದ್ದೇಶದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಮತ್ತು ಉಕ್ರೇನ್ ನಡುವೆ ಅಚ್ಚರಿಯ 'ಇಂಧನ ಕದನ ವಿರಾಮ' ಏರ್ಪಡಿಸಿದ್ದಾರೆ. ಈ ಹಿಂದೆ ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಭಾರತದ ಮೇಲೆ ಸುಂಕ ವಿಧಿಸಿದ್ದ ಟ್ರಂಪ್, ಇದೀಗ ತಾವೇ ರಷ್ಯಾದಿಂದ ಡೀಸೆಲ್ ಖರೀದಿಸಲು ನಿರ್ಬಂಧ ತೆರವುಗೊಳಿಸಿದ್ದಾರೆ.
Read Full Story 05:22 AM (IST) Oct 12
India Latest News Live 12 October 2026 ದಿಲ್ಲಿಯಲ್ಲಿ 2ನೇ ದಿನವೂ ಜಿರಳೆ ಗದ್ದಲ; 1 ವರ್ಷ ಧರಣಿ ಮಾಡಲ್ಲ, ಷರತ್ತಿನಡಿ ಬಿಡುಗಡೆ
ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಿರಳೆ ಜನತಾ ಪಾರ್ಟಿ (ಸಿಜೆಪಿ) ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶಾಂತಿಯುತ ಪ್ರತಿಭಟನಾಕಾರರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಜೈಲಿಗೆ ಹಾಕಿದರೂ ಸಿಇಸಿ ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸಿಜೆಪಿ ನಾಯಕರು ಶಪಥ ಮಾಡಿದ್ದಾರೆ.
Read Full Story