ಸ್ವಾತಂತ್ರ್ಯದ 75 ವರ್ಷಗಳ ನಂತರವೂ, ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗಜುಗ ಬಸ್ತಿಯಂತಹ ಭಾರತ-ಪಾಕಿಸ್ತಾನ ಗಡಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ವಿದ್ಯುತ್ ಮತ್ತು ನೀರಿನ ಸೌಲಭ್ಯವಿಲ್ಲದೆ, 150ಕ್ಕೂ ಹೆಚ್ಚು ಜನರು ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮಹಿಳೆಯರು ಕುಡಿಯುವ ನೀರಿಗಾಗಿ ದೂರ ನಡೆಯುತ್ತಾರೆ. ಪ್ರವಾಸಿಗರು ಈ ಗ್ರಾಮವನ್ನು ನೋಡಲು ಆಸಕ್ತಿ ವಹಿಸುತ್ತಾರೆ, ಮತ್ತು ಡ್ರೋನ್ ವೀಡಿಯೊ ವೈರಲ್ ಆಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಿ ಕೆಲವೇ ವರ್ಷಗಳಲ್ಲಿ 100 ವರ್ಷದ ಸಂಭ್ರಮಾಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಸಂವಿಧಾನಬದ್ಧವಾಗಿ ಚುನಾವಣೆಯಲ್ಲಿ ಗೆದ್ದು ದೇಶದ ಅಭಿವೃದ್ಧಿ ಮಾಡುವುದಾಗಿ ಅಧಿಕಾರಕ್ಕೆ ಬರುವ ಸರ್ಕಾರಗಳು ಈವರೆಗೂ ಕೆಲವೊಂದು ಗಡಿಭಾಗದ ಗ್ರಾಮಗಳಿಗೆ ಮೂಲ ಸೌಕರ್ಯವನ್ನೇ ಕಲ್ಪಿಸಿಲ್ಲ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿರುವ ಭಾರತದ ಕೊನೆಯ ಹಳ್ಳಿಗೂ ಕೂಡ ಭಾರತ ಸರ್ಕಾರದಿಂದ ಈವರೆಗೆ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಕೊಟ್ಟಿಲ್ಲ. ಆದರೆ, ಈ ಗ್ರಾಮವನ್ನು ನೋಡುವುದಕ್ಕೆ ಭಾರತೀಯ ಪ್ರವಾಸಿಗರಿಂದ ಭಾರೀ ಬೇಡಿಕೆಯಿದೆ.

ರಾಜಸ್ಥಾನದಲ್ಲಿ ನಗರಗಳಿಗೆ ಹೋಲಿಸಿದರೆ ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ರಾಜಸ್ಥಾನದಲ್ಲಿ ಒಂದು ಗ್ರಾಮಕ್ಕೆ, ಇಂದಿಗೂ ವಿದ್ಯುತ್ ಇಲ್ಲ ಮತ್ತು ನೀರಿನ ಸೌಲಭ್ಯವೂ ಇಲ್ಲ. ಈ ಈ ಗ್ರಾಮವು ಭಾರತ ಮತ್ತು ಪಾಕಿಸ್ತಾನ ಗಡಿಯ ಕೊನೆಯ ಗ್ರಾಮವಾಗಿದೆ. (last village on the India Pakistan border in Rajasthan) ಪಾಕಿಸ್ತಾನಕ್ಕೆ ಕೆಲವೇ ಹೆಜ್ಜೆಗಳ ದೂರದಲ್ಲಿದೆ. ನಾವು ಈಗ ರಾಜಸ್ಥಾನ ರಾಜ್ಯದ ಗಜುಗ ಬಸ್ತಿಯ ಎಂಬ ಗ್ರಾಮದ ಬಗ್ಗೆ ಮಾತನಾಡುತ್ತಿದ್ದೇವೆ. ಇದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿದೆ (Jaisalmer district).

ಜೈಸಲ್ಮೇರ್ ನಗರದಿಂದ ತನೋಟ್ ಮಾತೆಯ ಕಡೆಗೆ ಹೋಗುವ ಹೆದ್ದಾರಿಯ ಬಳಿ ಗಜುಗ ಬಸ್ತಿ ಈ ಗ್ರಾಮವಿದೆ. ಈ ಗ್ರಾಮದಲ್ಲಿ ನಿಮಗೆ ಒಂದು ಸಹ ಕಾಂಕ್ರೀಟ್ ಮನೆ ಕಾಣುವುದಿಲ್ಲ. ಈ ಗ್ರಾಮದಲ್ಲಿ ಎಲ್ಲಾ ಮನೆಗಳು ಮಣ್ಣು ಮತ್ತು ಸುಣ್ಣದಿಂದ ಮಾಡಲ್ಪಟ್ಟಿವೆ. ಇಂದಿಗೂ ಗ್ರಾಮದಲ್ಲಿ ಸುಮಾರು 150ಕ್ಕಿಂತ ಹೆಚ್ಚಿನ ಜನರಿದ್ದಾರೆ. ಈ ಗ್ರಾಮವು ರಾಜಸ್ಥಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯ ಕೊನೆಯ ಗ್ರಾಮವಾಗಿದೆ. ಇಡೀ ಗ್ರಾಮವು ಮರಳಿನ ದಿಬ್ಬದ ಮೇಲೆ ನೆಲೆಸಿದೆ. ಅಲ್ಲಿ ನಿಮಗೆ ಯಾವುದೇ ವಿದ್ಯುತ್ ತಂತಿ ಕಾಣುವುದಿಲ್ಲ. ಮರುಭೂಮಿ ಪ್ರದೇಶದಲ್ಲಿ ಗ್ರಾಮವಿರುವುದರಿಂದ ಇಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳು ತಲುಪುವುದಿಲ್ಲ. ಈ ಗಡಿಯ ಸಮೀಪದಲ್ಲಿರುವುದರಿಂದ ಈ ಗ್ರಾಮವು ಸೈನಿಕರ ಕಣ್ಗಾವಲಿನಲ್ಲಿರುತ್ತದೆ.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಹೈವೇ ಪ್ರಯಾಣ ಕೇವಲ 3 ಗಂಟೆ, ಜೂನ್‌ನಲ್ಲಿ ಸಾರ್ವಜನಿಕರಿಗೆ ಮುಕ್ತ

ಮಹಿಳೆಯರು ಕುಡಿಯುವ ತರಲು ಪರದಾಟ: ಇಲ್ಲಿ ವಾಸಿಸುವ ಮಹಿಳೆಯರು ಕುಡಿಯುವ ನೀರನ್ನು ತರಲು ಹಲವಾರು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುತ್ತಾರೆ. ಇಲ್ಲಿ ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರವಾಸಿಗರು ಈ ಗ್ರಾಮವನ್ನು ನೋಡಲು ಇಷ್ಟಪಡುತ್ತಾರೆ. ಪ್ರಸ್ತುತ ಈ ಗ್ರಾಮದ ಡ್ರೋನ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ.