ನವದೆಹಲಿ(ನ.24): ಕಳೆದ 6 ತಿಂಗಳಲ್ಲಿ ಒಂದರ ಮೇಲೊಂದರಂತೆ ಕ್ಷಿಪಣಿ ಪರೀಕ್ಷೆ ನಡೆಸಿ ಯಶಸ್ವಿಾಗಿರುವ ಭಾರತ ಇದೀಗ  ಮಲ್ಟಿಪಲ್ ಆಪರೇಶನ್ ಆರಂಭಿಸಿದೆ. ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ ಲೈವ್ ಟೆಸ್ಟ್ ಆರಂಭಿಸಿದೆ. ಬರೋಬ್ಬರಿ 290 ಕಿ.ಮೀ ಗುರಿ ಸಾಮರ್ಥ್ಯ ಹೊಂದಿರು ಈ ಬ್ರಹ್ಮೋಸ್ ಕ್ಷಿಪಣಿ ಭಾರತದ ಶಸ್ತಾಸ್ತ್ರ ಪರೀಕ್ಷೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

400ಕಿ.ಮೀ ಗುರಿ ಸಾಮರ್ಥ್ಯದ ಭಾರತದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ!.

ಭಾರತದ ಮೊದಲ ಲೈವ್ ಮಿಸೈಲ್ ಟೆಸ್ಟ್ ಇದಾಗಿದ್ದು, ಪರಮಾಣು ರಹಿತ ಹಾಗೂ ಮಾರಕ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯನ್ನು ಭಾರತ ಅಂಡಮಾನ್ ನಿಕೋಬಾರ್‌ನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡಸಲಾಗಿದೆ.

ಭಾರತೀಯ ಸೇನೆಯ DRDO ವಿಭಾಗ ಅಭಿವೃದ್ಧಿಪಡಿಸಿದ ಈ ಬ್ರಹ್ಮೋಸ್ ಸೂಪರ್‌ಸಾನಿಕ್ ಮಿಸೈಲ್ ಅತ್ಯಂತ ಪ್ರಬಲ ಹಾಗೂ ಯಶಸ್ವಿ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿದೆ. ಇದೀಗ ಭಾರತ ಈ ಕ್ಷಿಪಣಿ ಪ್ರಯೋಗದಿಂದ ಸೇನಾ ಬಲ ಮತ್ತಷ್ಟು ಹೆಚ್ಚಿದೆ. ಇಷ್ಟೇ ಅಲ್ಲ ಭಾರತದಿಂದ ಚೀನಾ ಮೇಲೆ ಹಾಗೂ ಪಾಕಿಸ್ತಾನ ಮೇಲೆ ದಾಳಿ ಮಾಡಲ ಸಾಮರ್ಥ್ಯ ಹೊಂದಿದೆ.

DRDO ಈಗಾಗಲೇ 300 ರಿಂದ 800 ಕಿ.ಮೀ ಗುರಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಗಿದೆ. ಭಾರತೀಯ ಸೇನೆಗೆ ಅಗತ್ಯ ಕ್ಷಿಪಣಿಗಳನ್ನು ಪೂರೈಸಿ ಇದೀಗ ರಫ್ತುವಿನತ್ತವೂ ಗಮನಹರಿಸಿದೆ. 

DRDO ಅಭಿವೃದ್ಧಿ ಪಡಿಸಿದ ಬ್ರಹ್ಮೋಸ್ ಮಿಸೈಲ್‌ನ್ನು ಸುಖೋಯ್ 30MKI ಫೈಟರ್ ಜೆಟ್ ಮೂಲಕ ಭೂಭಾಗದ ಮೇಲೆ ದಾಳಿ ಮಾಡಬಲ್ಲ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಇದೀಗ ಈ ಸುಖೋಯ್ 30MKI ಫೈಟರ್ ಜೆಟ್ ಹಾಗೂ ಬ್ರಹ್ಮೋಸ್ ಕ್ಷಿಪಣಿಯನ್ನು ಪೂರ್ವ ಲಡಾಖ್ ಹಾಗೂ ಭಾರತದ ಗಡಿ ಭಾಗದಲ್ಲಿ ನಿಯೋಜಿಸಲಾಗಿದೆ.