Asianet Suvarna News Asianet Suvarna News

ಭಾರತ, ಇಸ್ರೇಲ್‌ನ MRSAM ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷೆ ಯಶಸ್ವಿ!

ಭಾರತ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಸಂಶೋಧಿಸಿರುವ ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್|  ಕಳೆದ ವಾರ ಮಧ್ಯಮ ಪ್ರಮಾಣದ ಭೂಮಿಯಿಂದ ವಾಯುವಿಗೆ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿ| ಭಾರತ ಮತ್ತು ಇಸ್ರೇಲ್ ಎರಡೂ ದೇಶಗಳು ಸೇರಿ ಅಭಿವೃದ್ಧಿಪಡಿಸಿರುವ ಈ ರಕ್ಷಣಾ ವ್ಯವಸ್ಥೆ

India Israel successfully test Medium Range Surface to Air Missile defence system to boost combat capability pod
Author
Bangalore, First Published Jan 6, 2021, 5:18 PM IST

ನವದೆಹಲಿ(ಜ.06): ಭಾರತ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಸಂಶೋಧಿಸಿರುವ ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಉಭಯ ರಾಷ್ಟ್ರಗಳು ಸೇರಿ ಅಭಿವೃದ್ಧಿಪಡಿಸಿರುವ ಈ ರಕ್ಷಣಾ ವ್ಯವಸ್ಥೆಯು 50-70 ಕಿಮೀ ವ್ಯಾಪ್ತಿಯಲ್ಲಿನ ಶತ್ರು ವಿಮಾನಗಳನ್ನು ಹೊಡೆದುರುಳಿಸಬಲ್ಲದು.

ಪ್ರಸ್ತುತ ಭಾರತೀಯ ಸೇನೆಯ ಮೂರೂ ವಿಭಾಗಗಳು ಹಾಗೂ ಇಸ್ರೇಲ್ ರಕ್ಷಣಾ ಪಡೆಗಳು ವೈಮಾನಿಕ ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಡಿಆರ್‌ಡಿಒ ಹಾಗೂ ಇಸ್ರೇಲ್‌ನ ಐಎಐ ಜಂಟಿಯಾಗಿ ಇವುಗಳನ್ನು ಅಭಿವೃದ್ಧಿಪಡಿಸಿವೆ. ಎಂಆರ್‌ಎಸ್‌ಎಎಂ ವ್ಯವಸ್ಥೆಯು ನಿರ್ದೇಶನ ಮತ್ತು ನಿಯಂತ್ರಣಗಳನ್ನು ಒಳಗೊಂಡಿದ್ದು, ಆಧುನಿಕ ಆರ್ರೇ ರೇಡಾರ್, ಮೊಬೈಲ್ ಲಾಂಚರ್ ಸೌಲಭ್ಯಗಳಿವೆ.  

ಈ ಶಸ್ತ್ರ ವ್ಯವಸ್ಥೆಯ ಎಲ್ಲ ಗುರಿಗಳೂ ಪರೀಕ್ಷೆ ವೇಳೆ ಯಶಸ್ವಿಯಾಗಿ ಗುರಿ ತಲುಪಿವೆ. ಡಿಜಿಟಲ್ ಎಂಎಂಆರ್ ರೇಡಾರ್ ವ್ಯವಸ್ಥೆಯಲ್ಲಿನ ತೊಂದರೆಗಳನ್ನು ನಿವಾರಿಸಿ ಎಂಆರ್‌ಎಸ್‌ಎಎಂ ಪ್ರತಿಬಂಧಕವನ್ನು ಕಾರ್ಯಾಚರಣೆಗೆ ಪರೀಕ್ಷಿಸಲಾಗಿದೆ ಎಂದು ಇಸ್ರೇಲ್ ಹೇಳಿಕೆ ನೀಡಿದೆ. 

MRSAM ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಬಹಳ ಆಧುನಿಕ ತಂತ್ರಜ್ಞಾನವಾಗಿದ್ದು, ವಿವಿಧ ಬಗೆಯ ಬೆದರಿಕೆಗಳನ್ನು ಎದುರಿಸುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ವಾಯುಮಾರ್ಗದಲ್ಲಿನ ಯಾವುದೇ ರೀತಿಯ ಶತ್ರುಪಾಳಯದ ಆಸ್ತ್ರಗಳನ್ನು ಆಗಸದಲ್ಲೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ವಾಯು ರಕ್ಷಣಾ ವ್ಯವಸ್ಥೆಯ ಪ್ರತಿ ಪ್ರಯೋಗವೂ ಬಹಳ ಸಂಕೀರ್ಣ ಕಾರ್ಯಾಚರಣೆ ಪ್ರಯತ್ನ. ಕೋವಿಡ್ ಕಾರಣದ ಮಿತಿಗಳು ಈ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಬೋಯಜ್ ಲೆವಿ ಹೇಳಿದ್ದಾರೆ.

Follow Us:
Download App:
  • android
  • ios