ಇದೇ ಮೊದಲ ಬಾರಿಗೆ ಕೆಂಪು ಕೋಟೆ ಮೇಲೆ ಬುಲೆಟ್ ಪ್ರೂಫ್ ಬಾಕ್ಸ್‌ನಲ್ಲಿ ನಿಂತು ಮೋದಿ ಭಾಷಣ?
ಆಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಈ ಬಾರಿ ಹಲವು ವಿಶೇಷ ಕಾರ್ಯಕ್ರಮಗಳ ಜೊತೆಗೆ ಆಚರಿಸುತ್ತಿದೆ. ಆಗಸ್ಟ್ 15 ರಂದು ಮೋದಿ ಧ್ವಜಾರೋಹಣ ಮಾಡಿ ಕೆಂಪು ಕೋಟೆ ಮೇಲೆ ಭಾಷಣ ಮಾಡುತ್ತಾರೆ. ಆದರೆ ಈ ಬಾರಿ ಮೋದಿ ಭಾಷಣದಲ್ಲಿ ಕೆಲ ಬದಲಾವಣೆಗಳಿವೆ.
ನವದೆಹಲಿ(ಆ.12): ಸ್ವಾತಂತ್ರ್ಯ ದಿನಾಚರಣೆಗೆ ಕೆಲ ದಿನಗಳು ಮಾತ್ರ ಬಾಕಿ. ಇಡೀ ದೇಶ ಅಜಾದಿ ಕಾ ಅಮೃತಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ. ಆಗಸ್ಟ್15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಬುಲೆಟ್ ಪ್ರೂಫ್ ಬಾಕ್ಸ್ ಒಳಗೆ ನಿಂತು ಭಾಷಣ ಮಾಡುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದರು. ಬಳಿಕ ಮೋದಿ ಯಾವುದೇ ಬುಲೆಟ್ ಪ್ರೂಫ್ ಬಾಕ್ಸ್ ಇಲ್ಲದೆ ಭಾಷಣ ಪದ್ದತಿ ಆರಂಭಿಸಿದ್ದರು. ಇಷ್ಟೇ ಅಲ್ಲ ಭಾಷಣ ಮುಗಿದ ಮೇಲೆ ಭದ್ರತಾ ನಿಯಮ ಉಲ್ಲಂಘಿಸಿ ಮಕ್ಕಳನ್ನು ಭೇಟಿಯಾಗುವುದು ಮೋದಿ ವಾಡಿಕೆಯಾಗಿತ್ತು. ಆದರೆ ಈ ಬಾರಿ ಕೆಲ ಬದಲಾವಣೆ ಗಾಳಿ ಬೀಸುತ್ತಿದೆ. ಧ್ವಜಾರೋಹಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ಬುಲೆಟ್ ಪ್ರೂಫ್ ಬಾಕ್ಸ್ ಒಳಗೆ ನಿಂತು ಭಾಷಣ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈಗಾಗಲೇ ಕೆಂಪು ಕೋಟೆ ಮೇಲೆ ಬುಲೆಟ್ ಪ್ರೂಫ್ ಗಾಜು ಅಳವಡಿಸಲಾಗುತ್ತಿದೆ.
2014ರಲ್ಲಿ ಪ್ರಧಾನಿಯಾದ ಮೋದಿ, ಜನರ ಜೊತೆ ಉತ್ತಮ ಸಂವಹನ ಹಾಗೂ ಸಂಪರ್ಕಕ್ಕೆ ಬುಲೆಟ್ ಪ್ರೂಫ್ ಗಾಜು ಅಡ್ಡಿಯಾಗಲಿದೆ. ನನ್ನ ದೇಶದ ಜನರೊಂದಿಗೆ ಮುಕ್ತವಾಗಿ ಮಾತನಾಡಲು ಬುಲೆಟ್ ಪ್ರೂಫ್ ರಹಿತ ಭಾಷಣ ಉತ್ತಮ ಎಂದು ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ ಬಳಿಕ ವಿಶ್ವ ನಾಯಕರಿಗೆ ಅದರಲ್ಲೂ ಪ್ರಧಾನಿ ಮೋದಿ ಭದ್ರತೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಮೋದಿ ಯಾವುದೇ ಸಂದರ್ಭದಲ್ಲೂ ಹಾಗೂ ಯಾವುದೇ ಸಮಯದಲ್ಲಿ ಭದ್ರತಾ ನಿಯಮ ಉಲ್ಲಂಘಿಸುವಂತಿಲ್ಲ. ಇಷ್ಟೇ ಅಲ್ಲ ಒಂದು ಸಣ್ಣ ಭದ್ರತಾ ಲೋಪವಾಗದಂತೆ ಎಚ್ಚರಿಕೆ ವಹಿಸಲು ಭದ್ರತಾ ತಂಡ ನಿರ್ಧರಿಸಿದೆ. ಇದರ ಜೊತೆಗೆ ಈ ಬಾರಿ ಅಜಾದಿಕಾ ಅಮೃತ ಮಹೋತ್ಸವ ಆಚರಣೆಯಾಗಿರುವ ಕಾರಣ ಬೆದರಿಕೆ ಕೂಡ ಹೆಚ್ಚಾಗಿದೆ. ಹೀಗಾಗಿ ಮೋದಿ ಭದ್ರತಾ ಪಡೆ ಬುಲೆಟ್ ಪ್ರೂಫ್ ಗಾಡಿನೊಳಗೆ ಭಾಷಣ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಅಜಾದಿಕಾ ಅಮೃತ ಮಹೋತ್ಸವ, ಮಕ್ಕಳ ಜೊತೆ ತಿರಂಗ ಹಾರಿಸಿದ ಪ್ರಧಾನಿ ಮೋದಿ!
ಸಿಬ್ಬಂಧಿಗಳು ಈಗಾಗಲೇ ಬುಲೆಟ್ ಪ್ರೂಫ್ ಬಾಕ್ಸ್ ಅಳವಡಿಸು ಫೋಟೋ ವೈರಲ್ ಆಗಿದೆ. ಆದರೆ ಈ ಗಾಜಿನೊಳಗೆ ನಿಂತು ಮೋದಿ ಭಾಷಣ ಮಾಡುತ್ತಾರೆಯೇ? ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಪ್ರಧಾನಿ ಮೋದಿ ಕಾರ್ಯಾಲಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಸರ್ಕಾರದ ಕಾರ್ಯಕ್ರಮ, ಚುನಾವಣಾ ರ್ಯಾಲಿ ಸೇರಿದಂತೆ ಮೋದಿಯ ಯಾವುದೇ ಕಾರ್ಯಕ್ರಮದಲ್ಲಿ ಬುಲೆಟ್ ಪ್ರೂಫ್ ಗಾಜಿನ ಬಾಕ್ಸ್ ಬಳಸಿಲ್ಲ. ಆದರೆ ಈ ಬಾರಿ ಬಳಸುವ ಸಾಧ್ಯತೆಗಳು ಕಾಣಿಸುತ್ತಿದೆ.
ಹಂಪಿಯ ಸ್ಮಾರಕಗಳಲ್ಲಿ ಕಣ್ಮನ ಸೆಳೆಯುವ ತ್ರಿವರ್ಣ ಬೆಳಕಿನ ಚಿತ್ತಾರ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ಪ್ರಧಾನ ಮಂತ್ರಿಗಳು ಬುಲೆಟ್ ಪ್ರೂಫ್ ಗಾಜಿನ ಬಾಕ್ಸ್ ಒಳಗಡೆ ಭಾಷಣ ಮಾಡುವ ಸಂಪ್ರದಾಯ ಜಾರಿಗೆ ಬಂದಿತ್ತು. ಪ್ರಧಾನಿ ಸುರಕ್ಷತೆಗಾಗಿ ಅಂದಿನ ಭದ್ರತಾ ಪಡೆ ಸೂಚಿಸಿದ ಸುಲಭ ಮಾರ್ಗೋಪಾಯವಾಗಿತ್ತು. 1985ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರಾಜೀವ್ ಗಾಂಧಿ ಭಾಷಣಕ್ಕೆ ಬುಲೆಟ್ ಪ್ರೂಫ್ ಗಾಜಿನ ಬಾಕ್ಸ್ ಬಳಸಲಾಯಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಪಿವಿ ಸಿಂಗ್, ಪಿವಿ ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಮನ್‌ಮೋಹನ್ ಸಿಂಗ್ ಸೇರಿದಂತೆ ಭಾರತದ ಪ್ರಧಾನಿಗಳು ಬುಲೆಟ್ ಪ್ರೂಫ್ ಗಾಜಿನ ಬಾಕ್ಸ್ ಬಳಸಿದ್ದಾರೆ. ಆದರೆ ಮೋದಿ ತೆರೆದ ಸಭಾಂಗಣದಲ್ಲಿ ಭಾಷಣ ಮಾಡುವ ಧೈರ್ಯ ತೋರಿಸಿದ್ದರು.