Asianet Suvarna News Asianet Suvarna News

ದೇಶದಲ್ಲಿ 30 ಸಾವಿರದ ಗಡಿ ದಾಟಿದ ವೈರಸ್‌!

30 ಸಾವಿರದ ಗಡಿ ದಾಟಿದ ವೈರಸ್‌| ದೇಶದಲ್ಲಿ ಸೋಂಕಿತರ ಸಂಖ್ಯೆ 11 ದಿನದಲ್ಲಿ ಡಬಲ್‌| 22 ದಿನದಲ್ಲಿ 25 ಸಾವಿರ ಮಂದಿಗೆ ಕೊರೋನಾ| 30 ಸಾವಿರಕ್ಕೂ ಅಧಿಕ ಸೋಂಕಿತರಿರುವ ವಿಶ್ವದ 15ನೇ ದೇಶ ಭಾರತ| 1 ಸಾವಿರದತ್ತ ಸಾವಿನ ಸಂಖ್ಯೆ

India Inches Closer To 30000 Cases Total Deaths 937
Author
Bangalore, First Published Apr 29, 2020, 8:46 AM IST

ನವದೆಹಲಿ(ಏ.29): ಲಾಕ್‌ಡೌನ್‌ ಜಾರಿಯಲ್ಲಿದ್ದರೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಮಂಗಳವಾರ ಒಂದೇ ದಿನ 1123 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿ 30,245ಕ್ಕೆ ಏರಿಕೆಯಾಗಿದೆ. 30 ಸಾವಿರಕ್ಕೂ ಅಧಿಕ ಕೊರೋನಾ ವೈರಸ್‌ ಪ್ರಕರಣಗಳನ್ನು ಹೊಂದಿರುವ ವಿಶ್ವದ 15ನೇ ದೇಶ ಭಾರತವಾಗಿದೆ.

ರಾಜ್ಯದಲ್ಲಿ ಮತ್ತೆ 11 ಮಂದಿಗೆ ಕೊರೋನಾ, 14 ಮಂದಿ ಗುಣ!

ಈ ನಡುವೆ, ದೇಶದ ವಿವಿಧೆಡೆ ಈ ವೈರಸ್‌ಗೆ ಮಂಗಳವಾರ 37 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೋನಾಗೆ ಸಾವಿಗೀಡಾದವರ ಸಂಖ್ಯೆ 967ಕ್ಕೇರಿಯಾಗಿದ್ದು, 1000ದ ಗಡಿಗೆ ಸನಿಹದಲ್ಲಿದೆ.

ಈವರೆಗೆ ಕೊರೋನಾ ವೈರಸ್‌ ಪರೀಕ್ಷೆಗೆ ಒಳಗಾದ ಪ್ರತಿ 21 ಮಂದಿಯಲ್ಲಿ ಸರಾಸರಿ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಪ್ರತಿ 30 ಸೋಂಕಿತರಲ್ಲಿ ಸರಾಸರಿ ಒಬ್ಬರು ಸಾವಿಗೀಡಾಗುತ್ತಿದ್ದಾರೆ. ಪ್ರತಿ ನಾಲ್ಕರಲ್ಲಿ ಸರಾಸರಿ ಒಬ್ಬ ರೋಗಿ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ ಎಂದು ಅಂಕಿ- ಅಂಶಗಳಿಂದ ತಿಳಿದುಬಂದಿದೆ.

ಈವರೆಗೆ 7,026 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿರುವುದರಿಂದ ದೇಶದಲ್ಲಿ ಈಗ 22,010 ಸಕ್ರಿಯ ಪ್ರಕರಣಗಳಿವೆ. ವಿಶ್ವದಲ್ಲಿ ಅತಿಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ದಾಖಲಾದ 20 ದೇಶಗಳಲ್ಲಿ ಸಾವಿನ ಪ್ರಮಾಣ ಭಾರತಕ್ಕಿಂತ 200 ಪಟ್ಟು ಅಧಿಕ ಹಾಗೂ ಸೋಂಕಿನ ಪ್ರಮಾಣ 84 ಪಟ್ಟು ಅಧಿಕವಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌ ತಿಳಿಸಿದ್ದಾರೆ.

BMTCಯಿಂದಲೇ ಕೊರೋನಾ ಸೋಂಕು ಹರಡುವ ಆತಂಕ!

ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಅತ್ಯಧಿಕ 8,500 ಪ್ರಕರಣಗಳು ಮತ್ತು 369 ಸಾವು ಸಂಭವಿಸಿದ್ದರೆ, ಗುಜರಾತಿನಲ್ಲಿ 3,700 ಪ್ರಕರಣಗಳು, ದೆಹಲಿಯಲ್ಲಿ 3100 ಪ್ರಕರಣಗಳು ದೃಢಪಟ್ಟಿವೆ. ಇನ್ನು ರಾಜಸ್ಥಾನ, ಮಧ್ಯ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶಗಳಲ್ಲಿ 2000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾನಗರಗಳ ಪೈಕಿ ಮುಂಬೈ ಒಂದರಲ್ಲೇ 393 ಪ್ರಕರಣಗಳು ವರದಿ ಆಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5,982ಕ್ಕೆ ಏರಿಕೆ ಆಗಿದೆ. ಮುಂಬೈನಲ್ಲಿ ಮಂಗಳವಾರ ಒಂದೇ ದಿನ 25 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 244ಕ್ಕೆ ಏರಿಕೆ ಆಗಿದೆ.

Follow Us:
Download App:
  • android
  • ios