Asianet Suvarna News Asianet Suvarna News

ದೇಶದಲ್ಲಿ ಮುದ್ರಣವಾಗಿತ್ತು 'ಶೂನ್ಯ' ರೂಪಾಯಿ ನೋಟು: ಇದರ ಹಿಂದಿನ ಮರ್ಮವೇನು ಗೊತ್ತಾ?

Zero Rupee Note: ದೇಶದಲ್ಲಿ ಶೂನ್ಯ ರೂಪಾಯಿ ನೋಟು ಕೂಡ ಮುದ್ರಣಗೊಂಡಿತ್ತು ಎಂದರೆ ನೀವು ನಂಬುತ್ತೀರಾ?  ಈ ನೋಟಿನ ಹಿಂದಿನ ಇತಿಹಾಸವೇನು? ಇಲ್ಲಿದೆ ಮಾಹಿತಿ 

India has Zero Rupee note to fight against corruption know all about it mnj
Author
Bengaluru, First Published Jul 31, 2022, 10:17 PM IST

1 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗಿನ ನೋಟುಗಳನ್ನು ನೀವು ಸಾಮಾನ್ಯವಾಗಿ ನೋಡಿರುತ್ತಿರಿ. ನಾವೆಲ್ಲರೂ ನಮ್ಮ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುದ್ರಿಸಿದ ಈ ನೋಟುಗಳನ್ನು ಬಳಸುತ್ತೇವೆ. ಆದರೆ  ದೇಶದಲ್ಲಿ ಶೂನ್ಯ ರೂಪಾಯಿ ನೋಟು ಕೂಡ ಮುದ್ರಣಗೊಂಡಿತ್ತು ಎಂದರೆ ನೀವು ನಂಬುತ್ತೀರಾ?  ಯಸ್‌ ಈ ಶೂನ್ಯ ರೂಪಾಯಿ ನೋಟಿನ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಅದರ ಬಗ್ಗೆ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು. ಈ ನೋಟಿನ ಹಿಂದಿನ ಇತಿಹಾಸವೇನು? ಇಲ್ಲಿದೆ ಮಾಹಿತಿ 

ಶೂನ್ಯ ರೂಪಾಯಿ ನೋಟು ಮುದ್ರಿಸಿದ್ದು ಏಕೆ?: ಶೂನ್ಯ ರೂಪಾಯಿ ನೋಟಿನ ಮೇಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಮುದ್ರಿಸಲಾಗಿದೆ. ಇದು ಇತರ ನೋಟುಗಳಂತೆಯೇ ಕಾಣುತ್ತದೆ. ಆದರೆ ಈಗ ಶೂನ್ಯ ರೂಪಾಯಿ ನೋಟುಗಳನ್ನು ಏಕೆ ಮುದ್ರಿಸಲಾಯಿತು?  ಈ ನೋಟುಗಳು ಉಪಯೋಗವಾದರೇನು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿರಬಹುದು. ವಾಸ್ತವವಾಗಿ  ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೋಟುಗಳನ್ನು ಮುದ್ರಿಸಿಲ್ಲ. ಭ್ರಷ್ಟಾಚಾರದ ವಿರುದ್ಧದ ಅಭಿಯಾನವಾಗಿ ಈ ನೋಟು ಮುದ್ರಿಸಲಾಗಿತ್ತು. 

ಈ ಶೂನ್ಯ ರೂಪಾಯಿ ನೋಟನ್ನು ಮುದ್ರಿಸುವ ಆಲೋಚನೆ ದಕ್ಷಿಣ ಭಾರತದ ಎನ್‌ಜಿಒನಿಂದ ಬಂದಿದೆ. 2007 ರಲ್ಲಿ, ಈ ನೋಟನ್ನು ಭ್ರಷ್ಟಾಚಾರದ ವಿರುದ್ಧದ ಅಸ್ತ್ರವಾಗಿ ಬಳಸಲಾಗಿತ್ತು. ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಎನ್‌ಜಿಒ ಸುಮಾರು 5 ಲಕ್ಷ ಶೂನ್ಯ ರೂಪಾಯಿ ನೋಟುಗಳನ್ನು ಮುದ್ರಿಸಿತ್ತು. ಈ ನೋಟುಗಳನ್ನು ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ, ಒಟ್ಟು ನಾಲ್ಕು ಭಾಷೆಗಳಲ್ಲಿ ಮುದ್ರಿಸಿ ಜನರಲ್ಲಿ ವಿತರಿಸಲಾಯಿತು.

ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ದುಡ್ಡು ನೀಡ್ತಿದ್ದ ಎಟಿಎಂ ಮುಂದೆ ಮುಗಿಬಿದ್ದ ಜನ

ನೋಟುಗಳು ಮೇಲೆ ಬರೆಯಲಾಗಿತ್ತು ವಿಶೇಷ ಸಂದೇಶ: ಭ್ರಷ್ಟಾಚಾರದ ವಿರುದ್ಧ ಹಲವು ಸಂದೇಶಗಳನ್ನು ಈ  ನೋಟುಗಳಲ್ಲಿ ಬರೆಯಲಾಗಿತ್ತು. ಈ ನೋಟುಗಳಲ್ಲಿ 'ಭ್ರಷ್ಟಾಚಾರವನ್ನು ಕೊನೆಗಾಣಿಸಿ', 'ಯಾರಾದರೂ ಲಂಚ ಕೇಳಿದರೆ, ಈ ನೋಟು ನೀಡಿ ಮತ್ತು ವಿಷಯದ ಬಗ್ಗೆ ನಮಗೆ ತಿಳಿಸಿ' ಎಂದು ಬರೆಯಲಾಗಿತ್ತು. ನಾನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ. ಈ ನೋಟಿನಲ್ಲಿ ಎನ್‌ಜಿಓನ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೋಟಿನ ಕೆಳಗೆ ನೀಡಲಾಗಿತ್ತು.ಸ್ವಯಂ ಸೇವಾ ಸಂಸ್ಥೆಯೇ ಈ ಶೂನ್ಯ ರೂಪಾಯಿ ನೋಟನ್ನು ತಯಾರಿಸಿ ಲಂಚ ಕೇಳಿದವರಿಗೆ ನೀಡುತ್ತಿತ್ತು. ಶೂನ್ಯ ರೂಪಾಯಿ ನೋಟು ಭ್ರಷ್ಟಾಚಾರದ ವಿರುದ್ಧದ ಸಂಕೇತವಾಗಿತ್ತು. 

Follow Us:
Download App:
  • android
  • ios