Asianet Suvarna News

ದೇಶದಲ್ಲಿ 27 ಸಾವಿರ ಬ್ಲ್ಯಾಕ್‌ ಫಂಗಸ್‌ ಸಕ್ರಿಯ ಕೇಸು!

* ಕೊರೋನಾ ಬೆನ್ನಲ್ಲೇ ಬ್ಲ್ಯಾಕ್‌ ಫಂಗಸ್ ಕಂಟಕ

* ದೇಶದಲ್ಲಿ 27 ಸಾವಿರ ಬ್ಲ್ಯಾಕ್‌ ಫಂಗಸ್‌ ಸಕ್ರಿಯ ಕೇಸು

* ಇದಕ್ಕೆ ಬೇಕಾದ ಔಷಧ ಉತ್ಪಾದನೆ 5 ಪಟ್ಟು ಹೆಚ್ಚಳ

India grapples with over 27000 active black fungus cases pod
Author
Bangalore, First Published Jun 19, 2021, 11:12 AM IST
  • Facebook
  • Twitter
  • Whatsapp

ನವದೆಹಲಿ(ಜೂ.19): ದೇಶದಲ್ಲಿ ಈಗ 27,142 ಸಕ್ರಿಯ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳಿವೆ ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಮನಸುಖ್‌ ಮಾಂಡವೀಯ ಶುಕ್ರವಾರ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಚಿಕಿತ್ಸೆಗೆ ಬೇಕಾದ ಆ್ಯಂಫೋಟೆರಿಸಿನ್‌ ಬಿ ಲಭ್ಯತೆಯನ್ನು ಹೆಚ್ಚಿಸಲಾಗುತ್ತಿದೆ. ಈಗಾಗಲೇ ಇದರ ಉತ್ಪಾದನೆಯನ್ನು ದೇಶದಲ್ಲಿ 5 ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಇದರ ಉತ್ಪಾದನೆ ಕೇವಲ 62 ಸಾವಿರ ವಯಲ್‌ಗಳಾಗಿದ್ದವು. ಜೂನ್‌ ವೇಳೆಗೆ ಅದನ್ನು 3.75 ಲಕ್ಷ ವಯಲ್‌ಗೆ ಹೆಚ್ಚಿಸಲಾಗಿದೆ. ಈ ಔಷಧಿಯ ಲಭ್ಯತೆ ಯಾವತ್ತೂ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ಸಷ್ಟಪಡಿಸಿದ್ದಾರೆ.

ಈಗಾಗಲೇ ಔಷಧ ಇಲಾಖೆಯು 7,28,045 ಆ್ಯಂಫೋಟೆರಿಸಿನ್‌ ವಯಲ್‌ಗಳನ್ನು ಜೂ.17ರವರೆಗೆ ರಾಜ್ಯಗಳಿಗೆ ಹಾಗೂ ಕೇಂದ್ರೀಯ ಆಸ್ಪತ್ರೆಗಳಿಗೆ ಕಳಿಸಿಕೊಟ್ಟಿದೆ ಎಂದು ಸಚಿವರು ವಿವರಿಸಿದ್ದಾರೆ.

Follow Us:
Download App:
  • android
  • ios