ಫಲಿತಾಂಶ ಹೊರಬೀಳೋದೊಂದೇ ಬಾಕಿ: ಕೇಜಿಗಟ್ಟಲೇ ಲಡ್ಡಿನೊಂದಿಗೆ ಸಂಭ್ರಮಾಚರಣೆಗೆ ಕಾಯ್ತಿರುವ ಬಿಜೆಪಿಗರು
ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ತಂದುಕೊಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಫಲಿತಾಂಶಕ್ಕೂ ಮೊದಲೇ ಗೆಲುವಿನ ಸಂಭ್ರಮಾಚರಣೆಗಾಗಿ 200 ಕೇಜಿಗೂ ಅಧಿಕ ಲಡ್ಡು ಆರ್ಡರ್ ಮಾಡಿದ್ದಾರೆ
ಛತ್ತೀಸ್‌ಗಢ: ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ತಂದುಕೊಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಫಲಿತಾಂಶಕ್ಕೂ ಮೊದಲೇ ಗೆಲುವಿನ ಸಂಭ್ರಮಾಚರಣೆಗಾಗಿ 200 ಕೇಜಿಗೂ ಅಧಿಕ ಲಡ್ಡು ಆರ್ಡರ್ ಮಾಡಿದ್ದಾರೆ. ರಾಯ್‌ಪುರದ ಬಿಜೆಪಿ ಘಟಕ ಕಾರ್ಯಕರ್ತರು ಹಾಗೂ ನಾಯಕರಿಗೆ ಹಂಚುವುದಕ್ಕಾಗಿ ವಿವಿಧ 11 ಬಗೆಯ 200 ಕೇಜಿಗೂ ಅಧಿಕ ಸಿಹಿ ತಿನಿಸುಗಳಿಗೆ ಆರ್ಡರ್ ನೀಡಿದ್ದು, ಎಲ್ಲವೂ ಈಗ ಫಲಿತಾಂಶ ಹೊರಬೀಳುವುದಕ್ಕಷ್ಟೇ ಕಾತುರದಿಂದ ಕಾಯುವಂತಿದೆ.
ನಾವು 201 ಕೆಜಿ ಲಡ್ಡುಗಳನ್ನು ವಿತರಿಸುವ ಗುರಿಯನ್ನು ಹೊಂದಿದ್ದೇವೆ 11 ವಿವಿಧ ಬಗೆಯ ಲಡ್ಡುಗಳನ್ನು ಆರ್ಡರ್ ಮಾಡಿದ್ದೇವೆ. ಇಂದು ಮಧ್ಯಾಹ್ನದಿಂದ ರಾತ್ರಿ 11 ರವರೆಗೆ ಲಡ್ಡುಗಳನ್ನು ವಿತರಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲಲಿತ್ ಜೈ ಸಿಂಗ್ ಸುದ್ದಿಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ. ಬೇಸನ್ ಲಡ್ಡು, ಕಡ್ಲೆ ಹಿಟ್ಟಿನ ಲಡ್ಡು, ತೆಂಗಿನಕಾಯಿ ಲಡ್ಡು, ಚಾಕೊಲೇಟ್ ಲಡ್ಡು, ಬೂಂದಿಯಿಂದ ಮಾಡಿದ ಲಡ್ಡು ಸೇರಿದಂತೆ ಒಟ್ಟು ಹನ್ನೊಂದು ಬಗೆಯ ಲಡ್ಡುಗಳನ್ನು ಆರ್ಡರ್ ಮಾಡಿದ್ದೇವೆ ಎಂದ ಲಲಿತ್ ಜೈ ಸಿಂಗ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ; ಅದಾನಿ ಸಮೂಹದ ಎಲ್ಲಾ ಷೇರುಗಳಲ್ಲಿ ಇಳಿಕೆ
ಪ್ರಧಾನಿ ಮೋದಿ ಅವರು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದಾರೆ. ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಮತ್ತು ಆರಾಮದಾಯಕ ಬಹುಮತದೊಂದಿಗೆ ಬಿಜೆಪಿ ಗೆಲ್ಲುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಲೋಕಸಭಾ ಫಲಿತಾಂಶಕ್ಕೂ ಮೊದಲು ಜೈಪುರದ ಬಿಜೆಪಿ ಪ್ರಧಾನ ಕಚೇರಿಯನ್ನು ಲೈಟಿಂಗ್ಸ್‌ನಿಂದ ಅಲಂಕರಿಸಲಾಗಿದೆ. ಇದರ ಜೊತೆಗೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯನ್ನು ಕೂಡ ಎಣಿಕೆ ದಿನಕ್ಕೂ ಮುಂಚಿತವಾಗಿ ಶೃಂಗರಿಸಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 11 ಸೀಟುಗಳಲ್ಲಿ 9 ರಲ್ಲಿ ಗೆಲುವು ಸಾಧಿಸಿತ್ತು.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (NDA) ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಹ್ಯಾಟ್ರಿಕ್ ಗೆಲುವಿಗೆ ಸಿದ್ಧವಾಗಿದೆ, ಶನಿವಾರ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳು, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಹಲವು ರಾಜ್ಯಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂಬುದನ್ನ ಸೂಚಿಸಿದೆ.
ಎರಡೂ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡ ರಾಹುಲ್ ಗಾಂಧಿ