Asianet Suvarna News Asianet Suvarna News

ಜಮ್ಮು-ಕಾಶ್ಮೀರದಲ್ಲಿ ದೇಶದ ಮೊದಲ ಮಂಜಿನ ಕೆಫೆ ಆರಂಭ!

ಕೊರೋನಾ ಹೆಮ್ಮಾರಿಯಿಂದಾಗಿ ಅತಿ ಹೆಚ್ಚು ನಷ್ಟಅನುಭವಿಸಿದ್ದು ಪ್ರವಾಸೋದ್ಯಮ|  ಪ್ರವಾಸಿಗರನ್ನು ಆಕರ್ಷಿಸಲು ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ ರೆಸಾರ್ಟ್‌ವೊಂದು ದೇಶದ ಮೊಟ್ಟಮೊದಲ ಮಂಜಿನ ಕೆಫೆ (ಇಗ್ಲೋ ಕೆಫೆ)ಯನ್ನು ತೆರೆದಿದೆ

India First Igloo Cafe Opens In Kashmir And Twitter Is Loving It pod
Author
Bangalore, First Published Jan 30, 2021, 8:50 AM IST

ಜಮ್ಮು-ಕಾಶ್ಮೀರ(ಜ.30): ಕೊರೋನಾ ಹೆಮ್ಮಾರಿಯಿಂದಾಗಿ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಪ್ರವಾಸೋದ್ಯಮ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ ರೆಸಾರ್ಟ್‌ವೊಂದು ದೇಶದ ಮೊಟ್ಟಮೊದಲ ಮಂಜಿನ ಕೆಫೆ (ಇಗ್ಲೋ ಕೆಫೆ)ಯನ್ನು ತೆರೆದಿದೆ.

ಇದು ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. 15 ಅಡಿ ಎತ್ತರ, 26 ಅಡಿ ಅಗಲ ಇರುವ ಈ ಇಗ್ಲೋ ಕೆಫೆ ಸಂಪೂರ್ಣವಾಗಿ ಹಿಮಗಡ್ಡೆಯಿಂದಲೇ ನಿರ್ಮಾಣವಾಗಿದ್ದು, ಕೂರುವ ಟೇಬಲ್‌ಗಳನ್ನೂ ಮಂಜಿನಿಂದಲೇ ನಿರ್ಮಿಸಲಾಗಿದೆ. ಪುಟ್ಟ ಗುಡಿಸಲಿನಂತಿರುವ ಕೆಫೆಯಲ್ಲಿ ನಾಲ್ಕು ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಗರಿಷ್ಠ 16 ಜನರು ಒಟ್ಟಿಗೆ ಕೂರಬಹುದಾಗಿದೆ.

ಚುಮುಚಮು ಚಳಿಯಲ್ಲಿ ಕೆಫೆಗೆ ಬರುವ ಗ್ರಾಹಕರಿಕೆ ಬಿಸಿ ಬಿಸಿ ಆಹಾರ ನೀಡಿ ಆಕರ್ಷಿಕಸಲಾಗುತ್ತಿದೆ. ಸೋಷಿಯಲ್‌ ಮೀಡಿಯಾ ಪೋಸ್ಟ್‌ ನೋಡಿ ಧಾವಿಸುತ್ತಿರುವ ಪ್ರವಾಸಿಗರು ವಿಭಿನ್ನ ಕೆಫೆ ಕಂಡು ಖುಷಿಯಾಗಿದ್ದಾರೆ.

Follow Us:
Download App:
  • android
  • ios