ತಿರುವನಂತಪುರ(ಮೇ.02): ಭಾರತದ ಮೊದಲ ಕೊರೋನಾ ಸೋಂಕಿತ ವಿದ್ಯಾರ್ಥಿನಿ ಸದ್ಯ ಸಂಪೂರ್ಣ ಗುಣಮುಖರಾಗಿದ್ದು, ವ್ಯಾಸಂಗಕ್ಕಾಗಿ ಮತ್ತೆ ಚೀನಾಗೆ ಹೋಗುವ ತವಕದಲ್ಲಿದ್ದಾರೆ.

ಯುನಿವರ್ಸಿಟಿ ಆಫ್‌ ವುಹಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಸೆಮಿಸ್ಟರ್‌ ರಜೆ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಿದ್ದರು. ಆದರೆ ಜನವರಿ 30ರಂದು ಆಕೆಗೆ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಅನಂತರ ಮೂರು ವಾರಗಳ ಕಾಲ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿ ಫೆ.20ರಂದು ಡಿಸ್ಚಾಜ್‌ರ್‍ ಆಗಿದ್ದಾರೆ.

ವಲಸಿಗರ ಸಾಗಣೆಗೆ ‘ಶ್ರಮಿಕ್‌ ಸ್ಪೆಷಲ್‌’ ರೈಲು!

ಅನಂತರ ವುಹಾನ್‌ ಯುನಿವರ್ಸಿಟಿಯ ಆನ್‌ಲೈನ್‌ ತರಗತಿಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿನಿ, ಕೊರೋನಾ ವೈರಸ್‌ ತೊಲಗಿ ಎಲ್ಲವೂ ಮತ್ತೆ ಮೊದಲಿನಂತಾದರೆ ಚೀನಾಕ್ಕೆ ಮರಳಿ ಹೋಗಲು ಕಾತುರಳಾಗಿದ್ದೇನೆ ಎಂದಿದ್ದಾರೆ.

‘ಚೀನಾದಿಂದ ಬರುವ ವೇಳೆಗೆ 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಕಡ್ಡಾಯವಾಗಿ ಸೂಚಿಸಲಾಗಿತ್ತು. ಆರೋಗ್ಯ ಅಧಿಕಾರಿಗಳು ನಿತ್ಯ ಆರೋಗ್ಯ ಸ್ಥಿತಿಗತಿ ಬಗ್ಗೆ ವಿಚಾರಿಸುತ್ತಿದ್ದರು. ಜ.27ರಂದು ಒಣ ಕೆಮ್ಮು, ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಮಾಹಿತಿ ನೀಡಿದೆ.

ಕೈ ತುಂಡಾಗಿದ್ದ ಪಂಜಾಬ್‌ ಎಸ್‌ಐಗೆ ಅದ್ಧೂರಿ ಸ್ವಾಗತ; ಸ್ವತಃ ಮನೆಗೆ ಬಂದ ಡಿಜಿಪಿ!

ತತ್‌ಕ್ಷಣವೇ ಬಂದು ಆಸ್ಪತ್ರೆಗೆ ಕರೆದೊಯ್ದರು. ನನಗೆ ಕೊರೋನಾ ಪಾಸಿಟಿವ್‌ ಫಲಿತಾಂಶ ಬರುವ ವೇಳೆಗೆ ಜಗತ್ತಿನ ಹಲವಾರು ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದರು. ಹಾಗಾಗಿ ನಾನು ಭಯ ಬೀಳಲಿಲ್ಲ. ಅದರ ಜೊತೆಗೆ ನಮ್ಮ ಆರೋಗ್ಯ ವ್ಯವಸ್ಥೆಯು ಅತ್ಯುತ್ತಮವಾಗಿದ್ದರಿಂದ ಶೀಘ್ರ ಗುಣಮುಖಳಾದೆ’ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.