* ದೇಶದ ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆ* ಜುಲೈ - ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿದ್ಯುತ್ ಬಿಕ್ಕಟ್ಟು: ಸಿಆರ್‌ಇಎ* ಕಲ್ಲಿದ್ದಲು ಸಂಗ್ರಹ ಕೊರತೆ ಕಾರಣದಿಂದಾಗಿ ಈ ಸಮಸ್ಯೆ
ನವದೆಹಲಿ(ಮೇ.30): ಮುಂಗಾರು ಪೂರ್ವ ಸಮಯದಲ್ಲಿ ದೇಶದ ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆ ಇರುವ ಕಾರಣ, ಮುಂಬರುವ ಜುಲೈ, ಆಗಸ್ಟ್ ತಿಂಗಳಿನಲ್ಲಿ ದೇಶದಲ್ಲಿ ಮತ್ತೊಮ್ಮೆ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ‘ಸೆಂಟರ್ ಫಾರ್ ರಿಸಚ್‌ರ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ಸ್’ (ಸಿಆರ್‌ಇಎ) ಹೇಳಿದೆ.
ಪ್ರಸಕ್ತ, ಗಣಿ ಪ್ರದೇಶಗಳ ಬಳಿಯೇ ಇರುವ ಸ್ಥಾವರಗಳಲ್ಲಿ 1.35 ಕೋಟಿ ಟನ್ ಮತ್ತು ಒಟ್ಟಾರೆ 20.7 ಮೆಟ್ರಿಕ್ ಟನ್‌ಗಳಷ್ಟುಕಲ್ಲಿದ್ದಲು ಸಂಗ್ರಹವಿದೆ. ಇಂಥ ಸ್ಥಿತಿಯಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಸಣ್ಣ ಏರಿಕೆ ದಾಕಲಾದರೂ ಅದನ್ನು ನಿರ್ವಹಿಸುವ ಸ್ಥಿತಿಯಲ್ಲಿ ಸ್ಥಾವರಗಳು ಇಲ್ಲ. ಆಗಸ್ಟ್‌ನಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಗರಿಷ್ಠ 214 ಗಿಗಾವ್ಯಾಟ್‌ಗೆ ತಲುಪಬಹುದು. ಜೊತೆಗೆ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ಬೇಸಿಗೆ ಸಮಯವಾದ ಮೇನಲ್ಲಿ ಇದ್ದ 1,33,426 ದಶಲಕ್ಷ ಯುನಿಟ್‌ಗಳಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಈಗಾಗಲೇ ಭಾರತೀಯ ವಿದ್ಯುತ್ ಪ್ರಾಧಿಕಾರ ಹೇಳಿದೆ ಎಂದು ಸಿಆರ್‌ಇಎ ವರದಿ ಹೇಳಿದೆ.
‘ಸಂಭಾವ್ಯ ಸಮಸ್ಯೆಯನ್ನು ಎದುರಿಸಲು ವಿದ್ಯುತ್ ಸ್ಥಾವರಗಳಿಗೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಕೆ ಮಾಡಬೇಕಾದ ಅಗತ್ಯ ಇದೆ. ನೈಋುತ್ಯ ಮುಂಗಾರು ಕಲ್ಲಿದ್ದಲು ಗಣಿಗಳು ಮತ್ತು ಸಾಗಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಕಲ್ಲಿದ್ದಲನ್ನು ಭರ್ತಿ ಮಾಡದೇ ಇದ್ದರೇ, ವಿದ್ಯುತ್ ಸಮಸ್ಯೆ ಕಾಡಲಿದೆ ಎಂದು ಸಿಆರ್‌ಇಎ ಹೇಳಿದೆ.
