Asianet Suvarna News Asianet Suvarna News

ವಿದೇಶದಿಂದ ಆಕ್ಸಿಜನ್ ಕಂಟೈನರ್ ಆಗಮನ; ತಕ್ಷಣವೇ ದೆಹಲಿ ಸೇರಿ ಉತ್ತರ ಭಾರತಕ್ಕೆ ರವಾನೆ!

ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ಆಕ್ಸಿಜನ್ ಕಂಟೈನರ್, ವೈದ್ಯಕೀಯ ಸಲಕರಣೆಗಳನ್ನು ದೇಶದಲ್ಲಿನ ಅತೀ ಅಗತ್ಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India effectively Allocate COVID 19 supplies received from Global Community ckm
Author
Bengaluru, First Published May 4, 2021, 3:57 PM IST

ನವದೆಹಲಿ(ಮೇ.04): ಕೊರೋನಾ ವೈರಸ್ ಸ್ಥಿತಿಗೆ ದೇಶವೇ ತತ್ತರಿಸಿದೆ. ಆಕ್ಸಿಜನ್ ಸಮಸ್ಯೆ, ಐಸಿಯು ಬೆಡ್ ಸಮಸ್ಯೆ, ಲಸಿಕೆ, ಔಷಧಿ ಸೇರಿದಂತೆ ಭಾರತದ ಆರೋಗ್ಯ ಕ್ಷೇತ್ರ ಒಂದರ ಮೇಲೊಂದರಂತೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಸೋಂಕಿತರ ಚಿಕಿತ್ಸೆ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಕೇಂದ್ರ ಸರ್ಕಾರ  ವಿದೇಶಗಳಿಂದ ಆಕ್ಸಿಜನ್, ವೈದ್ಯಕೀಯ ಸಲಕರಣೆ ಆಮದು ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಹಲವು ದೇಶಗಳು ಭಾರತಕ್ಕೆ ನೆರವು ಘೋಷಿಸಿದೆ. ಇದೀಗ ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ಆಕ್ಸಿಜನ್ ಕಂಟೈನರ್‌ಗಳನ್ನು ತಕ್ಷಣವೇ ದೆಹಲಿ ಸೇರಿದಂತೆ ಉತ್ತರ ಭಾರತಕ್ಕೆ ಪೂರೈಕೆ ಮಾಡಲಾಗಿದೆ.

ಕೊರೋನಾ ನಿಯಂತ್ರಣಕ್ಕೆ ನೌಕಾಪಡೆ ಕಾರ್ಯಾಚರಣೆ ಪರಿಶೀಲಿಸಿದ ಪ್ರಧಾನಿ ಮೋದಿ!

ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಹಲವು ದೇಶಗಳು ಭಾರತಕ್ಕೆ ನೆರವು ಹಾಗೂ ಬೆಂಬಲ ಘೋಷಿಸಿದೆ.  ವಿದೇಶಗಳಿಂದ ವೈದ್ಯಕೀಯ ಉಪಕರಣಗಳು, ಔಷಧಿಗಳು, ಆಮ್ಲಜನಕ ಕಂಟೈನರ್, ವೆಂಟಿಲೇಟರ್ ಸೇರಿದಂತೆ ಅನೇಕ ದೇಶಗಳು ಒದಗಿಸುತ್ತಿವೆ. 

ವಿದೇಶಗಳಿಂದ ಆಗಮಿಸಿದ ವೈದ್ಯಕೀಯ ಸಲಕರಣೆಗಳನ್ನು ತ್ವರಿತವಾಗಿ ದೇಶದಲ್ಲಿ ಅತೀ ಅಗತ್ಯವಿರುವ ರಾಜ್ಯ ಹಾಗೂ ಕೇಂದ್ರಾಡಳಿತಕ್ಕೆ ಪ್ರದೇಶಕ್ಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿದೆ. 

ಯೂರೋಪಿಯನ್ ಅಧ್ಯಕ್ಷರ ಜೊತೆ ಮಾತುಕತೆ; ಬೆಂಬಲಕ್ಕೆ ಧನ್ಯವಾದ ಹೇಳಿದ ಮೋದಿ !

  • ಸರಕುಗಳನ್ನು ಇತರ ಸರಕುಗಳ ಮೇಲೆ ಸಂಸ್ಕರಿಸಲು ಕಸ್ಟಮ್ಸ್ ಸಿಸ್ಟಂಗಳು ತೆರವುಗೊಳಿಸಲು ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
  • ಮೇಲ್ವಿಚಾರಣೆ ಮತ್ತು ಇತರ ಭಾಗಗಳಿಗೆ ಪೂರೈಕೆಗೆ ಇಮೇಲ್ ನೋಟಿಫಿಕೇಶನ್ ಮೂಲಕ ನೊಡೆಲ್ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.
  • ಸಿಒವಿಐಡಿ ಸಂಬಂಧಿತ ಆಮದಿನ ಬಾಕಿ ಇರುವಂತೆ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯನ್ನು ಕೈಗೊಳ್ಳಲಾಗುತ್ತಿದೆ.

ವಿದೇಶದಿಂದ ಸಲಕರಣೆ ಆಮದು ಮಾಡಿಕೊಳ್ಳಲು ಕಸ್ಟಮ್ ಡ್ಯೂಟಿ, ರಾಜ್ಯಗಳಲಿಲಿ ಜಿಎಸ್‌ಟಿ ಸೇರಿದಂತೆ ಹಲವು ತೆರಿಗೆಗಳನ್ನು ಮುಕ್ತ ಮಾಡಲಾಗಿದೆ.

  • ಕೊರೋನಾ ವಿರುದ್ಧದ ಹೋರಾಟದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಆಮದು ತೆರಿಗೆಯನ್ನು ಕಡಿತಗೊಳಿಸಲಾಗಿದೆ. 
  • ಉಚಿತವಾಗಿ ಆಮದು ಮಾಡಿಕೊಂಡು ಮುಕ್ತವಾಗಿ ವಿತರಿಸಿದಾಗ, ರಾಜ್ಯ ಸರ್ಕಾರವನ್ನು ಆಧರಿಸಿ. ಪ್ರಮಾಣೀಕರಣ, ಐಜಿಎಸ್‌ಟಿ ಸಹ ಮನ್ನಾ ಮಾಡಲಾಗಿದೆ.
  • ಇದಲ್ಲದೆ, ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಸಾಂದ್ರಕಗಳ ಆಮದುಗಾಗಿ, ಐಜಿಎಸ್‌ಟಿಯನ್ನು 28% ರಿಂದ 12% ಕ್ಕೆ ಇಳಿಸಲಾಗಿದೆ.
Follow Us:
Download App:
  • android
  • ios