Asianet Suvarna News Asianet Suvarna News

ಭಾರತದಿಂದ 100 ಕೋಟಿ ಲಸಿಕೆ ದಾಖಲೆ: ಕೆಂಪುಕೋಟೆಯಲ್ಲಿ ಹಾರಲಿದೆ ಅತೀ ದೊಡ್ಡ ತ್ರಿವರ್ಣ ಧ್ವಜ!

* ವ್ಯಾಕ್ಸಿನೇಷನ್​​ನಲ್ಲಿ ಭಾರತದ ವಿಶ್ವದಾಖಲೆ'

* ದೇಶದಲ್ಲಿ 100 ಕೋಟಿ ಡೋಸ್​ ಪೂರ್ಣ

* ಲಸಿಕಾ ಅಭಿಯಾನದಲ್ಲಿ ಭಾರತದ ಹೊಸ ದಾಖಲೆ

* 100 ಕೋಟಿ ಡೋಸ್ ನೀಡಿದ 2ನೇ ದೇಶ ಭಾರತ

India crosses 100 crore Covid vaccine milestone govt plans celebrations pod
Author
Bangalore, First Published Oct 21, 2021, 10:23 AM IST
  • Facebook
  • Twitter
  • Whatsapp

ನವದೆಹಲಿ(ಅ.21): ಕೊರೋನಾ ವೈರಸ್(Covid 19) ತಡೆಗಟ್ಟಲು "ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ"(Vaccination Campaign) ಆರಂಭಿಸಿದ ಒಂಭತ್ತು ತಿಂಗಳಲ್ಲಿ, ಭಾರತವು ಇಂದು 1 ಬಿಲಿಯನ್(100 ಕೋಟಿ) ಡೋಸ್‌ಗಳನ್ನು ಪೂರ್ಣಗೊಳಿಸಿದೆ. 100 ಕೋಟಿ ಲಸಿಕೆ ಪೂರ್ಣಗೊಳಿಸಿದ ಬೆನ್ನಲ್ಲೇ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ(Mansukh Mandaviya) ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಇದು ದೂರದೃಷ್ಟಿಯುಳ್ಳ ಪ್ರಧಾನಿ ನರೇಂದ್ರ ಮೋದಿಯವರ(narendra Modi) ಸಮರ್ಥ ನಾಯಕತ್ವದ ಫಲಿತಾಂಶವಾಗಿದೆ ಎಂದಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಈ ದಾಖಲೆ ನಿರ್ಮಿಸಿರುವ ಹಿನ್ನೆಲೆ ಸಂಭ್ರಮಾಚರಣೆ ನಡೆಸಲು ಸಿದ್ಧತೆ ನಡೆಸಿದೆ.

ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ RML ಆಸ್ಪತ್ರೆಗೆ ನೀಡಲಿದ್ದಾರೆ. ಇನ್ನು Cowinನಲ್ಲಿ ದಾಖಲಾದ ಮಾಹಿತಿ ಅನ್ವಯ ಗುರುವಾರ ಬೆಳಗ್ಗೆ 9:47ಕ್ಕೆ ಭಾರತ ನೂರು ಕೋಟಿ ಲಸಿಕೆಗಳನ್ನು ಪೂರ್ಣಗೊಳಿಸಿದೆ.

ಭಾರತಕ್ಕೆ ಅಭಿನಂದನೆಗಳು: ಮೋದಿ
ಇನ್ನು ಈ ಸಂದರ್ಭದಲ್ಲಿ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯಕ್ಕೆ 130 ಕೋಟಿ ಭಾರತೀಯರು ಸಾಕ್ಷಿಯಾಗುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. #ಲಸಿಕೆ ಕೇಂದ್ರ

100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. #ಲಸಿಕೆ ಕೇಂದ್ರ

"

ಕೆಂಪುಕೋಟೆಯಲ್ಲಿ ಹಾರಲಿದೆ ಅತೀ ದೊಡ್ಡ ತ್ರಿವರ್ಣ ಧ್ವಜ
ನೂರು ಕೊಟಿ ಡೋಸ್‌ ಪೂರೈಸಿರುವ ಹಿನ್ನೆಲೆ ದೇಶದ ಅತಿದೊಡ್ಡ ಖಾದಿ ತ್ರಿವರ್ಣವನ್ನು ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ. ಈ ತ್ರಿವರ್ಣ ಧ್ವಜ 225 ಅಡಿ ಉದ್ದ ಮತ್ತು 150 ಅಡಿ ಅಗಲ ಇರಲಿದೆ. ಇದರ ತೂಕ ಸುಮಾರು 1,400 ಕೆಜಿ ಹೊಂದಿದೆ. ಈ ಹಿಂದೆ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಲೇಹ್‌ನಲ್ಲಿ ಇದೇ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಭ್ರಮಾಚರಣೆ:

ಈಗಾಗಲೇ ಪಕ್ಷದ ನಾಯಕರಿಗೆ ವಿವಿಧ ರಾಜ್ಯಗಳನ್ನು ಹಂಚಿಕೆ ಮಾಡಲಾಗಿದೆ. ಸಂಭ್ರಮಾಚರಣೆಯ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉತ್ತರ ಪ್ರದೇಶದ(Uttara Pradesh) ಗಾಜಿಯಾಬಾದ್‌ನಲ್ಲಿ, ಅರುಣ್‌ ಸಿಂಗ್‌ ತಮಿಳುನಾಡು ಹಾಗೂ ದುಷ್ಯಂತ್‌ ಗೌತಮ್‌ ಲಖನೌನಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಸರ್ಕಾರದ ವತಿಯಿಂದ ರೈಲು ನಿಲ್ದಾಣ, ವಿಮಾನ ನಿಲ್ದಾಣದಂಥ ಸಾರ್ವಜನಿಕ ಸ್ಥಳಗಳಲ್ಲಿ 100 ಕೋಟಿ ಡೋಸ್‌ ಲಸಿಕಾಕರಣ ಪೂರ್ಣಗೊಂಡಿದೆ ಎಂಬ ಸಂದೇಶಗಳನ್ನು ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡಲಾಗುತ್ತದೆ.

ಈವರೆಗೆ ಚೀನಾ ಮಾತ್ರ 100 ಕೋಟಿ ಡೋಸ್‌ ಲಸಿಕೆ ವಿತರಿಸಿದೆ. ಭಾರತ 100 ಕೋಟಿ ಡೋಸ್‌ ವಿತರಿಸಿದ ವಿಶ್ವದ 2ನೇ ರಾಷ್ಟ್ರವಾಗಿದೆ.

14623 ಕೋವಿಡ್‌ ಕೇಸ್‌, 197 ಸಾವು: ಸಕ್ರಿಯ ಕೇಸು 8 ತಿಂಗಳ ಕನಿಷ್ಠ

ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 14,623 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 197 ಜನರು ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3.41 ಕೋಟಿಗೆ ಹಾಗೂ ಸಾವು 4.52 ಲಕ್ಷಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳು 1.78 ಲಕ್ಷಕ್ಕೆ ಇಳಿಕೆಯಾಗಿದ್ದು, ಇದು ಸುಮಾರು 8 ತಿಂಗಳ (229 ದಿನಗಳ) ಕನಿಷ್ಠ ಸಂಖ್ಯೆಯಾಗಿದೆ. ಸತತ 26 ದಿನಗಳಿಂದ ದೈನಂದಿನ ಪ್ರಕರಣಗಳ ಪ್ರಮಾಣ 30 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 5,020 ಸೋಂಕಿತರು ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.98.15ರಷ್ಟಿದೆ. ಈವರೆಗೆ ದೇಶದಲ್ಲಿ 99.12 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

Follow Us:
Download App:
  • android
  • ios