ನವದೆಹಲಿ(ಜೂ.14): ಶನಿವಾರ ದೇಶದಲ್ಲಿ 00000 ಹೊಸ ಕೊರೋನಾ ಕೇಸು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಈ ಮೂಲಕ ವಿಶ್ವದಲ್ಲಿ 3 ಲಕ್ಷ ಸೋಂಕಿತರ ಗಡಿದಾಟಿದ 4ನೇ ದೇಶವಾಗಿ ಹೊರಹೊಮ್ಮಿದೆ. ಭಾರತಕ್ಕಿಂತ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳೆಂದರೆ ಅಮೆರಿಕ (21 ಲಕ್ಷ), ಬ್ರೆಜಿಲ್‌ (8.31 ಲಕ್ಷ), ರಷ್ಯಾ(5.20 ಲಕ್ಷ).

ಇನ್ನು ಶನಿವಾರ ದೇಶದ ವಿವಿಧ ರಾಜ್ಯಗಳಲ್ಲಿ 000 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಸಾವಿನ ಸಂಖ್ಯೆ 0000ಗೆ ತಲುಪಿದೆ. ಈ ಮೂಲಕ ಜಾಗತಿಕವಾಗಿ ಕೊರೋನಾಕ್ಕೆ ಅತಿ ಹೆಚ್ಚು ಬಲಿಯಾದವರ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದೆ.

ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 113 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3830ಕ್ಕೆ ತಲುಪಿದೆ. ಮತ್ತೊಂದೆಡೆ, ಮಹಾರಾಷ್ಟ್ರದಲ್ಲಿ ಶನಿವಾರ ಮತ್ತೆ 3427 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇನ್ನು ದೆಹಲಿಯಲ್ಲಿ --(ಒಟ್ಟು ---), ತಮಿಳುನಾಡಿನಲ್ಲಿ 30(ಒಟ್ಟು 397), ಗುಜರಾತ್‌ನಲ್ಲಿ 33(ಒಟ್ಟು 1449), ಪಶ್ಚಿಮ ಬಂಗಾಳದಲ್ಲಿ 12(ಒಟ್ಟು 463), ಹರಾರ‍ಯಣದಲ್ಲಿ 8(ಒಟ್ಟು78) ಮಂದಿ ಕೊರೋನಾ ವ್ಯಾಧಿಗೆ ಬಲಿಯಾಗಿದ್ದಾರೆ.

ಇನ್ನು ತಮಿಳುನಾಡಿನಲ್ಲಿ 1989 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 42,687, ಈ ಪೈಕಿ ಚೆನ್ನೈನಲ್ಲಿ 30,444 ಪ್ರಕರಣಗಳು ದಾಖಲಾಗಿದೆ. ಗುಜರಾತ್‌ನಲ್ಲಿ 517 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 23,079 ಪ್ರಕರಣಗಳು ದೃಢಪಟ್ಟಿವೆ. ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ 454, ಕರ್ನಾಟಕದಲ್ಲಿ 308 ಹಾಗೂ ದೆಹಲಿಯಲ್ಲಿ --- ಪ್ರಕರಣಗಳು ದಾಖಲಾಗಿವೆ.