ನವದೆಹಲಿ(ಜು.25): ಲಡಾಖ್ ಗಡಿಯಲ್ಲಿ ಚೀನಾ ಖ್ಯಾತೆ ತೆಗೆದ ಬಳಿಕ ಭಾರತ ಎಲ್ಲಾ ದಿಕ್ಕುಗಳಿಂದ ಚೀನಾಗೆ ಶಾಕ್ ನೀಡಲು ಸಜ್ಜಾಗಿದೆ. ಗಡಿಯಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದ್ದರೆ, ಪ್ರಧಾನಿ ಮೋದಿ ವ್ಯಾಪಾರ ವಹಿವಾಟು ನೀತಿಯಲ್ಲಿ ಬದಲಾವಣೆ ಮಾಡಿ ಆರ್ಥಿಕವಾಗಿ ಹೊಡೆತ ನೀಡಿದ್ದಾರೆ. ಇಷ್ಟೇ ಅಲ್ಲ ಇತರ ದೇಶದ ಶಕ್ತಿಗಳನ್ನು ಒಗ್ಗೂಡಿಸಿ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿಸಲು ಭಾರತ ಸಜ್ಜಾಗಿದೆ. ಇದಕ್ಕಾಗ ಈ ಬಾರಿಯ ನೌಕಾಪಡೆಗಳ ಮಲಬಾರ್ ಸಮರಭ್ಯಾಸದಲ್ಲಿ ಭಾರತದ ಜೊತೆ ಆಸ್ಟ್ರೇಲಿಯಾ ಸೇರಿಕೊಳ್ಳುತ್ತಿದೆ. 

ಅಮೆರಿಕ ಸಮರನೌಕೆಗಳ ಜತೆ ಭಾರತದ ನೌಕಾಪಡೆ ಜಂಟಿ ತಾಲೀಮು!...

ಭಾರತ, ಅಮರಿಕ, ಜಪಾನ್ ಜಂಟಿಯಾಗಿ ಮಲಬಾರ್ ಸಮರಭ್ಯಾಸ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತಿತ್ತು. ಈ ಮೂಲಕ ಶತ್ರುಗಳಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿತ್ತು. ಈ ಬಾರಿ ಆಸ್ಟ್ರೇಲಿಯಾ ಸೇರಿಕೊಳ್ಳುವು ಮೂಲಕ ನಾಲ್ಕು ಬಲಿಷ್ಠ ರಾಷ್ಟ್ರಗಳು ಒಂದಾಗಿ ಸಮರಭ್ಯಾಸ ನಡೆಸಲಿದೆ. ಅಸ್ಟ್ರೇಲಿಯಾ ಜೊತೆ ಈಗಗಾಲೇ ಮಾತುಕತೆ ನಡೆಸಲಾಗಿದೆ. 

ಕೆಲ ವಾರಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನೌಕಾಪಡೆಗಳಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಚೀನಾ ಸಂಘರ್ಷದ ಬಳಿಕ ನಡೆಯುತ್ತಿರುವ ಈ ನೌಕಾಪಡೆಗಳು ಸಮರಭ್ಯಾಸ ಇದೀಗ ವಿಶ್ವದ ಗಮನಸೆಳೆದಿದೆ.

ಮಲಬಾರ್ ನೌಕಾಪಡೆಗಳು ಸಮರಭ್ಯಾಸ 1992ರಲ್ಲಿ ಆರಂಭಗೊಂಡಿತು. ಭಾರತ ಆಯೋಜಿಸುವ ನೌಕಾಪಡೆಗಳ ಸಮರಭ್ಯಾಸದಲ್ಲಿ ಅಮೆರಿಕ ಕೂಡ ಸೇರಿಕೊಂಡಿತ್ತು. ಭಾರತ ಹಾಗೂ ಅಮೆರಿಕ 1992ರಿಂದ ಪ್ರತಿ ವರ್ಷ ಸಮರಭ್ಯಾಸ ನಡೆಸುತ್ತಾ ಬಂದಿದೆ. 20115ರಲ್ಲಿ ಈ ನೌಕಾಪಡೆಗಳ ಸಮರಭ್ಯಾಸಕ್ಕೆ ಜಪಾನ್ ಸೇರಿಕೊಂಡಿತು. ಭಾರತ, ಅಮೆರಿಕ ಹಾಗಾ ಜಪಾನ್ ಖಾಯಂ ಸದಸ್ಯರಾಗಿದ್ದವು. ಇದೀಗ ಈ ಕೂಟಕ್ಕೆ ಆಸ್ಟ್ರೇಲಿಯಾ ಸೇರಿಕೊಳ್ಳುತ್ತಿದೆ.