ನವದೆಹಲಿ(ಅ.14): ಗಡಿಯಲ್ಲಿ ಚೀನಾ ಜೊತೆಗಿನ ಸಂಘರ್ಷವನ್ನು ಸಮರ್ಥವಾಗಿ ಎದುರಿಸುತ್ತಿರುವ ಭಾರತೀಯ ಸೈನಿಕರಿಗೆ ಸಿಗುತ್ತಿರುವ ಸೌಲಭ್ಯಗಳ ಪರಿಶೀಲನೆ ಹಾಗೂ ವಸ್ತುಸ್ಥಿತಿ ಅರಿಯಲಿಕ್ಕಾಗಿ ಸಂಸತ್‌ ನಿಯೋಗವೊಂದು ಲಡಾಖ್‌ಗೆ ಭೇಟಿ ನೀಡಲು ಮುಂದಾಗಿದೆ.

ಸಂಸದ ಅದೀರ್‌ ರಂಜನ್‌ ಚೌಧರಿ ನೇತೃತ್ವದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರನ್ನೊಳಗೊಂಡ ನಿಯೋಗ ಅಕ್ಟೋಬರ್‌ 28-29ರಂದು ಭೇಟಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅ.20ರಿಂದ ಮುಂದಿನ ತಿಂಗಳ ಕೊನೆತನಕ 392 ಹಬ್ಬದ ವಿಶೇಷ ರೈಲು, ಇಲ್ಲಿದೆ ಡೀಟೆಲ್ಸ್

ಸೈನಿಕರಿಗೆ ನೀಡಲಾಗುವ ಸಮವಸ್ತ್ರ, ವಸತಿ ಮತ್ತು ಪಡಿತರಗಳ ಮಾಹಿತಿ ಪಡೆದುಕೊಳ್ಳಲಿದೆ. ಲೋಕಸಭಾ ಸ್ಪೀಕರ್‌ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಭೇಟಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.