ನವದೆಹಲಿ(ಸೆ.21): ಲಡಾಖ್ ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಭಾರತೀಯ ಸೇನೆ ಹಲವು ಸುತ್ತಿನ ಮಾತುಕತೆ ನಡೆಸಿದೆ.  ಆದರೆ ಚೀನಾ ಯಥಾ ಸ್ಥಿತಿ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇಂದು ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ. ಈ ಹಿಂದಿನ ಮಾತುಕತೆಗಳಲ್ಲಿ ಭಾರತೀಯ ಸೇನಾ ಪ್ರತಿನಿಧಿಯಾಗಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಪಾಲ್ಗೊಂಡಿದ್ದರು . ಇದೀಗ ಭಾರತೀಯ ಸೇನಾ ಪ್ರತಿನಿಧಿಯಾಗಿ  ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ..

ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

ಕಳೆದ 5 ಉನ್ನತ ಮಟ್ಟದ ಸೇನಾ ಮಾತುಕತೆಗಳಲ್ಲಿ ಲಡಾಖ್ ಗಡಿ ಸಂಘರ್ಷ ಅಂತ್ಯಗೊಳಿಸಲು ಪ್ರಯತ್ನ ಮಾಡಲಾಗಿದೆ. ಆದರೆ ಮಾತುಕತೆ ಫಲಪ್ರದವಾಗಿಲ್ಲ. ಆರ್ಮಿ ಹೆಡ್‌ಕ್ವಾರ್ಟರ್‌ನಲ್ಲಿ CABನ ಅಡೀಶನಲ್ ಡೈರೆಕ್ಟರ್ ಜನರಲ್ ಆಗಿ ಪಿಜಿಕೆ ಮೆನನ್ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯ ಸೇವಾ ಪರಿಹಾರ ಕಾರ್ಯವಿಧಾನದ ಉಸ್ತುವಾರಿ  ಹೊಣೆ ಹೊತ್ತಿರುವ ಮೆನನ್, ನೇರವಾಗಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾನೆ ಅವರಿಗೆ ವರದಿ ಸಲ್ಲಿಸುತ್ತಾರೆ.

ಭಾರತ ಸೇನೆ ಸಿದ್ಧತೆ ಮಾಹಿತಿ ಕೇಳಿ ಬೆಚ್ಚಿದ ಚೀನಾ! ನಮ್ಮ ಶಕ್ತಿ ಎಷ್ಟು? ಅವರದ್ದೆಷ್ಟು?

ಅಕ್ಟೋಬರ್ ತಿಂಗಳಿನಿಂದ ಮೆನನ್ ಜವಾಬ್ದಾರಿ ವಹಿಸಲಿದ್ದಾರೆ. ಅಡೀಶನಲ್ ಡೈರೆಕ್ಟರ್ ಜನರಲ್ ಆಫ್ ಇಂಡಿಯನ್ ಆರ್ಮಿ ಜವಾಬ್ದಾರಿ ಜೊತೆಗೆ ಸಿಖ್ ರೆಜಿಮೆಂಟ್‌ನ ಕರ್ನಲ್ ಆಫ್ ರೆಜಿಮೆಂಟ್ (ಹಿರಿಯ-ಹೆಚ್ಚುವರಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ) ಆಗಿದ್ದಾರೆ. 

  ಶಾಂತಿ ಸ್ಥಾಪನೆ, ಯಥಾ ಸ್ಥಿತಿ ಕಾಪಾಡುವಿಕೆ ಕುರಿತು ಚೀನಾ ಜೊತೆಗಿನ ಹಲವು ಮಾತುಕತೆಗಳಲ್ಲಿ ಈಗಾಗಲೇ ಮೆನನ್ ಪಾಲ್ಗೊಂಡಿದ್ದಾರೆ.  2018 ರ ನವೆಂಬರ್‌ನಲ್ಲಿ ಮೆನನ್ ಅರುಣಾಚಲ ಪ್ರದೇಶ- ಟಿಬೆಟ್ ಗಡಿಯಲ್ಲಿರುವ ಬಮ್ ಲಾದಲ್ಲಿ ಭಾರತ ಮತ್ತು ಚೀನಾ ನಡುವಿನ ಜನರಲ್ ಮಟ್ಟದ ಮಾತುಕತೆಗಳನ್ನು ಮೆನನ್ ಮುನ್ನಡೆಸಿದ್ದಾರೆ. ಈ ವೇಳೆ  ಮೆನನ್ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸುತ್ತಿದ್ದರು.