Asianet Suvarna News Asianet Suvarna News

ಭಾರತದಲ್ಲಿ 70 ಕೋಟಿ ಲಸಿಕೆ ವಿತರಣೆಯ ದಾಖಲೆ

  • ಕೋವಿಡ್‌ ಲಸಿಕೆ ವಿತರಣೆಯಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಭಾರತ
  •  70 ಕೋಟಿ ಡೋಸ್‌ ವಿತರಣೆಯ ಹೊಸ ಮೈಲುಗಲ್ಲು ಸ್ಥಾಪಿಸಿದೆ
India administered  70 crore COVID vaccine doses snr
Author
Bengaluru, First Published Sep 8, 2021, 9:03 AM IST

ನವದೆಹಲಿ (ಸೆ.08): ಕೋವಿಡ್‌ ಲಸಿಕೆ ವಿತರಣೆಯಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಭಾರತ, ಮಂಗಳವಾರ 70 ಕೋಟಿ ಡೋಸ್‌ ವಿತರಣೆಯ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅದರಲ್ಲೂ ಕಳೆದ ಕೇವಲ 13 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ, ಕೊರೋನಾ ವೈರಸ್‌ ಅನ್ನು ನಾವು ಸೋಲಿಸಲೇಬೇಕಿದೆ ಮತ್ತು ಲಸಿಕೆಯು ತನ್ನ ಗೆಲುವಿನ ಹಾದಿಯಲ್ಲಿದೆ. ಈ ಸಾಧನೆಗೆ ಕಾರಣರಾದ ದೇಶ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದಿದ್ದಾರೆ. ಇದುವರೆಗೆ 53.96 ಕೋಟಿ ಜನರಿಗೆ ಮೊದಲ ಡೋಸ್‌ ಮತ್ತು 16.67 ಕೋಟಿ ಜನರಿಗೆ 2ನೇ ಡೋಸ್‌ ವಿತರಿಸಲಾಗಿದೆ.

ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಇಲ್ಲಿದೆ ಸೆ.07ರ ಅಂಕಿ-ಸಂಖ್ಯೆ

ಮೊದಲ 10 ಕೋಟಿ ಡೋಸ್‌ ವಿತರಿಸಲು 85 ದಿನ ಬೇಕಾಗಿತ್ತು. 20 ಕೋಟಿಯನ್ನು 45 ದಿನಗಳಲ್ಲಿ, 30 ಕೋಟಿ ತಲುಪಲು 29 ದಿನ, 40 ಕೋಟಿ ತಲುಪಲು 24 ದಿನ, 50 ಕೋಟಿ ತಲುಪಲು 20 ದಿನ, 60 ಕೋಟಿಗೆ 19 ದಿನ ಮತ್ತು 70 ಕೋಟಿಯನ್ನು ಕೇವಲ 13 ದಿನಗಳಲ್ಲಿ ತಲುಪಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಡೋಸ್‌ ಪ್ರಮಾಣ ಪಡೆದ ಅವಧಿ

10 ಕೋಟಿ 84 ದಿನ

20 ಕೋಟಿ 45 ದಿನ

30 ಕೋಟಿ 29 ದಿನ

40 ಕೋಟಿ 24 ದಿನ

50 ಕೋಟಿ 20 ದಿನ

60 ಕೋಟಿ 19 ದಿನ

70 ಕೋಟಿ 13 ದಿನ

Follow Us:
Download App:
  • android
  • ios