Asianet Suvarna News Asianet Suvarna News

ಭಾರತದ ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಧ್ಯಯನ ವರದಿ!

* ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಮೆರಿಕದ ಅಧ್ಯಯನದ ವಿಶ್ಲೇಷಣೆ

* ಮೋದಿ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಕೂಡ ಅಧ್ಯಯನದಲ್ಲಿ ಭಾಗಿ

* 2020ರ ಜನವರಿಯಿಂದ 20201ರ ಜೂನ್‌ವರೆಗೆ ಅಂದಾಜಿಗಿಂತ 47 ಲಕ್ಷ ಹೆಚ್ಚು ಸಾವು

* ಇವುಗಳಲ್ಲಿ ಕೋವಿಡ್‌ ಸಾವಿನ ಪಾಲು ಸುಮಾರು 30 ಲಕ್ಷ

India actual Covid 19 death toll at least 30 lakh Study pod
Author
Bangalore, First Published Jul 22, 2021, 8:57 AM IST

ನವದೆಹಲಿ(ಜು.22): ಭಾರತದಲ್ಲಿ ಕೊರೋನಾದಿಂದ ಮೃತಪಟ್ಟವರು 4 ಲಕ್ಷ ಅಲ್ಲ, ಸುಮಾರು 30 ಲಕ್ಷ ಇರಬಹುದು ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ಹೇಳಿದೆ. ‘ಸರ್ಕಾರವು ಮೃತರ ಅಂಕಿ-ಅಂಶಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿದೆ’ ಎಂದು ಭಾರತ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿರುವ ನಡುವೆಯೇ ಈ ಅಧ್ಯಯನವು ಬೇರೆ ಕತೆಯನ್ನೇ ಹೇಳುತ್ತದೆ.

ವಾಷಿಂಗ್ಟನ್‌ ಮೂಲದ ಸೆಂಟರ್‌ ಫಾ ಗ್ಲೋಬಲ್‌ ಡೆವಲಪ್‌ಮೆಂಟ್‌ ಎಂಬ ಸಂಸ್ಥೆ ಈ ಅಧ್ಯಯನ ನಡೆಸಿದೆ. 2020ರ ಜನವರಿಯಿಂದ 2021ರ ಜೂನ್‌ವರೆಗೆ ಸಂಭವಿಸಿದ ಸಾವುಗಳನ್ನು ಸರ್ಕಾರದ ದತ್ತಾಂಶ, ಅಂತಾರಾಷ್ಟ್ರೀಯ ಅಂದಾಜು, ಸೀರೋ ಸಮೀಕ್ಷೆ ಹಾಗೂ ಮನೆ-ಮನೆ ಸಮೀಕ್ಷೆ ನಡೆಸಿ ಕ್ರೊಡೀಕರಿಸಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್‌’ ವರದಿ ಮಾಡಿದೆ.

'ಸರಕಾರದ ಅಂಕಿ ಅಂಶ ಸುಳ್ಳು: ಭಾರತದಲ್ಲಿ ಕೋವಿಡ್‌ಗೆ 53 ಲಕ್ಷ ಜನರ ಸಾವು!'

ಈ ಅಧ್ಯಯನದಲ್ಲಿ ಮೋದಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯಂ ಕೂಡ ಭಾಗಿಯಾಗಿದ್ದು, ‘ಸಾವುಗಳು ಸಾವಿರ ಸಂಖ್ಯೆಯಲ್ಲಿಲ್ಲ. ದಶಲಕ್ಷದ ಸಂಖ್ಯೆಗಳಲ್ಲಿವೆ. ಇದು ಭಾರತದ ಅತಿ ಕೆಟ್ಟಮಾನವ ದುರಂತ’ ಎಂದಿದ್ದಾರೆ.

2020ರ ಜನವರಿಯಿಂದ 2021ರ ಜೂನ್‌ವರೆಗೆ ಸಂಭವಿಸಬೇಕಿದ್ದ ಅಂದಾಜು ಸಾವಿಗಿಂತ 34 ಲಕ್ಷದಿಂದ 47 ಲಕ್ಷ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿವೆ. ಹೀಗಾಗಿ ಹೆಚ್ಚುವರಿ 30 ಲಕ್ಷದಿಂದ 40 ಲಕ್ಷ ಸಾವುಗಳನ್ನು ಕೋವಿಡ್‌ ಸಾವು ಎಂದು ಹೇಳಬಹುದಾಗಿದೆ ಎಂದು ಮಂಗಳವಾರ ಪ್ರಕಟವಾದ ಅಧ್ಯಯನ ವಿವರಿಸಿದೆ.

Follow Us:
Download App:
  • android
  • ios