ನವದೆಹಲಿ(ಅ.13): ಭಾರತದಲ್ಲಿ ಗಣನೀಯವಾಗಿ ಇಳಿಯುತ್ತಿರುವ ಹೊಸ ಕೊರೋನಾ ಪ್ರಕರಣಗಳ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿtftu. ಹೀಗಿರುವಾಗ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡುತ್ತಾ 'ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಇದು ವಿಶ್ವದಲ್ಲೇ ಅತ್ಯಧಿಕ ಹಾಗೂ ಸಾಪ್ತಾಹಿಕ ಸೋಂಕು ಹರಡುತ್ತಿರುವ ಪ್ರಮಾಣವೂ ಶೇ. 6.24ರಷ್ಟು ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಶೇ. 5.16ರಷ್ಟು ಪ್ರಮಾಣ ದಾಖಲಾಗಿದೆ. ಸಕ್ರಿಯ ಪ್ರಕರಣ ಕಳೆದ ಐದು ದಿನಗಳಿಂದ 9 ಲಕ್ಷಕ್ಕೂ ಕಡಿಮೆ ಇದೆ' ಎಂದಿದ್ದಾರೆ.

ಈ ಮಹಾಮಾರಿ ಎದುರಿಸಲು ಸಹಾಯವಾಗಿದ್ದೇನು ಎಂಬುವುದನ್ನು ತಿಳಿಸಿದ ಅವರು 'ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂದಿನ ಎರಡು ತಿಂಗಳು ಮತ್ತಷ್ಟು ಒಗ್ಗಟ್ಟಇನಿಂದ ನಾವೆಲ್ಲರೂ ಸೇರಿ ಹೋರಾಡಬೇಕಿದೆ. ಅತ್ಯಂತ ಸರಳ ಹಾಗೂ ಎಲ್ಲರಿಗೂ ತಿಳಿಯುವ ಸಂದೇಶವೆಂದರೆ ಒಂದು ವೇಳೆ ನಾವು ಒಂದಾಗಿ ಈ ಸೋಂಕಿನ ವಿರುದ್ಧ ಹೋರಾಡಿದರೆ, ಇದರ ವಿರುದ್ಧ ಜಯ ಸಾಧಿಸಬಹುದು. ಹೀಗಾಗಿ ನಾವು ಮಹತ್ವದ ಕೆಲ ವಿಚಾರಗಳ ಕುರಿತು ಗಮನ ಹರಿಸಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಕೈಗಳನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಜೊತೆಗೆ ಯಾವಾಗದವರೆಗೆ ಇದಕ್ಕೆ ಔಷಧಿ ಸಿಗುವುದಿಲ್ಲವೋ ಅಲ್ಲಿಯವರೆಗೆ ನಿರ್ಲಕ್ಷ್ಯ ಸಲ್ಲದು' ಎಂದಿದ್ದಾರೆ.

ದೇಶದಲ್ಲಿ ಕೊರೋಓನಾ ಸೋಂಕಿತರ ಪೈಕಿ 60 ವರ್ಷ ಮೇಲ್ಪಟ್ಟ ಶೇ. 53ರಷ್ಟು ಮಂದಿ ಮೃತಪಟ್ಟಿದ್ದರೆ, 45 ರಿಂದ 60  ವರ್ಷದ ವಯೋಮಾನದ ಶೇ. 35ರಷ್ಟು ಮಂದಿ, 26 ರಿಂದ 44 ವರ್ಷದ ಶೇ. 10ರಷ್ಟು ಮಂದಿ ಹಾಗೂ ಒಂದು ವರ್ಷದಿಂದ ಹದಿನೇಳು ವರ್ಷ ವಯೋಮಾನದ ಮತ್ತು 18 ರಿಂದ 25ವರ್ಷದ ತಲಾ ಶೇ. 1ರಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.