Asianet Suvarna News Asianet Suvarna News

ಮಜಾರ್‌ ಆಗಿ ಪರಿವರ್ತನೆ ಮಾಡಲಾಗಿದ್ದ 2300 ವರ್ಷದ ಹಿಂದಿನ ಅಶೋಕ ಶಾಸನ ಮರಳಿ ಪಡೆದ ಎಎಸ್‌ಐ!

ಈ ವರ್ಷದ ಸೆಪ್ಟೆಂಬರ್‌ನಲ್ಲಿ, 2300 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದಲ್ಲದೆ,  'ಮಜಾರ್' ಆಗಿ ಪರಿವರ್ತಿಸಲಾಗಿದೆ ಎಂಬ ವರದಿಗಳು ಹೊರಹೊಮ್ಮಿದ್ದವು. ಅದರ ಬೆನ್ನಲ್ಲಿಯೇ ಭಾರತೀಯ ಪುರಾತತ್ವ ಇಲಾಖೆ ಕಾರ್ಯಾಚರಣೆಗೆ ಇಳಿದಿತ್ತು.
 

in Sasaram Bihar ASI reclaims 2300 year old Ashoka edict illegally occupied and converted into mazar san
Author
First Published Nov 29, 2022, 11:24 PM IST

ಪಾಟ್ನಾ (ನ.29): ಅಂದಾಜು 2300 ವರ್ಷದ ಹಿಂದಿನ ಅಶೋಕ ಚಕ್ರವರ್ತಿಯ ಕಾಲದ ಶಾಸನವಿದ್ದ ಜಾಗವನ್ನು ಅತಿಕ್ರಮಕಾರರಿಂದ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನು ಮಂಗಳವಾರ ಎಎಸ್‌ಐ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಮಾಹಿತಿ ನೀಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಿಹಾರದ ರೋಹ್ತಾಸ್ ಜಿಲ್ಲೆಯ ಪ್ರಧಾನ ಕಛೇರಿಯಾದ ಸಸಾರಾಮ್‌ನಲ್ಲಿರುವ ಕೈಮೂರ್ ಬೆಟ್ಟ ಶ್ರೇಣಿಯ ಚಂದನ್ ಬೆಟ್ಟದ ನೈಸರ್ಗಿಕ ಗುಹೆಯಲ್ಲಿರುವ 2300 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ತಾಣವನ್ನು ಅತಿಕ್ರಮಿಸಿ 'ಮಜಾರ್' (ಮುಸ್ಲಿಂ ಪ್ರಾರ್ಥನೆ ಸ್ಥಳ ಅಥವಾ ಪ್ರತಿಷ್ಠಿತ ಮುಸ್ಲಿಂ ವ್ಯಕ್ತಿಯ ಸಮಾಧಿ.) ಆಗಿ ಪರಿವರ್ತಿಸಲಾಗಿದೆ ಎನ್ನುವ ವರದಿಗಳು ಪ್ರಸಾರವಾಗಿದ್ದವು. ಆದರೆ, ತಿಂಗಳುಗಳ ಹೋರಾಟ ನಡೆಸಿದ ಬಳಿಕ ಎಎಸ್‌ಐ, ಈ ಪ್ರದೇಶದ ಬೀಗವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಅಶೋಕ ಚಕ್ರವರ್ತಿಯ ಶಾಸನ ಸ್ಥಳವಾಗಿದ್ದು, ಸಂರಕ್ಷಿತ ಸ್ಮಾರಕ ಅಥವಾ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ಈ ಪ್ರದೇಶ ಯಶಸ್ವಿಯಾಗಿ ಎಎಸ್‌ಐ ಕೈ ಸೇರಿದೆ' ಎಂದು ಎಎಸ್‌ಐ ಟ್ವೀಟ್‌ ಮಾಡಿದೆ. ಇದರೊಂದಿಗೆ ಪ್ರದೇಶವನ್ನು ಅತಿಕ್ರಮಣ ಮಾಡಿದ್ದ ವ್ಯಕ್ತಿಗಳು ಇದರ ಕೀಯನ್ನು ಎಎಸ್‌ಐ ಅಧಿಕಾರಿಗಳಿಗೆ ಹಸ್ತಾಂತರ ಮಾಡುತ್ತಿರುವ ಚಿತ್ರವನ್ನೂ ಕೂಡ ಪ್ರಕಟಿಸಲಾಗಿದೆ.


ಪುರಾತನ ಬ್ರಾಹ್ಮಿ ಅಕ್ಷರಗಳಲ್ಲಿ ಎಂಟು ಸಾಲುಗಳನ್ನು ಒಳಗೊಂಡಿರುವ ಸಹಸರಂ (232 ಅಥವಾ 231 BCE) ಅಶೋಕನ ಶಾಸನದ ಒಂದು ಭಾಗವು ಹಾನಿಗೊಳಗಾಗಿದೆ. ಶಾಸನಗಳು, ಬಹುಶಃ ಬುದ್ಧನ ಮರಣವನ್ನು ಉಲ್ಲೇಖಿಸುವ ದಿನಾಂಕವನ್ನು ಒಳಗೊಂಡಿದ್ದಿರಬಹುದು. ಆದರೆ ಅದರ ಯಾವುದೇ ಮಾಹಿತಿ ಸಿಗುವ ರೀತಿಯ ವ್ಯಾಖ್ಯಾನ ಅಲ್ಲಿ ಈಗ ಕಾಣುತ್ತಿಲ್ಲ  ಎಂದು ಸಂಸ್ಥೆಯು ಮಾಹಿತಿ ನೀಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಅಶೋಕನ ಶಾಸನದ ಸ್ಥಳವನ್ನು ಹೇಗೆ ಮಜಾರ್ ಆಗಿ ಪರಿವರ್ತಿಸಲಾಯಿತು ಮತ್ತು ಅದನ್ನು ಹಸಿರು ಬಟ್ಟೆಯಿಂದ ಮುಚ್ಚಿದ ನಂತರ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿತ್ತು ಈ ಕುರಿತಾಗಿ ಆಪ್‌ ಇಂಡಿಯಾ ಪತ್ರಿಕೆ ವರದಿ ಕೂಡ ಪ್ರಕಟ ಮಾಡಿತ್ತು.

ಮಹಾ ಚಕ್ರವರ್ತಿ ಅಶೋಕ 2300 ವರ್ಷಗಳ ಹಿಂದೆ ಬಿಹಾರದ ರೋಹ್ತಾಸ್ ಜಿಲ್ಲೆಯ ಪ್ರಧಾನ ಕಛೇರಿಯಾದ ಸಸಾರಂನಲ್ಲಿರುವ ಕೈಮೂರ್ ಬೆಟ್ಟದ ಚಂದನ್ ಬೆಟ್ಟದ ನೈಸರ್ಗಿಕ ಗುಹೆಯಲ್ಲಿ ಶಾಸನವನ್ನು ಕೆತ್ತಿದ್ದ ಈ ಶಾಸನವು ಬ್ರಾಹ್ಮಿ ಲಿಪಿಯಲ್ಲಿದೆ. ಪ್ರಸ್ತುತ ದೇಶದಲ್ಲಿ ಬ್ರಾಹ್ಮಿ ಲಿಪಿಯಲ್ಲಿರುವ ಎಂಟು ಶಾಸನಗಳ ಪೈಕಿ ಒಂದಾಗಿದೆ. ಈ ಶಾಸನವನ್ನೂ ಕೂಡ ಅದರಲ್ಲಿ ಸೇರಿಸಲಾಗಿತ್ತು. ಹಾಗೂ ಬಿಹಾರದಲ್ಲಿರುವ ಏಕೈಕ ಶಾಸನ ಇದಾಗಿತ್ತು.

ಅದರೆ, ಈ ಶಾಸನದ ಸುತ್ತಲು ಕಾನೂನುಬಾಹಿರ ಕಟ್ಟಡ ವಸತಿಗಳನ್ನು ಅಕ್ರಮಿಸುವ ಮೂಲಕ ಇದಕ್ಕೆ ಹಾನಿ ಮಾಡಲಾಗಿತ್ತು. ಶಾಸನಕಕೆ ಬಿಳಿ ಸುಣ್ಣವನ್ನು ಲೇಪನ ಮಾಡಿದ್ದು ಮಾತ್ರವಲ್ಲೆ ಹಸಿರು ಬಣ್ಣದ ಬಟ್ಟೆ ಹೊದಿಸಿ ಮಜಾರ್‌ ಆಗಿ ಮಾಡಲಾಗಿತ್ತು.  ಇದನ್ನು ಸೂಫಿ ಸಂತರ ಸಮಾಧಿ ಎಂದು ಘೋಷಿಸುವ ಮೂಲಕ ವಾರ್ಷಿಕ ಉರುಸ್‌ ಅನ್ನು ಅಯೋಜನೆ ಮಾಡಲಾಗಿತ್ತು. ಆದರೆ, ಅಕ್ರಮ ನಿರ್ಮಾಣದ ಮಾಹಿತಿ ತಿಳಿಯುತ್ತಿದ್ದಂತೆ ಸ್ಮಾರಕದ ಗೇಟ್‌ಅನ್ನು ಮುಚ್ಚಲಾಗಿತ್ತು.

Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್‌ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!

ಸ್ವಾತಂತ್ರ್ಯ ದೊರೆತ ಹಲವು ವರ್ಷಗಳ ಬಳಿಕ 2008ರಲ್ಲಿ ಎಎಸ್‌ಐ ಈ ಶಾಸನದ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಎಎಸ್‌ಐ ಕಂದರದಲ್ಲಿನ ಶಾಸನದ ಬಳಿ ಸಂರಕ್ಷಣಾ ಫಲಕವನ್ನು ಸಹ ಹಾಕಿದೆ, ಇದು ಸುಮಾರು 20 ಅಡಿ ಕೆಳಗೆ ಇದೆ. ಸಸಾರಂ ನಗರದ ಹಳೆಯ ಗ್ರ್ಯಾಂಡ್ ಟ್ರಂಕ್ ರಸ್ತೆ (ಜಿಟಿ ರಸ್ತೆ) ಮತ್ತು ಹೊಸ ಬೈಪಾಸ್ ನಡುವಿನ ಕೈಮೂರ್ ಬೆಟ್ಟದ ಶ್ರೇಣಿಯಲ್ಲಿರುವ ಆಶಿಕ್‌ಪುರ ಬೆಟ್ಟದಲ್ಲಿ ಈ ಶಾಸನವಿತ್ತು. ಅತಿಕ್ರಮಣದಾರರು ಬೋರ್ಡ್ ತೆಗೆದು ಅದನ್ನು ಸೂಫಿ ಸಂತರ ಸಮಾಧಿಯನ್ನಾಗಿ ಹೆಸರಿಸಿದ್ದರು.

ಗೆಳತಿ ಮತಾಂತರಕ್ಕೆ ಯತ್ನಿಸಿದ್ದ ಸೂಫಿಯಾನ್‌ಗೆ ಗುಂಡೇಟು..! ಪ್ರೇಯಸಿ ಹತ್ಯೆಗೈದ ಪಾಪಿ ಎನ್‌ಕೌಂಟರ್‌ ಬಳಿಕ ಸೆರೆ

2008, 2012 ಮತ್ತು 2018 ರಲ್ಲಿ, ಅಶೋಕ ಶಾಸನದ ಸುತ್ತಲಿನ ಅತಿಕ್ರಮಣಗಳನ್ನು ಜಿಲ್ಲಾಧಿಕಾರಿ (ಡಿಎಂ) ಸಮ್ಮುಖದಲ್ಲಿ ತೆಗೆದುಹಾಕುವಂತೆ ಎಎಸ್ಐ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಸಾರಾಮ್‌ನ ಎಸ್‌ಡಿಎಂಗೆ ಸೂಚನೆ ನೀಡಿದ್ದರು. ಅಕ್ರಮವಾಗಿ ನಿವೇಶನವನ್ನು ಒತ್ತುವರಿ ಮಾಡಿಕೊಂಡಿರುವ ಮರ್ಕಝಿ ಮುಹರಂ ಸಮಿತಿ, ಕೂಡಲೇ ಕೀಯನ್ನು ಆಡಳಿತಕ್ಕೆ ಹಸ್ತಾಂತರಿಸುವಂತೆ ಎಸ್‌ಡಿಎಂ ಆದೇಶ ನೀಡಿದ್ದರೂ ಸಮಿತಿ ಸ್ಥಳವನ್ನು ತೊರೆಯಲು ನಿರಾಕರಿಸಿತ್ತು. ಅಲ್ಲಿ ಕ್ರಮೇಣ ಅಕ್ರಮವಾಗಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು.

Follow Us:
Download App:
  • android
  • ios