ನವರಾತ್ರಿಗೂ ಮುನ್ನ ಹುಟ್ಟಿದ ಕಂದ, ಬೆರಳುಗಳನ್ನು ನೋಡಿ ದುರ್ಗೆಯ ಅವತಾರ ಎಂದ ಜನ, ಇಲ್ಲಿದೆ ವಿಡಿಯೋ
* ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಜನಿಸಿದ ಹೆಣ್ಣು ಮಗು
* ಹೆಣ್ಣುಮಗುವಿನ ಬೆರಳು ನೋಡಿ ಅಚ್ಚರಿಗೀಡಾದ ಜನರು
* ಇದು ಅಚ್ಚರಿಪಡುವ ವಿಚಾರವಲ್ಲ ಎಂದ ವೈದ್ಯರು
ಭೋಪಾಲಗ್(ಏ.03): ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಜನಿಸಿದ ಹೆಣ್ಣು ಮಗುವೊಂದು ಚರ್ಚೆಯ ವಿಷಯವಾಗಿ ಉಳಿದಿದೆ. ನವರಾತ್ರಿಯ ಮೊದಲ ದಿನದಂದು ಈ ವಿಶಿಷ್ಟ ಕಂದನ ಜನನವನ್ನು ಜನರು ಪವಾಡವೆಂದು ಪರಿಗಣಿಸುತ್ತಿದ್ದಾರೆ. ವಾಸ್ತವವಾಗಿ, ಮಗುವಿನ ಬೆರಳುಗಳ ಮೇಲೆ ಮೆಹಂದಿ ಇದೆ. ಇನ್ನು ಈ ಕಂದ ಶನಿವಾರ ಮುಂಜಾನೆ ರಹತ್‌ಗಾಂವ್ ಆರೋಗ್ಯ ಕೇಂದ್ರದಲ್ಲಿ ಜನಿಸಿದರ. ಆದರೆ ಅಕಾಲಿಕ ಜನನದಿಂದಾಗಿ ಹೆಣ್ಣು ಮಗುವಿನ ಬೆರಳುಗಳ ಮೇಲೆ ಗುರುತುಗಳಿವೆ ಎನ್ನುತ್ತಾರೆ ವೈದ್ಯರು.
ರಹತ್‌ಗಾಂವ್ ಹೆಲ್ತ್ ಸೆಂಟರ್‌ನಲ್ಲಿ ಈ ಹೆಣ್ಣುಮಗು ಜನಿಸಿದ ಕೂಡಲೇ ವೈದ್ಯರೂ ಅಚ್ಚರಿ ವ್ಯಕ್ತಪಡಿಸಿರುವುದು ಗಮನಿಸಬೇಕಾದ ಸಂಗತಿ. ಅಗತ್ಯ ತನಿಖೆ ಮತ್ತು ಆರೈಕೆಯ ಬಳಿಕ ಮಗುವನ್ನು ಹೆತ್ತ ತಾಯಿ ಜೂಹಿ ವಿಶ್ವಾಸ್ ಮತ್ತು ತಂದೆ ಸೌರಭ್ ಬಿಸ್ವಾಸ್ ಬಳಿಗೆ ಕರೆತಂದಾಗ ಕೇಂದ್ರದಲ್ಲಿ ಸಂತಸ ಮೂಡಿತ್ತು. ಅಲ್ಲಿದ್ದ ಸಿಬ್ಬಂದಿ ಮತ್ತು ಜನರು ಈ ಲಂದನ ಬಗ್ಗೆ ಚರ್ಚಿಸಲು ಪ್ರಾರಂಭಿಸಿದರು. ಈ ಸುದ್ದಿ ಎಷ್ಟರಮಟ್ಟಿಗೆ ಹಬ್ಬಿತ್ತೆಂದರೆ ಸುತ್ತಮುತ್ತಲಿನ ಜನ ಕೂಡ ಬಾಲಕಿಯನ್ನು ನೋಡಲು ಆರೋಗ್ಯ ಕೇಂದ್ರಕ್ಕೆ ಜಮಾಯಿಸಿದ್ದರು.
ಮೊಮ್ಮಗು ನೋಡುವ ತವಕದಲ್ಲಿ ಮಧು ಚೋಪ್ರಾ; ಮಗಳ ಜೊತೆ ಭಾರತಕ್ಕೆ ಬರ್ತಾರಾ ಪ್ರಿಯಾಂಕಾ?
ಇದು ದೈವಿಕ ನಕ್ಷತ್ರಪುಂಜಗಳಿಂದ ಸಾಧ್ಯವಾಯಿತು ಎಂದ ತಂದೆ
ಶನಿವಾರ ನವರಾತ್ರಿಯ ಮೊದಲ ದಿನವಾದ್ದರಿಂದ ಈ ದಿನ ಮತ್ತಷ್ಟು ವಿಶೇಷ ಎನಿಸಿತು. ಹೀಗಾಗಿ ಕಂದ ದುರ್ಗಾ ಮಾತೆಯ ಅವತಾರ ಎಂದು ಅನೇಕರು ಕರೆದಿದ್ದಾರೆ. ಇದೇ ವೇಳೆ ಬಾಲಕಿಯ ತಂದೆ ಸೌರಭ್ ಬಿಸ್ವಾಸ್ ಸಂತಸ ವ್ಯಕ್ತಪಡಿಸಿದ್ದು, ತಮ್ಮ ಮನೆಯಲ್ಲಿ ಮೊದಲ ಮಗು ಹೆಣ್ಣು ಮಗುವಾಗಿಯೇ ಹುಟ್ಟಿದೆ ಎಂದಿದ್ದಾರೆ. ಕಾಲಿಗೆ ಮತ್ತು ಕೈಗೆ ಮೆಹಂದಿಯಂತಹ ಗುರುತು ಇದೆ, ಇದು ದಿವ್ಯ ರಾಶಿಗಳ ಮಿಲನದಿಂದ ಸಾಧ್ಯವಾಗಿದ್ದು, ಈ ಕಂದ ದೇವಿಯ ರೂಪ ಎಂದು ತಂದೆ ಕರೆದಿದ್ದಾರೆ.
ಇದು ವೈದ್ಯಕೀಯ ವಿಜ್ಞಾನದಲ್ಲಿ ಸಂಭವಿಸುತ್ತದೆ - ಡಾಕ್ಟರ್
ಮತ್ತೊಂದೆಡೆ, ವೈದ್ಯಕೀಯ ವಿಜ್ಞಾನದಲ್ಲಿ ಇದು ಆಗಾಗ್ಗೆ ಸಂಭವಿಸುತ್ತದೆ ಎಂದು ರಹತಗಾಂವ್ ಆರೋಗ್ಯ ಕೇಂದ್ರದ ಪ್ರಭಾರಿ ಡಾ.ಹರ್ಷ್ ಪಟೇಲ್ ಹೇಳಿದರು. ಮೆಹಂದಿ ಇದೆ ಎಂದರೆ ಹೆಣ್ಣು ಮಗು ಅವಧಿಗೂ ಮುನ್ನವೇ ಹುಟ್ಟಿದೆ ಎಂದರ್ಥ. ಅವಧಿಪೂರ್ವ ಹೆರಿಗೆಯಿಂದಾಗಿ ನವಜಾತ ಶಿಶುವಿನಲ್ಲಿ ಇಂತಹ ಗುರುತುಗಳು ಕಾಣಿಸಿಕೊಳ್ಳುತ್ತಿವೆ ಎಂದರು. ಆದರೆ, ಈ ಗುರುತುಗಳು ಕೆಲವೇ ದಿನಗಳಲ್ಲಿ ಅಥವಾ ವಾರದಲ್ಲಿ ಮಾಯವಾಗುತ್ತವೆ ಎಂದಿದ್ದಾರೆ,
ಎಷ್ಟು ಪ್ರಯತ್ನಿಸಿದ್ರೂ Body Weight ಇಳೀತಿಲ್ವಾ? ನೀವು ಈ ತಪ್ಪು ಮಾಡ್ತಿರಬಹುದು!
ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಧ್ಯಪ್ರದೇಶದ ದಂಪತಿ
ಮನೆಯಲ್ಲಿ ಮಗು ಜನಿಸಿದಾಗ, ಪುಟ್ಟ ಅತಿಥಿಯನ್ನು ನೋಡಲು ಮತ್ತು ದಂಪತಿಯನ್ನು ಅಭಿನಂದಿಸಲು ಜನರು ಆಗಮಿಸುತ್ತಾರೆ. ಆದರೆ ಮಧ್ಯಪ್ರದೇಶದ ರತ್ಲಾಂನಲ್ಲಿ ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಆ ಪುಟ್ಟ ಕಂದನ ನೋಡಲು ಜನರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಹೌದು ಈ ಪುಟ್ಟ ಎಲ್ಲಾ ಮಕ್ಕಳಿಗಿಂತ ವಿಭಿನ್ನವಾಗಿದೆ. ಈ ಕಂದನಿಗೆ ಎರಡು ತಲೆ ಮತ್ತು ಮೂರು ಕೈಗಳಿವೆ, ಹೀಗಾಗಿಯೇ ಈ ಮಗುವನ್ನು ನೋಡಲು ಅನೇಕ ಮಂದಿ ಆಸ್ಪತ್ರೆಗೆ ಬಂದಿದ್ದಾರೆ.
ಇದನ್ನು ವಿಜ್ಞಾನದ ಪವಾಡ ಎಂದು ಕರೆದ ವೈದ್ಯರು
ವಾಸ್ತವವಾಗಿ, ರತ್ಲಾಮ್‌ನ ಎಂಸಿಎಚ್ ಆಸ್ಪತ್ರೆಯ ಜವ್ರಾ ನಿವಾಸಿ ಶಹೀನ್ ಎಂಬ ಮಹಿಳೆ ಈ ವಿಶಿಷ್ಟ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ವೈದ್ಯರು ಅವರ ಎರಡು ತಲೆ ಮತ್ತು ಮೂರು ಕೈಗಳನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಜನನದ ಕೆಲವು ಗಂಟೆಗಳವರೆಗೆ, ನವಜಾತ ಶಿಶುವಿನ ಸ್ಥಿತಿಯನ್ನು ನೋಡಿ, ಅವರನ್ನು ಇಂದೋರ್‌ನ ಎಂವೈ ಆಸ್ಪತ್ರೆಯ ಐಸಿಯುಗೆ ದಾಖಲಿಸಿದ್ದಾರೆ. ಮಗುವನ್ನು ಹಿರಿಯ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಪ್ರಸ್ತುತ ಹೆರಿಗೆಯಾದ ಮಹಿಳೆಯನ್ನು ರತ್ಲಾಮ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ಅಂತಹ ಪ್ರಕರಣಗಳು ಕೋಟಿಗಳಲ್ಲಿ ಒಂದಾಗಿದೆ ಎಂದು ವೈದ್ಯರು ಹೇಳುತ್ತಾರೆ, ಅಲ್ಲದೇ ಇದು ವಿಜ್ಞಾನದ ಪವಾಡ ಎಂದೂ ಕರೆಯುತ್ತಾರೆ. ವಿಜ್ಞಾನದ ಭಾಷೆಯಲ್ಲಿ, ಅಂತಹ ಸ್ಥಿತಿಯನ್ನು ಪಾಲಿಸೆಫಾಲಿ ಸ್ಥಿತಿ ಎಂದು ಕರೆಯಲಾಗುತ್ತದೆ.
60ರ ಪ್ರಾಯದಲ್ಲಿ ಮತ್ತೆ ಮಗು ಮಾಡಿಕೊಳ್ಳದಂತೆ ಪತಿಗೆ ಸಲಹೆ ನೀಡಿದ ಕರೀನಾ
ಒಂದು ದೇಹ, ಎರಡು ತಲೆ, ಮೂರು ಕೈಗಳು
ಈ ಮುಗ್ಧ ಕಂದನ ದೇಹಕ್ಕೆ ಎರಡು ತಲೆಗಳಿವೆ ಎಂಬುವುದು ಉಲ್ಲೇಖನೀಯ. ಮೂರು ಕೈಗಳಲ್ಲಿ ಎರಡು ಸಾಮಾನ್ಯವಾಗಿದ್ದರ ಮೂರನೇ ಕೈ ಎರಡು ತಲೆಗಳ ನಡುವೆ ಹಿಂಭಾಗದಲ್ಲಿದೆ. ಇಂತಹ ಸಂದರ್ಭದಲ್ಲಿ ಹಲವು ಮಕ್ಕಳು ಒಂದೋ ಗರ್ಭದಲ್ಲಿ ಸಾಯುತ್ತವೆ ಮತ್ತು ಮಗು ಹುಟ್ಟಿದರೂ ಹೆಚ್ಚು ದಿನ ಬದುಕಲು ಸಾಧ್ಯವಾಗುವುದಿಲ್ಲ ಎಂದು ನವಜಾತ ಶಿಶುವಿಗೆ ಚಿಕಿತ್ಸೆ ನೀಡಿದ ವೈದ್ಯ ನಾವೇದ್ ಖುರೇಷಿ ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯು ಒಂದು ಆಯ್ಕೆಯಾಗಿದ್ದರೂ, ಅವರು ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಎಂದಿದ್ದಾರೆ.