Asianet Suvarna News Asianet Suvarna News

Fake Teachers in Bihar : ಕೆಲಸ ಕಳೆದುಕೊಂಡ 27 ನಕಲಿ ಶಿಕ್ಷಕರು, 2.5 ಕೋಟಿ ವಸೂಲಿ ಮಾಡುವಂತೆ ಕೋರ್ಟ್ ಆದೇಶ!

ಬಿಹಾರದಲ್ಲಿ ವ್ಯಾಪಕವಾಗಿರುವ ನಕಲಿ ಶಿಕ್ಷಕರ ಹಾವಳಿ
ಬಿಹಾರ್ ಶರೀಫ್ ಒಂದರಲ್ಲೇ ಕೆಲಸ ಕಳೆದುಕೊಂಡ 27 ಶಿಕ್ಷಕರು
ಇವರಿಗೆ ನೀಡಲಾಗಿದ್ದ ವೇತನ ವಸೂಲಿ ಮಾಡುವಂತೆ ಆದೇಶ
 

In Bihar Sharif 27 teachers first lost their jobs now they have to return two and a half crore rupees san
Author
Bengaluru, First Published Jan 2, 2022, 7:39 PM IST

ಪಟನಾ (ಜ.2): ಬಿಹಾರ್ ಷರೀಫ್ ನ (Bihar Sharif) ಜಿಲ್ಲಾ ಶಿಕ್ಷಣ ಇಲಾಖೆಯೊಂದಿಗೆ (District Education Department) ನ್ಯಾಯಾಲಯವೂ ಕೂಡ ನಕಲಿ ಶಿಕ್ಷಕರ (Fake Teacher) ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿದ್ದ 27 ನಕಲಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿರುವ ಕೋರ್ಟ್ ತಕ್ಷಣದಿಂದಲೇ ಇವರೆಲ್ಲರನ್ನೂ ಸ್ಥಾನದಿಂದ ವಜಾ ಮಾಡಿದ್ದು ಮಾತ್ರವಲ್ಲದೆ, ಈ ಎಲ್ಲಾ ಶಿಕ್ಷಕರಿಗೆ ನೀಡಲಾಗಿದ್ದ ವೇತನ ಒಟ್ಟು 2.5 ಕೋಟಿ ರೂಪಾಯಿ ಆಗಿದೆ, ಈ ಎಲ್ಲಾ ಮೊತ್ತವನ್ನು ಒಂದೇ ಬಾರಿಗೆ ವಸೂಲಿ (recover) ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯ ಮೇಲ್ಮನವಿ ಪ್ರಾಧಿಕಾರದ (State Appellate Authority) ನ್ಯಾಯಾಧೀಶರು ಇದಕ್ಕೂ ಮುನ್ನ ಈ ಶಿಕ್ಷಕರನ್ನು ಕೆಲಸದಿಂದ ಕಿತ್ತುಹಾಕುವ ಆದೇಶವನ್ನು ನೀಡಿದ್ದರೆ, ಈಗ ಅವರಿಗೆ ನೀಡಿರುವ ಸಂಬಳವನ್ನು ವಸೂಲಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಯಾವುದೇ ಶಿಕ್ಷಕರ ಬಳಿಯಿಂದ ಮೊತ್ತವನ್ನು ಸ್ವಲ್ಪ ಸ್ವಲ್ಪವಾಗಿ ವಸೂಲಿ ಮಾಡುವಂತಿಲ್ಲ. ಎಲ್ಲಾ ನಕಲಿ ಶಿಕ್ಷಕರು ಒಂದೇ ಬಾರಿಗೆ ತಮಗೆ ವೇತನವಾಗಿ ನೀಡಿರುವ ಎಲ್ಲಾ ಹಣವನ್ನು ಸರ್ಕಾರಕ್ಕೆ ವಾಪಸ್ ಕಟ್ಟಬೇಕು ಎಂದು ಅದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯ ಡಿಪಿಓ ಪೂನಂ ಕುಮಾರಿ (DPO Poonam Kumari ) ಈ ಕುರಿತಂತೆ ಬಿಹಾರ್ ಷರೀಫ್ ನ ಬಿಡಿಓ ಅಂಜನ್ ದತ್ತಾ (BDO Anjan Dutta) ಅವರಿಗೆ ಪತ್ರೆ ಬರೆದಿದ್ದು ಸಂಬಂಧಪಟ್ಟ ನಕಲಿ ಶಿಕ್ಷಕರಿಗೆ ನೀಡಲಾಗಿರುವ ಸಂಬಳವನ್ನು ಲೆಕ್ಕ ಹಾಕಿ ಅವರಿಂದ ವಾಪಾಸ್ ಪಡೆಯುವಂತೆ ಪತ್ರ ಮೂಲಕ ಆದೇಶ ನೀಡಿದ್ದಾರೆ.

ನಕಲಿ ಶಿಕ್ಷಕರು 2016ರಲ್ಲಿ ತಮ್ಮ ವಿರುದ್ಧ ಇಲಾಖೆಯ ಕ್ರಮದ ಕುರಿತಂತೆ ಜಿಲ್ಲಾ ಮೇಲ್ಮನವಿ ಪ್ರಾಧಿಕಾರದ (District Appellate Authority) ಮೊರೆ ಹೋಗಿದ್ದರು. ಈ ವೇಳೆ ಇವರ ಪರವಾಗಿ ನಿಂತಿದ್ದ ಪ್ರಾಧಿಕಾರ ನಕಲಿ ಶಿಕ್ಷಕರ ಕೆಲಸವನ್ನು ಮರುಸ್ಥಾಪನೆ ಮಾಡುವಂತೆ ಹೇಳಿತ್ತು. ಆದರೆ ಈ ನಿರ್ಧಾರದ ವಿರುದ್ಧ ಇಲಾಖೆಯು ರಾಜ್ಯ ಮೇಲ್ಮನವಿ ಪ್ರಾಧಿಕಾರದ ಮೆಟ್ಟಿಲೇರಿತ್ತು ಎಂದು ಡಿಪಿಓ ತಿಳಿಸಿದ್ದಾರೆ. ಮೊದಲಿಗೆ ಜಿಲ್ಲಾ ಮೇಲ್ಮನವಿ ಪ್ರಾಧಿಕಾರ ನೀಡಿರುವ ಮರು ಸೇರ್ಪಡೆ ಆದೇಶವೇ ತಪ್ಪು ಎಂದ ರಾಜ್ಯ ಪ್ರಾಧಿಕಾರ ಇವರ ಕೆಲಸವನ್ನು ರದ್ದು ಮಾಡಿದ್ದಲ್ಲದೆ, ಇವರಿಗೆ ನೀಡಿರುವ ಸಂಬಳವನ್ನು ವಸೂಲಿ ಮಾಡುವಂತೆ ಆದೇಶ ನೀಡಿದೆ. ಈ ಎಲ್ಲಾ ಶಿಕ್ಷಕರನ್ನು ಮರುಸೇರ್ಪಡೆ ಮಾಡಿದ ಬಳಿಕ ತಿಂಗಳಿಗೆ 28 ಸಾವಿರ ರೂಪಾಯಿಯಂತೆ ವರ್ಷಕ್ಕೆ 4 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಈ ಎಲ್ಲವೂ ಸೇರಿ 1.80 ಕೋಟಿ ಮೊತ್ತ ಆಗಲಿದ್ದು ಇವನ್ನು ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ.

Tejashwi Yadav Wedding: ಹೃದಯ ಕದ್ದ ಬಾಲ್ಯದ ಗೆಳತಿ, ಈಕೆಗಾಗಿ 44 ಸಾವಿರ ಸಂಬಂಧ ತಿರಸ್ಕರಿಸಿದ್ದ ಲಾಲೂ ಪುತ್ರ!
ಈ ಎಲ್ಲಾ ಶಿಕ್ಷಕರನ್ನು ಬಿಹಾರ ಷರೀಫ್ ಬ್ಲಾಕ್ ಪ್ರದೇಶದ ಶಾಲೆಗಳಲ್ಲಿ ನಿಯೋಜನೆ ಮಾಡಲಾಗಿತ್ತು ಎಂದು ಡಿಪಿಓ ಹೇಳಿದ್ದಾರೆ. ರಾಜ್ಯ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಧೀಶ ಅಶೋಕ್ ಕುಮಾರ್ ಸಿನ್ಹಾ ಅವರು, ಮರುಸೇರ್ಪಡೆ ಆದೇಶ ನೀಡಿದ ಸಂಬಂಧಪಟ್ಟ ಅಧಿಕಾರಿಯನ್ನೂ ಕೂಡ ತಪ್ಪಿತಸ್ಥರೆಂದು ಹೇಳಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಿದ್ದಾರೆ. ಆದರೆ, ಈ ಕುರಿತಾಗಿ ಅ ವ್ಯಕ್ತಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Covid fraud:ಬಿಹಾರದಲ್ಲಿ ಕೋವಿಡ್‌ ವ್ಯಾಕ್ಸಿನ್‌ ತಗೊಂಡ್ರಾ ಮೋದಿ, ಪ್ರಿಯಾಂಕಾ ಚೋಪ್ರಾ
ಇನ್ನು ಬಿಹಾರದಲ್ಲಿ ಈ ರೀತಿಯ ನಕಲಿ ಪ್ರಕರಣಗಳು ಹೊಸದಲ್ಲ. ಕಳೆದ ವರ್ಷ ಜನವರಿಯಲ್ಲಿ ರಾಜ್ಯದ 53 ಸಾವಿರ ಶಿಕ್ಷಕರಿಗೆ ತಾವು ಪಡೆದ ಪ್ರಮಾಣಪತ್ರಗಳು ಅಧಿಕೃತ ಎಂದು ಸಾಬೀತುಪಡಿಸುವಂತೆ ಹೇಳಿತ್ತು. 2007 ರಿಂ 2015ರಲ್ಲಿ ರಾಜ್ಯ ಶಿಕ್ಷಣ ಇಲಾಖೆ ವತಿಯಿಂದ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಬಹುತೇಕ ವ್ಯಕ್ತಿಗಳು ನಕಲಿ ಪ್ರಮಾಣಪತ್ರ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಕುರಿತಂತೆ ಪಟನಾ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ ನಂತರ ವಿಜಿಲೆನ್ಸ್ ಇನ್ವೆಸ್ಟಿಗೇಷನ್ ಬ್ಯೂರೋ ತನಿಖೆ ಆರಂಭಿಸಿತ್ತು. ಇದರ ಅನ್ವಯ ಅಂದಾಜು 1.10 ಲಕ್ಷಕ್ಕೂ ಅಧಿಕ ಶಿಕ್ಷಕರ ಪ್ರಮಾಣಪತ್ರಗಳನ್ನು ಪರಿಶೀಲನೆ ಮಾಡಲಾಗಿತ್ತು.

Follow Us:
Download App:
  • android
  • ios