ನವದೆಹಲಿ(ಫೆ.28): ರೈತರ ಆದಾಯ ಹೆಚ್ಚಿಸಲು ಹಾಗೂ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ‘ಒಂದು ಜಿಲ್ಲೆ ಒಂದು ಉತ್ಪನ್ನ ಉತ್ತೇಜನ’ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಉತ್ಪನ್ನಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಕರ್ನಾಟಕದ 31 ಜಿಲ್ಲೆಗಳು ಸೇರಿದಂತೆ ದೇಶದೆಲ್ಲೆಡೆಯ 728 ಜಿಲ್ಲೆಗಳಲ್ಲಿ ತಲಾ ಒಂದೊಂದು ಬೆಳೆಗಳ ಪ್ರಚಾರಕ್ಕೆ ಸರ್ಕಾರ ಆದ್ಯತೆ ನೀಡಲಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗಳಿಂದ ಮಾಹಿತಿಯನ್ನು ಪಡೆದು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕೃಷಿ, ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಚಲಚರ ಸಾಕಾಣಿಕೆ ಹಾಗೂ ಇತರ ವಲಯಗಳಿಂದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಉದಾಹರಣೆಗೆ ಭತ್ತವನ್ನು 40 ಜಿಲ್ಲೆಗಳಲ್ಲಿ ಉತ್ತೇಜಿಸಲಾಗುವುದು. ಗೋಧಿಯನ್ನು 5 ಜಿಲ್ಲೆಗಳಲ್ಲಿ , ಬೇಳೆಕಾಳು- ದವಸ- ಧಾನ್ಯಗಳನ್ನು 25 ಜಿಲ್ಲೆಗಳಲ್ಲಿ, ವಾಣಿಜ್ಯ ಬೆಳೆಗಳನ್ನು 22 ಜಿಲ್ಲೆಗಳಲ್ಲಿ ಪ್ರೋತ್ಸಾಹಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.