Asianet Suvarna News Asianet Suvarna News

ಕಾಂಗ್ರೆಸ್ಸಿಂದ ‘ಜಲಜೀವನ್ ಮಿಷನ್’ ಜಾರಿ ನಿಧಾನ: ರಾಜೀವ್ ಚಂದ್ರಶೇಖರ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇವಲ 3 ವರ್ಷಗಳಲ್ಲಿ ಸುಮಾರು 12 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕಳೆದ 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ 4 ಕೋಟಿ ಮನೆಗಳಿಗೆ ಮಾತ್ರ ನಲ್ಲಿ ನೀರನ್ನು ಒದಗಿಸಲಾಗಿದೆ. ಇದು ಕಾಂಗ್ರೆಸ್ ಆಳ್ವಿಕೆಯ ಸತ್ಯವಾಗಿದ್ದು, ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ಮಾಡುತ್ತಿರುವ ಸುಳ್ಳುಗಳಿಗೆ ಕಡಿವಾಣ ಹಾಕಲಿ: ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ 
 

Implementation of jal jeevan mission is slow by congress Says rajeev chandrashekhar grg
Author
First Published Jul 11, 2024, 6:30 AM IST | Last Updated Jul 11, 2024, 10:07 AM IST

ನವದೆಹಲಿ(ಜು.11):  ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಜಲಜೀವನ್ ಮಿಷನ್’ ಯೋಜನೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಮೆಗತಿಯಲ್ಲಿ ಜಾರಿಗೊಳಿಸುತ್ತಿದೆ. ಆ ಮೂಲಕ ರಾಜ್ಯದ ಬಡವರಿಗೆ ಸುರಕ್ಷಿತ ಕುಡಿಯುವ ನೀರಿನ ಹಕ್ಕನ್ನು ನಿರಾಕರಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಆರೋಪಿಸಿದ್ದಾರೆ. 

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಬಡವರಿಗೆ ಪೈಪ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ನಿಧಾನಗತಿ ಅನುಸರಿಸುತ್ತಿದೆ. 2023-24ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ 7.1 ಲಕ್ಷ ಮನೆಗಳಿಗೆ ಮಾತ್ರ ಕೊಳವೆ ನೀರು ಪೂರೈಸಲಾಗಿದೆ. ಆದರೆ, 2021-22 ಹಾಗೂ 2022-23ರ ಆರ್ಥಿಕ ವರ್ಷದಲ್ಲಿ ಕ್ರಮವಾಗಿ 18.76 ಹಾಗೂ 20.56 ಲಕ್ಷ ಮನೆಗಳಿಗೆ ಕೊಳವೆ ನೀರು ಪೂರೈಸಲಾಗಿತ್ತು ಎಂದಿದ್ದಾರೆ.

ವಯನಾಡಿಗೆ ಪ್ರಿಯಾಂಕಾ: ರಾಜೀವ್‌ ಚಂದ್ರಶೇಖರ್ ಕಿಡಿ

ಅದೇ ರೀತಿ ಕೇರಳದಲ್ಲಿಯೂ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಆ ಮೂಲಕ ಸುಮಾರು 75 ವರ್ಷಗಳ ಕಾಲ ಕೇರಳದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷ ಸಿಪಿಎಂ, ಅಲ್ಲಿನ ಬಡವರ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ. ಈಗಲೂ ಅಲ್ಲಿನ ಲಕ್ಷಾಂತರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇವಲ 3 ವರ್ಷಗಳಲ್ಲಿ ಸುಮಾರು 12 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕಳೆದ 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ 4 ಕೋಟಿ ಮನೆಗಳಿಗೆ ಮಾತ್ರ ನಲ್ಲಿ ನೀರನ್ನು ಒದಗಿಸಲಾಗಿದೆ. ಇದು ಕಾಂಗ್ರೆಸ್ ಆಳ್ವಿಕೆಯ ಸತ್ಯವಾಗಿದ್ದು, ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ಮಾಡುತ್ತಿರುವ ಸುಳ್ಳುಗಳಿಗೆ ಕಡಿವಾಣ ಹಾಕಲಿ ಎಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios