ತಾಳ್ಮೆಯೇ ಇಲ್ಲದ ಜನ: ಡೋರ್ ಲಾಕ್ ಆಯ್ತು ಅಂತ ರೈಲಿನ ಕಿಟಕಿ ಬಾಗಿಲನ್ನೇ ಒಡೆದರು: ನಷ್ಟ ತುಂಬೋದ್ಯಾರು

ಬಿಹಾರದಿಂದ ಮುಂಬೈಗೆ ಹೋಗುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೇ ರೈಲಿನ ಗಾಜು ಒಡೆದ ಘಟನೆ ನಡೆದಿದೆ. ರೈಲು ತುಂಬಿ ತುಳುಕುತ್ತಿದ್ದರಿಂದ ಒಳಗಿದ್ದ ಪ್ರಯಾಣಿಕರು ಬಾಗಿಲು ಹಾಕಿಕೊಂಡಿದ್ದು, ಹೊರಗಿದ್ದ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. 

impatience passenger broke Chhapra-Mumbai Antyodaya Express train window glass door

ಭಾರತದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಾಪಾಡಲು ಯಾವುದೇ ಕಠಿಣ ಕಾನೂನುಗಳಿಲ್ಲ, ಇದೇ ಕಾರಣಕ್ಕೆ ಜನ ಸಾರ್ವಜನಿಕ ವಸ್ತುಗಳನ್ನು ಮನಸ್ಸೋ ಇಚ್ಚೆ ಬಂದಂತೆ ಹಾಳು ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಸರ್ಕಾರಿ ಬಸ್‌ ಸ್ಟ್ಯಾಂಡ್‌ಗಳು, ಸರ್ಕಾರಿ ಬಸ್‌ಗಳು, ಸರ್ಕಾರಿ ಆಸ್ಪತ್ರೆಗಳು, ನಾವು ಕಟ್ಟುವ ತೆರಗಿ ಹಣದಿಂದಲೇ ಈ ಸಾರ್ವಜನಿಕ ಸ್ವತ್ತುಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಅನೇಕರಿಗೆ ಇಲ್ಲ ಇದೇ ಕಾರಣಕ್ಕೆ ಸಾರ್ವಜನಿಕ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ಹಾನಿ ಮಾಡಿ ಲಕ್ಷಾಂತರ ರೂ ಹಾನಿ ಮಾಡುತ್ತಾರೆ.  ಅದೇ ರೀತಿ ಇಲ್ಲೊಂದು ಕಡೆ ರೈಲನ್ನು ಪ್ರಯಾಣಿಕರೇ ಜನ ಹೆಚ್ಚಿದ್ದಾರೆ ಎಂದು ಒಳಗಿನಿಂದ ಲಾಕ್ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಹೊರಗಿದ್ದ ಜನ ರೈಲಿನ ಕಿಟಿಕಿ ಗಾಜುಗಳನ್ನು ಕಲ್ಲಿನಿಂದ ಒಡೆದು ಹುಡಿ ಮಾಡಿದ್ದಾರೆ. ಜೊತೆಗೆ ಡೋರಿನ ಗಾಜನ್ನು ಕೂಡ ಗಟ್ಟಿಯಾದ ವಸ್ತುವಿನಿಂದ ಒಡೆದು ಹಾನಿ ಮಾಡಿದ್ದಾರೆ. 

ಬಿಹಾರದ ಛಪ್ರದಿಂದ ಮುಂಬೈಗೆ ಹೋಗುತ್ತಿದ್ದ ಅಂತ್ಯೋದಯ  ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ರೈಲು ಬಸ್ತಿ ರೈಲು ನಿಲ್ದಾಣಕ್ಕೆ ಬಂದು ತಲುಪಿದೆ. ಈ ವೇಳೆ ರೈಲೊಳಗೆ ಜನ ಕಿಕ್ಕಿರಿದು ತುಂಬಿದ್ದಾರೆ. ಹೀಗಾಗಿ ಒಳಗಿದ್ದ ಜನರೇ ಹೊರಗಿನಿಂದ ಮತ್ತಷ್ಟು ಜನರು ಬಾರದಂತೆ ರೈಲಿನ ಬಾಗಿಲನ್ನು ಒಳಗಿನಿಂದ ಬಂದ್ ಮಾಡಿದ್ದಾರೆ. ಇದು ಹೊರಗಿರುವ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಆಸ್ತಿ ಎಂಬುದನ್ನು ಯೋಚನೆ ಮಾಡದೇ ಜನ ದೊಡ್ಡ ದೊಡ್ಡ ಕಲ್ಲು ತೆಗೆದುಕೊಂಡು ಬಂದು ರೈಲಿನ ಬಾಗಿಲಿನ ಗ್ಲಾಸ್‌, ಕಿಟಕಿ ಗ್ಲಾಸ್‌ಗಳನ್ನು ಒಡೆದಿದ್ದಾರೆ. ಹೊರಗಿದ್ದ ಜನ ಎಷ್ಟು ಆಕ್ರೋಶಗೊಂಡಿದ್ದರೆಂದರೆ ಕಿಟಕಿಯಲ್ಲಿರುವ ಕಬ್ಬಿಣದ ರಾಡ್‌ಗಳನ್ನು ಕೂಡ ತಿರುಚಿ ಮುರಿದು ಹಾಕಿದ್ದಾರೆ. ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಜನರ ತಾಳ್ಮೆಗೆಟ್ಟ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಸಾರ್ವಜನಿಕ ಆಸ್ತಿಯನ್ನು ಇಷ್ಟು ಸುಲಭವಾಗಿ ಹಾನಿ ಮಾಡಿರುವುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ರಕ್ಷಣಾ ಪಡೆ ಬಸ್ತಿಯಲ್ಲಿ ರೈಲ್ವೆ ಕಾಯ್ದೆಯ 145ರ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ ರೈಲು ತುಂಬಿ ತುಳುಕಿದ್ದು, ಒಳಗಿದ್ದ ಪ್ರಯಾಣಿಕರು ರೈಲಿನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದೆ ಇದಕ್ಕೆ ಕಾರಣ ಇದರಿಂದ ಹೊರಗಿದ್ದ ಜನರ ಆಕ್ರೋಶದ ಕಟ್ಟೆಯೊಡೆದಿದ್ದು, ಇದಕ್ಕೆ ರೈಲಿನ ಕಿಟಕಿ ಬಾಗಿಲುಗಳು ಬಲಿಯಾಗಿವೆ. ಒಬ್ಬರು ರೈಲಿನ ಕಿಟಕಿಯ ಗ್ಲಾಸ್‌ಗಳನ್ನು ಡೋರ್‌ನ ಗ್ಲಾಸ್‌ಗಳನ್ನು ಒಡೆದರೆ ಇತರರು ರೈಲಿನ ಕಬ್ಬಿಣದ ರಾಡುಗಳನ್ನು ಕೂಡ ತಿರುವಿ ಹಾಕಿ ಒಳನುಗ್ಗಿದರು ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಯಾರೊಬ್ಬರನ್ನು ಇದುವರೆಗೆ ಬಂಧಿಸಿಲ್ಲ, ಘಟನೆಗೆ ಸಂಬಂಧಿಸಿದಂತೆ ಹಿರಿಯ ವಿಭಾಗೀಯ ಭದ್ರತಾ ಕಮೀಷನರ್ ಚಂದ್ರ ಮೋಹನ್ ಪ್ರತಿಕ್ರಿಯೆ ನೀಡಿದ್ದು, ನಮಗೆ ಧ್ವಂಸಗೊಳಿಸಿದ ದೃಶ್ಯದ ವೀಡಿಯೋ ಸಿಕ್ಕಿದೆ, ಈ ಪ್ರಕರಣದಲ್ಲಿ ಭಾಗಿಯಾದವರ ಗುರುತು ಪತ್ತೆಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ. 

ವೀಡಿಯೋ ಮಾತ್ರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಮನಸ್ಥಿತಿಯ ಜನರಿರುವಾಗ ದೇಶ ಮುಂದುವರೆಯಬೇಕು ಎಂದರೆ ಹೇಗೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ ಹಾಗೆಯೇ ದೇಶಕ್ಕೆ ಬರೀ ಒಳ್ಳೆಯ ಸರ್ಕಾರ ಬಂದರೆ ಸಾಲದು ಒಳ್ಳೆಯ ಪ್ರಜೆಗಳು ಕೂಡ ಇರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಜನರೇ ತಮಗೆ ಬುಲೆಟ್ ಟ್ರೈನ್ ಬೇಕು ಎಂದು ಬಯಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ. 

 
 
 
 
 
 
 
 
 
 
 
 
 
 
 

A post shared by The Tatva (@thetatvaindia)

 

Latest Videos
Follow Us:
Download App:
  • android
  • ios