ಅಯೋಧ್ಯೆ ಮಸೀದಿಗೆ ಶಿಲಾನ್ಯಾಸ ಮಾಡಲಿದ್ದಾರೆ ಮೆಕ್ಕಾದ ಇಮಾಮ್, ಇಲ್ಲಿರಲಿದೆ ವಿಶ್ವದ ಅತಿದೊಡ್ಡ ಕುರಾನ್
ಬಾಬರಿ ಮಸೀದಿಯ ಸ್ಥಳದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯನ್ನು ನಿರ್ಮಿಸಲಾಗುತ್ತದೆ. ಶ್ರೀರಾಮಮಂದಿರ ಇರುವ ಅಯೋಧ್ಯೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಧನ್ನಿಪುರದಲ್ಲಿ ಇದರ ನಿರ್ಮಾಣ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರಿಗೆ ಈ ಭೂಮಿಯನ್ನು ನೀಡಿದೆ.
ನವದೆಹಲಿ (ಡಿ.15): ಬಾಬರಿ ಮಸೀದಿಯ ಬದಲಿಗೆ ಅಯೋಧ್ಯೆಯಲ್ಲಿ ಪ್ರಸ್ತಾವಿತ ಮಸೀದಿಗೆ ಶಿಲಾನ್ಯಾಸವನ್ನು ಇಮಾಮ್-ಎ-ಹರಾಮ್ ಅಥವಾ ಮೆಕ್ಕಾದ ಕಾಬಾದ ಪವಿತ್ರ ಮಸೀದಿಯಲ್ಲಿ ನಮಾಜ್ ನಡೆಸುವ ಇಮಾಮ್ ಮಾಡಲಿದ್ದಾರೆ. ಬಾಬರಿ ಮಸೀದಿಯ ಸ್ಥಳದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯನ್ನು ನಿರ್ಮಾಣ ಮಾಡಲಾಗುತ್ತದೆ. ಅಯೋಧ್ಯೆಯಿಂದ 25 ಕಿಮೀ ದೂರದಲ್ಲಿರುವ ಧನ್ನಿಪುರದಲ್ಲಿ ಇದರ ನಿರ್ಮಾಣವಾಗಲಿದೆ. ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರಿಗೆ ಈ ಪ್ರದೇಶದಲ್ಲಿ ಜಾಗವನ್ನು ನೀಡಿದೆ. ವರದಿಯ ಪ್ರಕಾರ, ಮುಂಬೈ ಮೂಲದ ಬಿಜೆಪಿ ನಾಯಕ ಹಾಗೂ ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಹಾಜಿ ಅರಾಫತ್ ಶೇಖ್, ಅಯೋಧ್ಯೆಯಲ್ಲಿ ಹೊಸ ಮಸೀದಿಯು ಭಾರತದಲ್ಲಿಯೇ ಅತ್ಯಂತ ದೊಡ್ಡದಾಗಿರಲಿದೆ ಎಂದು ಹೇಳಿದ್ದಾರೆ. ಇದು 21 ಅಡಿ ಎತ್ತರ ಮತ್ತು 36 ಅಡಿ ಅಗಲದ ವಿಶ್ವದ ಅತಿದೊಡ್ಡ ಕುರಾನ್ ಅನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಮಸೀದಿಯನ್ನು ನಿರ್ಮಿಸುವ ಕಾರ್ಯವನ್ನು ಆರಂಭದಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ವಹಿಸಿಕೊಂಡಿದೆ. ಈ ಟ್ರಸ್ಟ್ 2020ರ ಜುಲೈ 29 ರಂದು ರಚನೆಯಾಯಿತು. ಆದಾಗ್ಯೂ, ಅಕ್ಟೋಬರ್ 2023 ರಲ್ಲಿ, ಮುಂಬೈನಲ್ಲಿ ಫೌಂಡೇಶನ್ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಭಾಗವಹಿಸಿದ್ದ ಸಮಾರಂಭದಲ್ಲಿ, ಅದು ಮಸೀದಿಗೆ ಮಸೀದಿ ಮುಹಮ್ಮದ್ ಬಿನ್ ಅಬ್ದುಲ್ಲಾ ಎಂದು ಹೆಸರಿಸಲಾಗುವುದು ಎಂದು ಘೋಷಿಸಿದರು.
"ಮಸೀದಿಯು ಇಸ್ಲಾಮಿನ ಐದು ಸ್ತಂಭಗಳಾದ ಕಲಿಮಾ, ನಮಾಜ್, ರೋಜಾ, ಹಜ್ ಮತ್ತು ಜಕಾತ್ ಅನ್ನು ಸಂಕೇತಿಸುವ ಐದು ಮಿನಾರ್‌ಗಳನ್ನು ಹೊಂದಿರುತ್ತದೆ" ಎಂದು ಶೇಖ್ ತಿಳಿಸಿದ್ದಾರೆ. ಮಸೀದಿಯ ಹೊರತಾಗಿ, ಸಂಕೀರ್ಣವು ಕ್ಯಾನ್ಸರ್ ಆಸ್ಪತ್ರೆ, ಶಾಲೆಗಳು ಮತ್ತು ಕಾಲೇಜುಗಳು, ಮ್ಯೂಸಿಯಂ ಗ್ರಂಥಾಲಯ ಮತ್ತು ಸಂಪೂರ್ಣ ಸಸ್ಯಾಹಾರಿ ಅಡುಗೆಮನೆಯನ್ನು ಹೊಂದಿದ್ದು, ಸಂದರ್ಶಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಮಸೀದಿ ನಿರ್ಮಾಣ ವಿನ್ಯಾಸ ಮಧ್ಯಪ್ರಾಚ್ಯ ದೇಶಗಳ ಶೈಲಿಗೆ ಬದಲಾಯಿಸಿದ ಮುಸ್ಲಿಂ ಟ್ರಸ್ಟ್
ವಝು ಖಾನಾದ ಬಳಿ ಇರುವ ಬೃಹತ್ ಅಕ್ವೇರಿಯಂ ಅಥವಾ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳನ್ನು ಹೊಂದಿರುವ ಅಬ್ಯುಲೇಷನ್ ಜಾಗವು ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿದೆ ಎಂದು ಶೇಖ್ ಹೇಳಿದರು. ಮಸೀದಿಯ ಸೌಂದರ್ಯವು ತಾಜ್ ಮಹಲ್ ಅನ್ನು ಮೀರಿಸುತ್ತದೆ ಎಂದು ಶೇಖ್ ಹೇಳಿದ್ದಾರೆ. “ಸಂಜೆ ಆಗುತ್ತಿದ್ದಂತೆ ಮಸೀದಿಯಲ್ಲಿನ ಕಾರಂಜಿಗಳು ಉದಯವಾಗಲಿದೆ. ಇದು ತಾಜ್ ಮಹಲ್‌ಗಿಂತ ಹೆಚ್ಚು ಸುಂದರವಾಗಿರುತ್ತದೆ ಮತ್ತು ಎಲ್ಲರೂ ಇಲ್ಲಿ ಪ್ರಾರ್ಥಿಸದಿದ್ದರೂ ಶಾಂತಿ ಮತ್ತು ಸೌಹಾರ್ದತೆಯ ಈ ಸ್ಮಾರಕವನ್ನು ನೋಡಲು ಎಲ್ಲಾ ಧರ್ಮಗಳ ಜನರು ಬರುತ್ತಾರೆ, ”ಎಂದು ಶೇಖ್ ಹೇಳಿದರು.
ಅಯೋಧ್ಯೆ ಹೊಸ ಮಸೀದಿ ಜಾಗವೂ ಈಗ ವಿವಾದದಲ್ಲಿ!