Asianet Suvarna News Asianet Suvarna News

ಕೋವಿ​ಡ್‌ನ 2ನೇ ಅಲೆ​ಗೆ 800 ವೈದ್ಯ​ರ ಬಲಿ: ಐಎಂಎ!

* ಇಂದು ರಾಷ್ಟ್ರೀಯ ವೈದ್ಯರ ದಿನ: ಮೋದಿ ಭಾಷಣ

* ಕೋವಿ​ಡ್‌ನ 2ನೇ ಅಲೆ​ಗೆ 800 ವೈದ್ಯ​ರ ಬಲಿ: ಐಎಂಎ

* ಕರ್ನಾಟಕದಲ್ಲಿ 9 ಮಂದಿ ಸೇರಿ 798 ವೈದ್ಯರು ಕೊರೋನಾ ವೈರ​ಸ್‌ಗೆ ಬಲಿ

IMA flags 800 doctor deaths in second wave pod
Author
Bangalore, First Published Jul 1, 2021, 7:21 AM IST
  • Facebook
  • Twitter
  • Whatsapp

ನವ​ದೆ​ಹ​ಲಿ(ಜು.01): ಇಡೀ ದೇಶ​ವನ್ನೇ ಇನ್ನಿ​ಲ್ಲ​ದಂತೆ ಬಾಧಿ​ಸಿದ ಕೋವಿಡ್‌ 2ನೇ ಅಲೆ​ಯಿಂದಾಗಿ ಕರ್ನಾಟಕದಲ್ಲಿ 9 ಮಂದಿ ಸೇರಿ 798 ವೈದ್ಯರು ಕೊರೋನಾ ವೈರ​ಸ್‌ಗೆ ಬಲಿ​ಯಾ​ಗಿ​ದ್ದಾರೆ ಎಂದು ಭಾರ​ತೀಯ ವೈದ್ಯ​ಕೀಯ ಸಂಘ​ಟ​ನೆ​(​ಐಎಂಎ) ಮಾಹಿತಿ ನೀಡಿದೆ.

ಇದ​ರಲ್ಲಿ ದೆಹ​ಲಿ​ಯಲ್ಲಿ ಅತಿ​ಹೆಚ್ಚು 128, ಬಿಹಾ​ರ​ದಲ್ಲಿ 115 ಮತ್ತು ಉತ್ತರ ಪ್ರದೇ​ಶ​ದಲ್ಲಿ 79 ವೈದ್ಯರು ಬಲಿ​ಯಾ​ಗಿ​ದ್ದಾರೆ. ಇನ್ನು ಅತೀ ವೇಗ​ವಾಗಿ ಹಬ್ಬುವ ಆತಂಕ ಸೃಷ್ಟಿ​ಸುವ ಕೊರೋನಾ ವೈರ​ಸ್‌ನ ಡೆಲ್ಟಾಪ್ಲಸ್‌ ಪ್ರಭೇದ ಪತ್ತೆ​ಯಾದ ಮಹಾ​ರಾಷ್ಟ್ರ ಮತ್ತು ಕೇರ​ಳ​ದಲ್ಲೂ 2ನೇ ಅಲೆಯ ವೇಳೆ ಕ್ರಮ​ವಾಗಿ 23 ಮತ್ತು 24 ವೈದ್ಯರು ಸಾವಿ​ಗೀ​ಡಾ​ಗಿ​ದ್ದಾರೆ. ಆದಾಗ್ಯೂ, ಪುದು​ಚೇ​ರಿ​ಯಲ್ಲಿ ಕೇವಲ ಓರ್ವ ವೈದ್ಯ ಬಲಿ​ಯಾ​ಗಿ​ದ್ದಾರೆ.

ಇಂದು ರಾಷ್ಟ್ರೀಯ ವೈದ್ಯರ ದಿನ: ಮೋದಿ ಭಾಷಣ

 

ಗುರುವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಯಲಿದೆ. ಈ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವೈದ್ಯಕೀಯ ಸಿಬ್ಬಂದಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಜು.1 ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬಿಧನ್‌ ಚಂದ್ರ ರಾಯ್‌ ಅವರ ಜನ್ಮದಿನಾಚರಣೆ ಮತ್ತು ಪುಣ್ಯತಿಥಿ ಆಗಿದೆ. ಈ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಗುರುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ ಮಧ್ಯಾಹ್ನ 3 ಗಂಟೆಗೆ ವೈದ್ಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ವೈದ್ಯರ ದಿನದ ನಿಮಿತ್ತ ಟ್ವೀಟ್‌ ಮಾಡಿರುವ ಮೋದಿ, ‘ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರ ಪ್ರಯತ್ನಕ್ಕೆ ಭಾರತ ಹೆಮ್ಮೆ ಪಡುತ್ತಿದೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios