Asianet Suvarna News Asianet Suvarna News

ಕೋವಿಡ್‌ ವೇಳೆ ಶವ ಚೀಲದ ಅಕ್ರಮ: ಮಾಜಿ ಮೇಯರ್‌ಗೆ ಜಾಮೀನು ನಿರಾಕರಣೆ

ಕೋವಿಡ್‌ ಸಮಯದಲ್ಲಿ ಮೃತ ದೇಹಗಳನ್ನು ಇರಿಸುವ ಚೀಲಗಳಲ್ಲಿ ಅಕ್ರಮದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಮೇಯರ್‌ ಕಿಶೋರಿ ಪೆಡ್ನೇಕರ್‌ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. 

Illegal storage of covid kit during covid Mumbai court has denied anticipatory bail to former Mumbai mayor Kishori Pednekar akb
Author
First Published Aug 30, 2023, 10:06 AM IST

ಮುಂಬೈ: ಕೋವಿಡ್‌ ಸಮಯದಲ್ಲಿ ಮೃತ ದೇಹಗಳನ್ನು ಇರಿಸುವ ಚೀಲಗಳಲ್ಲಿ ಅಕ್ರಮದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಮೇಯರ್‌ ಕಿಶೋರಿ ಪೆಡ್ನೇಕರ್‌ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. 

ಕಿಶೋರಿ ಅವರು 2019 ನವೆಂಬರ್‌ನಿಂದ 2022 ಮಾರ್ಚ್‌ವರೆಗೆ ಮುಂಬೈ ಪಾಲಿಕೆ ಮೇಯರ್‌ ಆಗಿದ್ದರು. ಈ ವೇಳೆ ಕೋವಿಡ್‌ ಸಮಯದಲ್ಲಿ ಸೋಂಕಿನಿಂದ ಮೃತಪಟ್ಟವರನ್ನು ಇರಿಸುವ ಚೀಲಗಳ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿಯ ಕಿರೀಟ್‌ ಸೋಮಯ್ಯ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಇದರಲ್ಲಿ ಬಂಧನವಾಗುವ ಭೀತಿಯಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸೆಷನ್‌ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚಿಸಿ ಸರ್ಕಾರ ಆದೇಶ

ಕಳೆದ ಸರ್ಕಾರದ ಅವಧಿಯಲ್ಲಿ ಕೊರೋನಾ ಸೋಂಕು ಅಬ್ಬರದ ವೇಳೆ ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಔಷಧ, ಉಪಕರಣ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಹಿಂದೆ ನೀಡಿದ್ದ ವರದಿಯಲ್ಲಿನ ಗಂಭೀರವಾದ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ತನಿಖೆಗೆ ಆದೇಶಿಸಲಾಗಿದೆ. ಆಯೋಗವು 3 ತಿಂಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಏಷ್ಯಾಕಪ್ ಟೂರ್ನಿಗೂ ಮುನ್ನ ಲಂಕಾದ 2 ಸ್ಟಾರ್ ಆಟಗಾರರಿಗೆ ಕೊರೋನಾ ಪಾಸಿಟಿವ್! ಆತಂಕದಲ್ಲಿ ಲಂಕಾ ಪಾಳಯ

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40 ಪರ್ಸೆಂಟ್‌ ಆರೋಪದ ತನಿಖೆ ನಡೆಸಲು ತನಿಖಾ ಆಯೋಗ ರಚನೆಯಾದ ಬೆನ್ನಲ್ಲೇ ಇದೀಗ, 2021ರಲ್ಲಿ ಕೊರೋನಾ ಸೋಂಕು ನಿವಾರಣೆ ಮತ್ತು ತಡೆಗಟ್ಟಲು ಔಷಧ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗ ರಚಿಸಲಾಗಿದೆ. ಆಯೋಗದ ಅಧ್ಯಕ್ಷರಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಅವರು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದವರು.

ಕೋವಿಡ್ ವೇಳೆ ರೋಗಿಯಿಂದ ಹೆಚ್ಚುವರಿ ಹಣ: ಮರುಪಾವತಿಸಿದ ಇ.ಟಿ.ಸಿ.ಎಂ ಆಸ್ಪತ್ರೆ

Follow Us:
Download App:
  • android
  • ios