Asianet Suvarna News Asianet Suvarna News

ಪೇಪರ್‌ ಕಪ್‌ನಲ್ಲಿ ಚಹಾ ಸೇವಿಸಿದ್ರೆ ದೇಹ ಸೇರುತ್ತೆ ಪ್ಲಾಸ್ಟಿಕ್‌!

ಪೇಪರ್‌ ಕಪ್‌ನಲ್ಲಿ ಚಹಾ ದೇಹಕ್ಕೆ ಸೇರುತ್ತೆ ಪ್ಲಾಸ್ಟಿಕ್‌!|  ಖರಗ್‌ಪುರ ಐಐಟಿ ಸಂಶೋಧನೆ

IIT study cites risk of plastic contamination in drinking tea from disposable paper cups pod
Author
Bangalore, First Published Nov 9, 2020, 8:23 AM IST

ನವದೆಹಲಿ(ನ.09): ಬಳಸಿ ಎಸೆಯುವ ಪೇಪರ್‌ ಕಪ್‌ನಲ್ಲಿ ಚಹಾ ಅಥವಾ ಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಹುಷಾರ್‌. ನಿಮ್ಮ ದೇಹದ ಒಳಕ್ಕೆ ಪ್ಲಾಸ್ಟಿಕ್‌ ಕಣಗಳು ಸೇರಿಕೊಳ್ಳುತ್ತವೆ. ಖರಗ್‌ಪುರ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಪೇಪರ್‌ ಕಪ್‌ನಲ್ಲಿ ಚಹಾ ಸೇವಿಸುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ದೇಹಕ್ಕೆ ಹೋಗುತ್ತವೆ.

ಪೇಪರ್‌ ಕಪ್‌ಗಳಲ್ಲಿ ಬಿಸಿ ದ್ರಾವಣವನ್ನು ಹಾಕಿದ ವೇಳೆ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಹಾಗೂ ವಿಷಕಾರಿ ಅಂಶಗಳು ಸೇರಿಕೊಂಡಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಪೇಪರ್‌ ಕಪ್‌ಗಳು ತೆಳುವಾದ ಪ್ಲಾಸಿಕ್‌ ಪದರವನ್ನು ಹೊಂದಿರುತ್ತವೆ. ಕೆಲವೊಮ್ಮೆ ಪಾಲಿಮರ್‌ಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ 15 ನಿಮಿಷದಲ್ಲಿ ಅವು ಬಿಸಿ ನೀರಿನಲ್ಲಿ ಕರಗುತ್ತವೆ ಎಂದು ಐಐಟಿಯ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯಲ್‌ ತಿಳಿಸಿದ್ದಾರೆ.

‘ನಾವು ನಡೆಸಿದ ಸಂಶೋಧನೆಯಿಂದ 100 ಎಂಎಲ್‌ ಬಿಸಿ ನೀರನ್ನು ಪೇಪರ್‌ ಕಪ್‌ಗಳಲ್ಲಿ 15 ನಿಮಿಷಗಳ ಕಾಲ ಇಟ್ಟರೆ 25,000 ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಬಿಡುಗಡೆ ಆಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ದಿನಕ್ಕೆ ಸರಾಸರಿ 3 ಕಪ್‌ ಟೀ ಅಥವಾ ಕಾಫಿಯನ್ನು ಪೇಪರ್‌ ಕಪ್‌ನಲ್ಲಿ ಸೇವಿಸಿದರೆ 75,000 ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ದೇಹಕ್ಕೆ ಸೇರುತ್ತವೆ. ಅವು ಬರಿಗಣ್ಣಿಗೆ ಕಾಣಿಸುವುದಿಲ್ಲ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios