ಭುವನೇಶ್ವರ(ಜು.20): ಈಗಾಗಲೇ ಕೊರೋನಾ ವೈರಸ್‌ ಪ್ರಕಣಗಳು 10 ಲಕ್ಷದ ಗಡಿ ದಾಟಿರುವ ಮಧ್ಯೆಯೇ, ಮಳೆಗಾಲ ಮತ್ತು ಚಳಿಗಾಲದಲ್ಲಿ ಕೊರೋನಾ ಪ್ರಕರಣಗಳು ಇನ್ನಷ್ಟುಜಾಸ್ತಿ ಆಗಲಿದೆ ಎನ್ನುವ ಆಘಾತಕಾರಿ ವಿಚಾರವನ್ನು ಐಐಟಿ- ಭುವನೇಶ್ವರ್‌ ಮತ್ತು ಏಮ್ಸ್‌ ಜಂಟಿಯಾಗಿ ನಡೆಸಿದ ಅಧ್ಯಯನ ತಿಳಿಸಿದೆ.

"

ರಾಜ್ಯದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆ ಕ್ಷೀಣ!

ಮಳೆ, ತಾಪಮಾನ ಇಳಿಕೆ ಮತ್ತು ಶೀತ ವಾತಾವರಣ ಕೊರೋನಾ ಹರಡಲು ಅನುಕೂಲಕರವಾಗಿದೆ. ತಾಪಮಾನ ಏರಿಕೆ ವೈರಸ್‌ ಹರಡುವಿಕೆಯನ್ನು ಕಡಿಮೆಗೊಳಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಾಪಮಾನ ಮತ್ತು ವಾತಾವರಣದ ಆದ್ರ್ರತೆ ಕೊರೋನಾ ಪ್ರಕರಣಗಳು ಏರಿಳಿಕೆಯಾಗುವುದರ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಒಂದು ವೇಳೆ ತಾಪಮಾನದಲ್ಲಿ 1 ಡಿಗ್ರಿಯಷ್ಟುಏರಿಕೆಯಾದರೆ ಅದು ಶೇ.0.99ರಷ್ಟುಪ್ರಕರಣಗಳ ಇಳಿಕೆಗೆ ಕಾರಣವಾಗಲಿದೆ ಮತ್ತು ವೈರಸ್‌ ದ್ವಿಗುಣಗೊಳ್ಳುವ ಪ್ರಮಾಣ 1.3 ದಿನಕ್ಕೆ ಹೆಚ್ಚಳಗೊಳ್ಳಲಿದೆ. ಅದೇ ರೀತಿ ಆದ್ರ್ರತೆ ಪ್ರಮಾಣ ಹೆಚ್ಚಾದರೆ ಕೊರೋನಾ ಪ್ರಕರಣಗಳು ದುಪ್ಪಟ್ಟಾಗುವ ಪ್ರಮಾಣ 1.18 ದಿನಕ್ಕೆ ಏರಿಕೆ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಏಪ್ರಿಲ್‌ನಿಂದ ಜೂನ್‌ ಅವಧಿಯಲ್ಲಿ ಭಾರತದ 28 ರಾಜ್ಯಗಳಲ್ಲಿನ ವಾತಾವರಣದಲ್ಲಿ ಸೋಂಕಿನ ವೃದ್ಧಿಯನ್ನು ಆಧರಿಸಿ ಅಧ್ಯಯನ ನಡೆಸಲಾಗಿದೆ.