ಕೊಚ್ಚಿ[ಜ.27]: ಲವ್‌ ಜಿಹಾದ್‌ ಎಂಬುದು ವಾಸ್ತವ. ಆ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದರೆ ಮೌನ ಸಮ್ಮತಿ ಕೊಟ್ಟಂತೆ ಎಂದು ಕೇರಳದ ಫಾದ್ರಿಯೊಬ್ಬರು ಹೇಳಿದ್ದಾರೆ. ತನ್ಮೂಲಕ ಲವ್‌ ಜಿಹಾದ್‌ ಚರ್ಚೆ ಮುಂದುವರಿಯುವಂತೆ ಮಾಡಿದ್ದಾರೆ.

ಕೇರಳದ ವಿವಿಧ ಕ್ಯಾಥೋಲಿಕ್‌ ಸಮುದಾಯಗಳ ಬಿಷಪ್‌ಗಳಿಗೆ ಸಂಬಂಧಿಸಿದಂತೆ ಕೇರಳ ಕ್ಯಾಥೋಲಿಕ್‌ ಬಿಷಫ್ಸ್‌ ಕೌನ್ಸಿಲ್‌ ಎಂಬ ಪರಮೋಚ್ಚ ಸಂಸ್ಥೆಯಿದೆ. ಅದರ ವಕ್ತಾರರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಲವ್‌ ಜಿಹಾದ್‌ ಪ್ರಕರಣಗಳ ಕುರಿತಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ತನಿಖೆ ಮಾಡುತ್ತಿಲ್ಲ ಎಂದು ದೂಷಿಸಿದ್ದಾರೆ. ಲವ್‌ ಜಿಹಾದ್‌ ಮೂಲಕ ಕ್ರೈಸ್ತ ಯುವತಿಯರನ್ನು ಬಲೆಗೆ ಕೆಡವಿ ಅವರನ್ನು ಯುದ್ಧದಿಂದ ಜರ್ಜರಿತವಾದ ದೇಶಗಳಲ್ಲಿ ಲೈಂಗಿಕ ಗುಲಾಮರನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ದೂರಿದ್ದಾರೆ.

ಕೇರಳ ಕ್ರೈಸ್ತರೂ ಲವ್‌ ಜಿಹಾದ್‌ ಬಲೆಗೆ!: ಯೋಜಿತವಾಗಿ ಮತಾಂತರ!

ಲವ್‌ ಜಿಹಾದ್‌ನಲ್ಲಿ ಸಿಲುಕಿ ನಾಪತ್ತೆಯಾದ ಕೇರಳ ಯುವತಿಯರ ಬಗ್ಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಪರಿಣಾಮಕಾರಿ ತನಿಖೆಯನ್ನು ಮಾಡಿಲ್ಲ. ಆ ರೀತಿ ನಾಪತ್ತೆಯಾದವರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಹಾಗೂ ಲೈಂಗಿಕ ಗುಲಾಮಗಿರಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ವಕ್ತಾರ ಫಾದರ್‌ ವರ್ಗೀಸ್‌ ವಲ್ಲಿಕ್ಕಟ್‌ ದೂರಿದ್ದಾರೆ.

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ