ದೇಗುಲಕ್ಕೆ ಭೇಟಿ ನೀಡುವ, ಹಣೆಗೆ ತಿಲಕ ಇಡುವ ಹಿಂದುಗಳನ್ನು ನಾವು ಕಡೆಗಣಿಸಬಾರದು. ಏಕೆಂದರೆ ಮೋದಿ ವಿರುದ್ಧದ ಹೋರಾಟದಲ್ಲಿ ನಮಗೆ ಮುಸ್ಲಿಮರ ಜೊತೆಗೆ ಹಿಂದೂಗಳೂ ಬೇಕು. ಒಂದು ವೇಳೆ ಇಂಥವರನ್ನು ನಾವು ಕಡೆಗಣಿಸಿದರೆ ಅದು ದೆಹಲಿಯಲ್ಲಿ ಅಧಿಕಾರ ಪಡೆಯಲು ಮೋದಿಗೆ ನೆರವಾಗಲಿದೆ: ಎ.ಕೆ.ಆ್ಯಂಟನಿ 

ತಿರು​ವ​ನಂತ​ಪು​ರ(ಡಿ.30): ಮೃದು ಹಿಂದುತ್ವದಿಂದ ದೂರ ಉಳಿಯುವ ಹೆಸರಿನಲ್ಲಿ ಹಿಂದೂಗಳನ್ನು ಕಡೆಗಣಿಸುವುದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅಧಿಕಾರ ಪಡೆಯಲು ನೆರವಾಗಲಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಎ.ಕೆ.ಆ್ಯಂಟನಿ ಹೇಳಿದ್ದಾರೆ. ಆದರೆ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.

ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆ್ಯಂಟನಿ ‘ದೇಗುಲಕ್ಕೆ ಭೇಟಿ ನೀಡುವ, ಹಣೆಗೆ ತಿಲಕ ಇಡುವ ಹಿಂದುಗಳನ್ನು ನಾವು ಕಡೆಗಣಿಸಬಾರದು. ಏಕೆಂದರೆ ಮೋದಿ ವಿರುದ್ಧದ ಹೋರಾಟದಲ್ಲಿ ನಮಗೆ ಮುಸ್ಲಿಮರ ಜೊತೆಗೆ ಹಿಂದೂಗಳೂ ಬೇಕು. ಒಂದು ವೇಳೆ ಇಂಥವರನ್ನು ನಾವು ಕಡೆಗಣಿಸಿದರೆ ಅದು ದೆಹಲಿಯಲ್ಲಿ ಅಧಿಕಾರ ಪಡೆಯಲು ಮೋದಿಗೆ ನೆರವಾಗಲಿದೆ’ ಎಂದು ಹೇಳಿದ್ದಾರೆ.

ಹಿಂದೂಗಳನ್ನು ಓಡಿಸಿ ಎಂದು ಅರಬ್‌ ದೇಶಗಳಿಗೆ ಅಲ್‌ಖೈದಾ ಕರೆ: ಪ್ರಧಾನಿ ಮೋದಿ, ನೂಪುರ್‌ ಗುರಿಯಾಗಿಸಿ ಲೇಖನ ಪ್ರಕಟ

ಆ್ಯಂಟನಿ ಹೇಳಿಕೆಯನ್ನು ಕಾಂಗ್ರೆಸ್‌ನವರೇ ಆದ ಕೆ.ಮುರಳೀಧರನ್‌, ವಿ.ಡಿ.ಸತೀಶನ ಮೊದಲಾದವರು ಬೆಂಬಲಿಸಿದ್ದರೆ, ಕಾಸರಗೋಡು ಸಂಸದ ರಾಜಮೋಹನ್‌ ಉನ್ನೀಥನ್‌ ವಿರೋಧಿಸಿದ್ದಾರೆ. ಇಂಥ ನಿಲುವುಗಳನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ಸದಾ ಮೃದು ಹಿಂದುತ್ವ ನೀತಿ ಅನುಸರಿಸಿದೆ. ಇಂಥ ನೀತಿ ಬಿಜೆಪಿ ಏಳಿಗೆ ಸಹಿಸಲು ನೆರವಾಗದು ಎಂದಿದೆ. ಇನ್ನೊಂದೆಡೆ ಬಿಜೆಪಿ ಕೂಡಾ ಕಾಂಗ್ರೆಸ್‌ ಅತಿ​ದೊಡ್ಡ ಹಿಂದೂ ವಿರೋಧಿ ಪಕ್ಷ​ವಾ​ಗಿ​ದ್ದು, ಅಲ್ಪ​ಸಂಖ್ಯಾತ ಕೋಮು​ವಾ​ದ​ವನ್ನು ಸೃಷ್ಟಿ​ಸಲು ಪ್ರಯ​ತ್ನಿ​ಸು​ತ್ತಿ​ದೆ ಎಂದು ಆರೋ​ಪಿ​ಸಿ​ದೆ.