* ಪರೀಕ್ಷೆಯಿಂದ ಒಂದೇ ಒಂದು ಸಾವಾದರೂ ಸರ್ಕಾರ ಹೊಣೆ* ಆಂಧ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ* 12ನೇ ಕ್ಲಾಸ್‌ ಪರೀಕ್ಷೆಗೆ ಮುಂದಾಗಿರುವುದಕ್ಕೆ ಚಾಟಿ

ನವದೆಹಲಿ(ಜೂ.23): ಕೊರೋನಾ ಹಾವಳಿ ನಡುವೆಯೂ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರಪ್ರದೇಶಕ್ಕೆ ತೀಕ್ಷ$್ಣ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್‌, ‘ಪರೀಕ್ಷೆ ನಡೆಸುವ ಬಗ್ಗೆ ಇನ್ನು 2 ದಿನದಲ್ಲಿ ಅಂತಿಮ ನಿರ್ಧಾರ ತಿಳಿಸಬೇಕು. ಪರೀಕ್ಷೆಯಿಂದಾಗಿ ಒಂದೇ ಒಂದು ಸಾವು ಸಂಭವಿಸಿದರೂ ರಾಜ್ಯ ಸರ್ಕಾರವನ್ನೇ ಹೊಣೆ ಮಾಡುತ್ತೇವೆ’ ಎಂದು ಎಚ್ಚರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರೀಕ್ಷೆ ನಡೆಸುವ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ‘ನೀವು ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಇಡಲು ಆಗದು. 2 ದಿನದಲ್ಲಿ ನಿರ್ಧಾರ ತಿಳಿಸಬೇಕು’ ಎಂದು ಚಾಟಿ ಬೀಸಿತು.

ಈ ವೇಳೆ ವಾದ ಮಂಡಿಸಿದ ಆಂಧ್ರ ಸರ್ಕಾರದ ಪರ ವಕೀಲ ಮಹಫೂಜ್‌ ನಾಕ್ಜಿ, ‘ಕೊರೋನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಪರೀಕ್ಷೆ ನಡೆಸಲು ಆಂಧ್ರ ನಿರ್ಧರಿಸಿದೆ’ ಎಂದರು. ಸಿಬಿಎಸ್‌ಇ, ಐಸಿಎಸ್‌ಇ ಹಾಗೂ 21 ರಾಜ್ಯಗಳು 12ನೇ ಕ್ಲಾಸ್‌ ಪರೀಕ್ಷೆ ರದ್ದುಗೊಳಿಸಿವೆ. 6 ರಾಜ್ಯಗಳು ಈಗಾಗಲೇ ಪರೀಕ್ಷೆ ನಡೆಸಿವೆ. ಆದರೆ ಆಂಧ್ರ ಸರ್ಕಾರ ಪರೀಕ್ಷೆ ರದ್ದು ಮಾಡಿಲ್ಲ. ಇದು ವಿವಾದದ ಮೂಲ.