* ಕೊರೋನಾ ಮೂರನೇ ಅಲೆ ಬಗ್ಗೆ ತಜ್ಞರ ಸಲಹೆ* ಕೊರೋನಾ ವೈರಸ್‌ನ ಹೊಸ ರೂಪಾಂತರಿ ಸೃಷ್ಟಿ ಆಗದಿದ್ದರೆ ಅಪಾಯವಿಲ್ಲ* ನವೆಂಬರ್‌ ವೇಳೆಗೆ ಅತ್ಯುಚ್ಛ್ರಾಯ ಸ್ಥಿತಿಗೆ ತಲುಪುವ ಭೀತಿ

ನವದೆಹಲಿ(ಆ.24): ಡೆಲ್ಟಾಗಿಂತ ಹೊರತಾದ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಸೃಷ್ಟಿ ಆಗದೆ 3ನೇ ಅಲೆಯು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ತಿಯಾಗಿ ಗೋಚರವಾಗಲಿದೆ. ನವೆಂಬರ್‌ ವೇಳೆಗೆ ಅತ್ಯುಚ್ಛ್ರಾಯ ಸ್ಥಿತಿಗೆ ತಲುಪುವ ಭೀತಿಯಿದೆ ಎಂದು ಕೊರೋನಾ ಕುರಿತ ಲೆಕ್ಕಾಚಾರದಲ್ಲಿ ಸಕ್ರಿಯರಾಗಿರುವ ವಿಜ್ಞಾನಿ ಮಣೀಂದ್ರ ಅಗರ್‌ವಾಲ್‌ ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ಹೆಚ್ಚಳದ ಮುನ್ಸೂಚನೆ ನೀಡಲು ರಚನೆಯಾಗಿರುವ ಮೂವರು ತಜ್ಞ ಸದಸ್ಯರ ತಂಡದ ಪೈಕಿ ಒಬ್ಬರಾದ ಐಐಟಿ ಕಾನ್ಪುರದ ವಿಜ್ಞಾನಿ ಅಗರ್‌ವಾಲ್‌ ಅವರು, ‘ಡೆಲ್ಟಾತಳಿಗಿಂತಲೂ ಅಪಾಯಕಾರಿಯಾದ ರೂಪಾಂತರಿ ವೈರಸ್‌ ರೂಪ ತಾಳದಿದ್ದರೆ, ದೇಶಕ್ಕೆ 3ನೇ ಅಲೆಯ ತೀವ್ರತೆ ತಾಗದು.

3ನೇ ಅಲೆ ಅಪ್ಪಳಿಸಿದರೂ ಅದು 2ನೇ ಅಲೆಯಷ್ಟುತೀವ್ರವಾಗಿರಲ್ಲ. ಬದಲಾಗಿ ಒಂದನೇ ಅಲೆಯಷ್ಟುತೀವ್ರವಿರಬಹುದು’ ಎಂದಿದ್ದಾರೆ.