ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಖಿಲೇಶ್ ಯಾದವ್ ಪ್ರಧಾನಿ: ಎಸ್‌ಪಿ ನಾಯಕ ಘೋಷಣೆ!
ಲೋಕಸಭೆ ಚುನಾವಣೆಗೂ ಮುನ್ನ ಎಸ್‌ಪಿ ನಾಯಕ ಕಾಶಿನಾಥ್ ಯಾದವ್ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಡಿ ಒಕ್ಕೂಟದ ಸರ್ಕಾರ ರಚನೆಯಾದರೆ ಅಖಿಲೇಶ್ ಯಾದವ್ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ನವದೆಹಲಿ (ಸೆ.25): 2024ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳ ಇಂಡಿ ಒಕ್ಕೂಟ ಕೂಡ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸುತ್ತಿದೆ. ಆದರೆ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದರ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ಈ ನಡುವೆ ಎಸ್‌ಪಿ ನಾಯಕ ಕಾಶಿನಾಥ್ ಯಾದವ್ ವಿವಾದವಾಗಬಲ್ಲ ಹೇಳೀಕೆಯನ್ನು ನೀಡಿದ್ದಾರೆ. ಒಂದು ವೇಳೆ ಇಂಡಿ ಸಮ್ಮಿಶ್ರ ಸರ್ಕಾರ ರಚನೆಯಾದರೆ ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 24 ರಂದು, ಮಾಜಿ ಎಂಎಲ್‌ಸಿ ಮತ್ತು ಸಂಸ್ಕೃತಿ ಕೋಶದ ರಾಷ್ಟ್ರೀಯ ಅಧ್ಯಕ್ಷ ಕಾಶಿ ನಾಥ್ ಯಾದವ್ 'ಬಿರ್ಹಿಯಾ' ಸಮಾಜವಾದಿ ಪಕ್ಷದ ನೂತನವಾಗಿ ನೇಮಕಗೊಂಡ ರಾಜ್ಯ ಕಾರ್ಯದರ್ಶಿಯ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗಾಜಿಪುರಕ್ಕೆ ಆಗಮಿಸಿದ್ದರು. ಇಲ್ಲಿ ವೇದಿಕೆಯಿಂದ ಭಾಷಣ ಮಾಡಿದ ಅವರು, 2024ರಲ್ಲಿ ಇಂಡಿ ಸಮ್ಮಿಶ್ರ ಸರ್ಕಾರ ರಚನೆಯಾದರೆ ನಮ್ಮ ಅಖಿಲೇಶ್ ಯಾದವ್ ಕೂಡ ಪ್ರಧಾನಿಯಾಗಬಹುದು ಎಂದಿದ್ದಾರೆ.
ಇಲ್ಲಿಯವರೆಗೆ ಇಂಡಿ ಮೈತ್ರಿಕೂಟದ ಒಟ್ಟು ಮೂರು ಸಭೆಗಳು ನಡೆದಿವೆ. ಪಾಟ್ನಾ ಮತ್ತು ಮುಂಬೈನಲ್ಲಿ ನಡೆದ ಎರಡು ಸಭೆಗಳಲ್ಲೂ ಭಾಗವಹಿಸಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಿಕ್ಕಷ್ಟು ಭವ್ಯವಾದ ಸ್ವಾಗತವನ್ನು ಇಂಡಿ ಒಕ್ಕೂಟದ ಯಾವ ಮಾಜಿ ಮುಖ್ಯಮಂತ್ರಿಯೂ ಪಡೆದಿಲ್ಲ. ಗೌರವಾನ್ವಿತ ನಾಯಕ ದಿವಂಗತ ಮುಲಾಯಂ ಸಿಂಗ್ ಅವರು ಕೆಲವು ಕಾರಣಗಳಿಂದ ಪ್ರಧಾನಿಯಾಗುವ ತಮ್ಮ ಆಸೆಯನ್ನು ಮುಚ್ಚಿಟ್ಟುಕೊಂಡೇ ಇದ್ದರು. ಆದರೆ ಇಂಡಿ ಸಮ್ಮಿಶ್ರ ಸರ್ಕಾರ ರಚನೆಯಾದರೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಧಾನಿಯಾಗುತ್ತಾರೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
ಕಾಶಿನಾಥ್ ಯಾದವ್ ಪೂರ್ವಾಂಚಲ್‌ನ ಪ್ರಸಿದ್ಧ ಬಿರ್ಹಾ ಗಾಯಕ. ಎರಡು ಬಾರಿ ಎಂಎಲ್ಸಿ ಆಗಿದ್ದಾರೆ. ಬಿಎಸ್‌ಪಿಯಿಂದ ಕಾಶಿರಾಮ್ ಅವರೊಂದಿಗೆ ರಾಜಕೀಯ ಜೀವನ ಆರಂಭಿಸಿದ ಕಾಶಿನಾಥ್ ಅವರು ತಮ್ಮ ಹಾಡುಗಳ ಮೂಲಕ ಅಖಿಲೇಶ್ ಯಾದವ್ ಪರವಾಗಿ ಚಾಲೀಸಾವನ್ನು ಪಠಿಸುವ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ, ಅವರ ಇತ್ತೀಚಿನ ಹೇಳಿಕೆಯ ನಂತರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಗಿದೆ.
ಶಿವನ ತ್ರಿಶೂಲ, ಡಮರುಗ, ತಲೆಯ ಮೇಲಿನ ಚಂದ್ರ.. ಈ ರೀತಿಯಲ್ಲಿರಲಿದೆ ವಾರಣಾಸಿ ಕ್ರಿಕೆಟ್ ಸ್ಟೇಡಿಯಂ!
ಗಾಜಿಪುರದಲ್ಲಿ ಅರ್ಧ ಗಂಟೆ ಭಾಷಣ ಮಾಡಿದ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದರು. ಕಾಶಿನಾಥ್ ಅವರು ಸರ್ಕಾರದ ಮೇಲೆ ಹಣದುಬ್ಬರ, ಭ್ರಷ್ಟಾಚಾರ ಮತ್ತು ಉದ್ಯೋಗದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಮುಂದಿನ ಸರ್ಕಾರ ಇಂಡಿ ಮೈತ್ರಿಕೂಟದ ನೇತೃತ್ವದಲ್ಲಿ ನಡೆಯಲಿದೆ ಮತ್ತು ಅಖಿಲೇಶ್ ಯಾದವ್ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಪ್ರಭಾವ, 7 ವರ್ಷದ ಬಾಲಕನಿಂದ 5 ವರ್ಷದ ಬಾಲಕಿಯ ರೇಪ್