ಭಾರತದ ಗೆಲುವಿಗಾಗಿ ಸ್ವಿಗ್ಗಿಯಲ್ಲಿ 240 ಪ್ಯಾಕೇಟ್ ಅಗರಬತ್ತಿ ಖರೀದಿಸಿದ್ದ ಕ್ರಿಕೆಟ್ ಭಕ್ತ
ಇಂದು ಗೆದ್ದ ತಂಡದ ಜೊತೆ ಭಾರತ ಫೈನಲ್ ಆಡಲಿದೆ. ಹೀಗಾಗಿ ಭಾರತದ ಬಹುತೇಕ ಕ್ರಿಕೆಟ್ ಪ್ರಿಯರು ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಈ ಎರಡು ತಂಡದಲ್ಲಿ ಯಾವ ತಂಡ ಫೈನಲ್‌ಗೆ ಬಂದರೆ ಒಳ್ಳೆಯದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹೀಗಿರುವಾಗ ಓರ್ವ ಅಪ್ಪಟ ಕ್ರಿಕೆಟ್ ಪ್ರೇಮಿಯೊಬ್ಬನ ಕ್ರಿಕೆಟ್ ಪ್ರೇಮ ವೈರಲ್ ಆಗಿದೆ.
ಥಾಣೆ: ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ 70 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಈಗ ಭಾರತದ ಕ್ರಿಕೆಟ್ ಪ್ರಿಯರೆಲ್ಲರೂ ಈಗ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ಪಂದ್ಯ ನಡೆಯುತ್ತಿದ್ದು, ಇಂದು ಗೆದ್ದ ತಂಡದ ಜೊತೆ ಭಾರತ ಫೈನಲ್ ಆಡಲಿದೆ. ಹೀಗಾಗಿ ಭಾರತದ ಬಹುತೇಕ ಕ್ರಿಕೆಟ್ ಪ್ರಿಯರು ಯಾವ ತಂಡ ಫೈನಲ್‌ಗೆ ಬಂದರೆ ಒಳ್ಳೆಯದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹೀಗಿರುವಾಗ ಓರ್ವ ಅಪ್ಪಟ ಕ್ರಿಕೆಟ್ ಪ್ರೇಮಿಯೊಬ್ಬನ ಕ್ರಿಕೆಟ್ ಪ್ರೇಮ ವೈರಲ್ ಆಗಿದೆ.
ಇಲ್ಲೊಬ್ಬರು ನಿನ್ನೆ ನಡೆದ ಭಾರತ ನ್ಯೂಜಿಲ್ಯಾಂಡ್ ಪಂದ್ಯಾವಳಿ ವೇಳೆ ಭಾರತ ಗೆಲುವಿಗಾಗಿ ಪ್ರಾರ್ಥನೆ ಮಾಡಲು ಬರೋಬ್ಬರಿ 240 ಅಗರಬತ್ತಿ ಪ್ಯಾಕ್‌ಗಳನ್ನು ಆರ್ಡರ್ ಮಾಡಿದ್ದಾರೆ. ಇದನ್ನು ಸ್ವತಃ ಸ್ವಿಗ್ಗಿ ಸಾಮಾಜಿಕ ಜಾಲತಾಣ ಟ್ವಿಟ್(ಎಕ್ಸ್)ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಜೊತೆ ನಾವು ಪ್ರಾರ್ಥನೆ ಮಾಡುವುದಾಗಿ ಹೇಳಿತ್ತು. ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ.
ಭಾರತದಲ್ಲಿ ಕ್ರಿಕೆಟ್ ಕೇವಲ ಬರೀ ಆಟವಲ್ಲ, ಅದೊಂದು ಭಾವನೆ, ಅದೊಂದು ಧರ್ಮ, ಅದೊಂದು ಬದುಕು ಕೆಲವರು ತಮ್ಮ ಕುಟುಂಬಕ್ಕಾಗಿ ತಮ್ಮವರಿಗಾಗಿ ಪೂಜೆ ಮಾಡಿ ಪ್ರಾರ್ಥಿಸುತ್ತಾರೋ ಇಲ್ಲವೋ? ಆದರೆ ಕ್ರಿಕೆಟ್ ಪಂದ್ಯಾವಳಿಯ ದಿನ ಮಾತ್ರ ಭಾರತ ತಂಡ ಗೆಲ್ಲಬೇಕೆಂದು ಪ್ರಾರ್ಥನೆ ಮಾಡುವುದಕ್ಕೆ ಮಾತ್ರ ಮರೆಯುವುದಿಲ್ಲ. ಅದರಲ್ಲೂ ವಿಶ್ವಕಪ್ ಪಂದ್ಯ ಅಂದ್ರೆ ಸುಮ್ನೆ ಅಲ್ಲ ಕೋಟ್ಯಾಂತರ ಭಾರತೀಯರು ಭಾರತ ತಂಡ ಫೈನಲ್‌ಗೇರುವುದಕ್ಕೆ ಪ್ರಾರ್ಥನೆ ಮಾಡದೇ ಇರಲ್ಲ. ಹಾಗೆಯೇ ಇಲ್ಲೊಬ್ಬರು ಪಂದ್ಯ ನಡೆಯುತ್ತಿರುವ ವೇಳೆಯೇ ಪ್ರಾರ್ಥನೆ ಆಗರಬತ್ತಿ ಕಡ್ಡಿಯನ್ನು ಸ್ವಿಗ್ಗಿಯಲ್ಲಿ ತರಿಸಿ, ತಾವು ಕ್ರಿಕೆಟ್ ನೋಡುತ್ತಿದ್ದ ಟಿವಿ ಮುಂದೆಯೇ ಹೊತ್ತಿಸಿ ಇಟ್ಟಿದ್ದಾರೆ. ಈ ವಿಚಾರ ಈಗ ವೈರಲ್ ಆಗಿದೆ. ಜನ ಸ್ವಿಗ್ಗಿ ಪೋಸ್ಟ್‌ಗೆ ಕಾಂಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ICC World Cup 2023: 'ಚೋಕರ್ಸ್' ಹಣೆಪಟ್ಟಿ ಕಳಚಿ ಫೈನಲ್‌ಗೇರುತ್ತಾ ಆಫ್ರಿಕಾ?
ನಿನ್ನೆ ಭಾರತ ತಂಡ ನ್ಯೂಜಿಲ್ಯಾಂಡ್ ಅನ್ನು 70 ರನ್‌ಗಳಿಂದ ಸೋಲಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೆಜ್ ಪಂದ್ಯ ವೀಕ್ಷಣೆಗೆ ಹಲವು ಗಣ್ಯರು ಆಗಮಿಸಿದ್ದರು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ ಭಾರತ 397 ರನ್ ಕಲೆ ಹಾಕಿದ್ದರೂ ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಜನರಿಗೆ ಮಾತ್ರ ಕುಳಿತಲ್ಲಿಯೇ ಏನಾಗುವುದೋ ಎಂದು ಕಳವಳ ಉಂಟಾಗಿತ್ತು. ಹೀಗಾಗಿ ಥಾಣೆಯ ವ್ಯಕ್ತಿಯೊಬ್ಬರು ದೇವರಲ್ಲಿ ಪ್ರಾರ್ಥನೆಗಾಗಿ ಇನ್ಸ್ಟಾಮಾರ್ಟ್‌ನಲ್ಲಿ 240 ಅಗರಬತ್ತಿಗಳನ್ನು ಖರೀದಿಸಿದ್ದರು. ಇದನ್ನು ಸ್ವಿಗ್ಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ಟ್ವಿಟ್‌ಗೆ ಅಗರಬತ್ತಿ ಖರೀದಿಸಿದವರು ಕೂಡ ಪ್ರತಿಕ್ರಿಯಿಸಿದ್ದರು.
ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!
ಅಲ್ಲದೇ ಸ್ಟೀಲ್ ಪ್ಲೇಟೊಂದರ ಮೇಲೆ ಅಲೂಗಡ್ಡೆಯೊಂದನ್ನು ಅರ್ಧ ಕತ್ತರಿಸಿ ಅದಕ್ಕೆ ಹೊತ್ತಿಸಿದ ಅಗರಬತ್ತಿಗಳನ್ನು ಸಿಕ್ಕಿಸಿ ಇಟ್ಟಿರುವ ಫೋಟೋವನ್ನು ಸ್ವಿಗ್ಗಿ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಹಾಕಿದ್ದರು. ಅಲ್ಲದೇ ಆ ಯಾರೋ ಓಬ್ಬ ವ್ಯಕ್ತಿ ನಾನೇ ಎಂದ ಅಗರಬತ್ತಿ ಖರೀದಿಸಿದವರು ಇಲ್ಲಿ ಆಗರಬತ್ತಿ ಹೊತ್ತಿಸಿ ಇಡೀ ಪ್ರದೇಶವನ್ನು ಹೊಗೆಮಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಧನ್ಯವಾದ ಹೇಳಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ 117 ರನ್ ಗಳಿಸಿ ತಮ್ಮ 50ನೇ ಏಕದಿನ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. ಇದರ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ಶತಕ ಬಾರಿಸಿದ್ದು, ಮೊಹಮ್ಮದ್ ಶಮಿ ಅವರು 7 ವಿಕೆಟ್ ಪಡೆದು ಭಾರತ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು
.ICC World Cup Semifinal: ಆಸೀಸ್ ಎದುರು ಟಾಸ್ ಗೆದ್ದ ದಕ್ಷಿಣ ಅಫ್ರಿಕಾ ಬ್ಯಾಟಿಂಗ್ ಆಯ್ಕೆ; ಮಹತ್ವದ ಬದಲಾವಣೆ