Asianet Suvarna News Asianet Suvarna News

ಬೆಂಗಳೂರು ನಮ್ಮ ಮೆಟ್ರೋಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ಎಮ್.ಮಹೇಶ್ವರ ರಾವ್ ನೇಮಕ

ಕೇಂದ್ರ ಸರ್ಕಾರ ಬೆಂಗಳೂರಿನ ನಮ್ಮ ಮೆಟ್ರೋ (ಬಿಎಂಆರ್‌ಸಿಎಲ್‌) ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಎಂ. ಮಹೇಶ್ವರ ರಾವ್ ಅವರನ್ನು ನೇಮಕ ಮಾಡಿದೆ.

IAS M Maheshwar Rao has been appointed as Managing Director of BMRCL sat
Author
First Published Jan 11, 2024, 4:12 PM IST | Last Updated Jan 11, 2024, 4:14 PM IST

ಬೆಂಗಳೂರು (ಜ.11): ರಾಜ್ಯದ ಏಕೈಕ ಮೆಟ್ರೋ ರೈಲು ಹೊಂದಿರುವ ನಗರ ಸಿಲಿಕಾನ್‌ ಸಿಟಿಯ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್‌) ಹಲವು ವರ್ಷಗಳ ನಂತರ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಿರಿಯ ಐಎಎಸ್‌ ಅಧಿಕಾರಿ ಎಂ. ಮಹೇಶ್ವರ ರಾವ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಮೆಟ್ರೋಗೆ ಪೂರ್ಣ ಸಮಯದ ವಯವಸ್ಥಾಪಕ ನಿರ್ದೇಶಕರ ಅನುಪಸ್ಥಿತಿಯಿಂದಾಗಿ ನಮ್ಮ ಮೆಟ್ರೋ ಹಂತ -2 ಯೋಜನೆ ವಿಳಂಬವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದದರು. ಈ ವೇಳೆ ವಿಶೇಷವಾಗಿ ಸಾರ್ವಜನಿಕರ ಸಾರಿಗೆಯಾದ ಬಿಎಂಆರ್‌ಸಿಎಲ್‌ಗೆ ಸಮಪರ್ಕಕ ನಾಯಕನ ಅಗತ್ಯವಿದೆ ಎಂದು ಒತ್ತಿಹೇಳಿದರು. ಈ ವಿಷಯವನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಬಳಿಗೆ ಕೊಂಡೊಯ್ದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದಿಂದ ತುರ್ತು ಮಧ್ಯಸ್ಥಿಕೆಗೆ ಒತ್ತಾಯಿಸಿದರು. ಮೆಟ್ರೋ ಹಂತ-2 ಕಾರ್ಯಗಳನ್ನು ಚುರುಕುಗೊಳಿಸಲು ಮನವಿ ಮಾಡಿದ್ದರು. ಜೊತೆಗೆ, ಪ್ರಯಾಣಿಕರು ಎದುರಿಸುತ್ತಿರುವ ಟ್ರಾಫಿಕ್‌ ಸಮಸ್ಸಯೆ ನಿವಾರಿಸಲು ಪೂರ್ಣಾವಧಿ ಎಂಡಿ ನೇಮಕ ಮಾಡುವಂತೆ ಮನವಿ ಮಾಡಿದ್ದರು. 

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ತಿಂಗಳಿಗೆ 2 ಕೋಟಿ ಜನ ಸಂಚಾರ

ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರದ ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಬಿಎಂಆರ್‌ಸಿಎಲ್‌ಗೆ 1995ನೇ ಸಾಲಿನ ಐಎಎಸ್‌ ಬ್ಯಾಚ್‌ನ ಹಿರಿಯ ಅಧಿಕಾರಿ ಎಂ. ಮಹೇಶ್ವರ ರಾವ್ ಅವರನ್ನು ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಸಂತಸ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮಂಜೂರಾತಿ ಷರತ್ತುಗಳ ಪ್ರಕಾರ, ಪೂರ್ಣ ಸಮಯದ ವ್ಯವಸ್ಥಾಪಕ ನಿರ್ದೇಶಕರನ್ನು ಕೇಂದ್ರ ಸರ್ಕಾರ ಪೂರ್ವ ಒಪ್ಪಿಗೆಯೊಂದಿಗೆ ಮಾತ್ರ ವರ್ಗಾಯಿಸಲಾಗುತ್ತದೆ. ಈ ಸಚಿವಾಲಯದ ಪೂರ್ವಾನುಮತಿಯಿಲ್ಲದೆ, ವ್ಯವಸ್ಥಾಪಕ ನಿರ್ದೇಶಕರಿಗೆ ಯಾವುದೇ ಇತರ/ಹೆಚ್ಚುವರಿ ನಿಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರರವು ನೀಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಜನತೆಗೆ ಆಸ್ತಿ ತೆರಿಗೆ ಬರೆ ಎಳೆದ ಬಿಬಿಎಂಪಿ; ನಗರಾಭಿವೃದ್ಧಿ ಮಂತ್ರಿಗೆ ಚಳಿ ಬಿಡಿಸಿದ ರಾಮಲಿಂಗಾರೆಡ್ಡಿ!

IAS M Maheshwar Rao has been appointed as Managing Director of BMRCL sat

Latest Videos
Follow Us:
Download App:
  • android
  • ios