ದಾವೋಸ್‌[ಜ.23]: ಫೇಸ್‌ಬುಕ್‌ನಲ್ಲಿ ನಾನು ನಂಬರ್‌ ವನ್‌. ನಂಬರ್‌ ಟು ಯಾರು ಗೊತ್ತಾ? ಭಾರತದ ಮೋದಿ. ಇದು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ ಮಾತು. ದಾವೋಸ್‌ ಶೃಂಗದಲ್ಲಿ ಭಾಗವಹಿಸಲು ಸ್ವಿಜರ್ಲೆಂಡ್‌ಗೆ ತೆರಳಿರುವ ಅವರು, ಸಿಎನ್‌ಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.

ಅಲ್ಲದೇ ಭಾರತದ ಜತೆ ನಮ್ಮ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಜತೆಗೆ ಮಾತುಕತೆ ನಡೆಸಿದ ಬಳಿಕ ನಡೆದ ಸಂದರ್ಶನಲ್ಲಿ ಟ್ರಂಪ್‌ ಮೋದಿಯನ್ನು ಹೀಗೆ ಹಾಡಿ ಹೊಗಳಿದ್ದು ವಿಶೇಷ.

ಸುಲೈಮಾನಿ ಅಂತಿಮ ಕ್ಷಣ ವಿವರಿಸಿದ ಟ್ರಂಪ್‌!

ಕಾಶ್ಮೀರ ವಿಷಯಕ್ಕೆ ಮಧ್ಯಸ್ಥಿಕೆ: ಟ್ರಂಪ್‌ ಭರವಸೆ

ಕಾಶ್ಮೀರ ವಿಚಾರದಲ್ಲಿ ಪದೇ ಪದೇ ಭಿನ್ನ ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಾಶ್ಮೀರ ವಿಚಾರ ಇತ್ಯರ್ಥಕ್ಕೆ ಸಹಾಯ ಮಾಡಲು ಸಿದ್ಧ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭರವಸೆ ನೀಡಿದ್ದಾರೆ.

ಕಾಶ್ಮೀರ ಸಮಸ್ಯೆಯನ್ನು ನಾವು ಸನಿಹದಿಂದ ಗಮನಿಸುತ್ತಿದ್ದೇವೆ. ದೀರ್ಘವಾಗಿ ಇತ್ಯರ್ಥವಾಗದೇ ಉಳಿದಿರುವ ಈ ಪ್ರಕರಣದ ಪರಿಹಾರಕ್ಕೆ ಸಹಾಯ ಮಾಡಲು ಅಮೆರಿಕ ಸಿದ್ದ. ಮುಂದಿನ ಭಾರತ ಭೇಟಿ ವೇಳೆ ಈ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುವುದಾಗಿ ಟ್ರಂಪ್‌ ಹೇಳಿದ್ದಾಗಿ ಖಾನ್‌ ಹೇಳಿದ್ದಾರೆ.

ಅಲ್ಲದೇ ಈ ಸಮಸ್ಯೆಗೆ ಅಮೆರಿಕ ಹೊರತು ಬೇರೆ ಯಾರೂ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

ನಾಲಿಗೆ ಹಿಡಿತದಲ್ಲಿರಲಿ: ಇರಾನ್ ಪರಮೋಚ್ಛ ನಾಯಕನಿಗೆ ಟ್ರಂಪ್ ಎಚ್ಚರಿಕೆ!