ಚಂಡಿ ಪಾಠ ಪಠಿಸಿ, ‘ನಾನೂ ಬ್ರಾಹ್ಮಣ’ ಎಂದ ದೀದಿ!|  ನನಗೆ ಹಿಂದೂ ಧರ್ಮದ ಪಾಠ ಬೇಡ: ಬಿಜೆಪಿಗೆ ಟಾಂಗ್‌|  ಬಿಜೆಪಿಯ ಹಿಂದೂ ಓಲೈಕೆ ರಾಜಕಾರಣ ನನ್ನ ಮುಂದೆ ನಡೆಯುವುದಿಲ್ಲ 

ನಂದಿಗ್ರಾಮ(ಮಾ.10): ಚುನಾವಣಾ ಪ್ರಚಾರ ವೇದಿಕೆಯಲ್ಲೇ ಚಂಡಿ ಪಾಠವನ್ನು ಓದಿದ ಮಮತಾ ಬ್ಯಾನರ್ಜಿ ಸೋಮವಾರ ಪಠಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ‘ನಾನು ಕೂಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ. ಪ್ರತಿದಿನ ಮನೆಯಿಂದ ಹೊರಗೆ ಹೋಗುವಾಗ ಚಂಡಿ ಪಾಠವನ್ನು ಓದುತ್ತೇನೆ. ಬಿಜೆಪಿಯ ಹಿಂದೂ ಓಲೈಕೆ ರಾಜಕಾರಣ ನನ್ನ ಮುಂದೆ ನಡೆಯುವುದಿಲ್ಲ.

ಏ.1ರಂದು ನಡೆಯಲಿರುವ ಚುನಾವಣೆಯಲ್ಲಿ ನಂದಿಗ್ರಾಮದ ಜನರು ಬಿಜೆಪಿಗೆ ಏಪ್ರಿಲ್‌ ಫäಲ್‌ ಮಾಡಲಿದ್ದಾರೆ’ ಎಂದು ವ್ಯಂಗ್ಯವಾಡಿದರು. ರಾರ‍ಯಲಿಯ ಬಳಿಕ ಚಂಡಿ ದೇವಾಲಯಕ್ಕೆ ಮಮತಾ ಭೇಟಿ ನೀಡಿದರು.

‘ಹಿಂದೂ ಕಾರ್ಡ್‌’ ಬಳಸುವ ಬಿಜೆಪಿಗೆ ಮಮತಾ ‘ಹಿಂದೂ ತಂತ್ರಗಾರಿಕೆ’ ಮೂಲಕವೇ ಉತ್ತರ ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ