Asianet Suvarna News Asianet Suvarna News

Breaking: ಹೈಡ್ರಾಲಿಕ್‌ ವೈಫಲ್ಯ, ವಾಯುಮಾರ್ಗದಲ್ಲೇ ಎಮರ್ಜೆನ್ಸಿ ಘೋಷಿಸಿದ ಏರ್ ಇಂಡಿಯಾ ವಿಮಾನ

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಏರ್ ಇಂಡಿಯಾ ವಿಮಾನವು ಹೈಡ್ರಾಲಿಕ್ ವೈಫಲ್ಯದಿಂದಾಗಿ ತುರ್ತು ಪರಿಸ್ಥಿತಿ ಘೋಷಿಸಿದೆ. ವಿಮಾನದಲ್ಲಿ 140 ಪ್ರಯಾಣಿಕರಿದ್ದು, ಸುರಕ್ಷಿತ ಲ್ಯಾಂಡಿಂಗ್‌ಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

hydraulic failure Air India flight over Trichy declares mid air emergency san
Author
First Published Oct 11, 2024, 8:03 PM IST | Last Updated Oct 11, 2024, 8:04 PM IST

ನವದೆಹಲಿ (ಅ.11): ಏರ್ ಇಂಡಿಯಾ ವಿಮಾನವೊಂದು ಶುಕ್ರವಾರ ಸಂಜೆ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಹೈಡ್ರಾಲಿಕ್ ವೈಫಲ್ಯದಿಂದಾಗಿ ವಾಯು ಮಾರ್ಗದಲ್ಲಿಯೇ ಎಮರ್ಜೆನ್ಸಿ ಘೋಷಣೆ ಮಾಡಿದೆ. ತಮಿಳುನಾಡಿನ ತಿರುಚ್ಚಿ ವಾಯುಪ್ರದೇಶದಲ್ಲಿ ಏರ್‌ ಇಂಡಿಯಾ ವಿಮಾನ ಹಾರಾಟ ನಡೆಸುತ್ತಿದ್ದು, ಮುಂದಿನ 45 ನಿಮಿಷದಲ್ಲಿ ಇಳಿಯುವ ನಿರೀಕ್ಷೆ ಇದೆ ಎಂದು ತಿರುಚಿರಾಪಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ತಿರುಚಿ ವಿಮಾನ ನಿಲ್ದಾಣದ ನಿರ್ದೇಶಕರ ಪ್ರಕಾರ, ಪೈಲಟ್ ಹೈಡ್ರಾಲಿಕ್ ವೈಫಲ್ಯದ ಬಗ್ಗೆ ಏರ್ ಸ್ಟೇಷನ್‌ಗೆ ಎಚ್ಚರಿಕೆ ನೀಡಿದ್ದಾರೆ. ಲ್ಯಾಂಡಿಂಗ್ ಗೇರ್, ಬ್ರೇಕ್‌ಗಳು ಮತ್ತು ಫ್ಲಾಪ್‌ಗಳಂತಹ ಪ್ರಮುಖ ಭಾಗಗಳನ್ನು ನಿಯಂತ್ರಿಸಲು ಪ್ರೆಶರೈಸ್ಡ್‌ ಫ್ಲ್ಯೂಡ್‌ ಬಳಸುವ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ ಸಂಭವಿಸುತ್ತದೆ. ಈ ವಿಮಾನದಲ್ಲಿ ಒಟ್ಟು 140 ಮಂದಿ ಪ್ರಯಾಣಿಕರಿದ್ದಾರೆ ಎಂದು ತಿಳಿಸಿದೆ. ಯಾವುದೇ ಆತಂಕಕ್ಕೆ ಕಾರಣವಿಲ್ಲ ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗುತ್ತದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ ಎಂದು ತಿರುಚ್ಚಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಇಂಧನವನ್ನು ಖಾಲಿ ಮಾಡಲು ವಾಯುಪ್ರದೇಶದ ಸುತ್ತ ಸುತ್ತುತ್ತಿದೆ, ಮುಂಜಾಗ್ರತಾ ಕ್ರಮವಾಗಿ ನಾವು ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios