Asianet Suvarna News Asianet Suvarna News

ಕೊರೋನಾ: ಪತಿ ಸಾವಿಗೆ ಪತ್ನಿ ಆತ್ಮಹತ್ಯೆ, ಪಾಸಿಟಿವ್ ಮಹಿಳೆಯೂ ಸೂಸೈಡ್

 ಮಹಾರಾಷ್ಟ್ರದಲ್ಲಿ ಕೊರೋನಾದಿಂದ ಪತಿ ಸಾವು: ಮನನೊಂದ ಪತ್ನಿ ಸಾವಿಗೆ ಶರಣು. ಮತ್ತೊಂದು ಘಟನೆಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಬರುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ   ಮಹಿಳೆ. 
 

Husband dies of covid 19 woman ends life in Maharashtra snr
Author
Bengaluru, First Published Apr 16, 2021, 12:52 PM IST

ನೋಯ್ಡಾ(ಏ. 16):  ಕೊರೋನಾ ಎರಡನೇ ಅಲೆಯ ಅಟ್ಟಹಾಸ ದಿನದಿಂದ ದಿನಕ್ಕೇ ಹೆಚ್ಚುತ್ತಲೇ ಇದೆ. ಈ ವೈರಸ್ ಕಾಲಿಟ್ಟು ಆಗಲೇ ವರ್ಷವೂ ಕಳೆದಿದೆ. ಆದರೆ, ಈ ಸಾಂಕ್ರಾಮಿಕ ರೋಗದ ಬಗ್ಗೆ ತಪ್ಪು ಮಾಹಿತಿ ಮಾತ್ರ ಇನ್ನೂ ಬದಲಾದಂತೆ ಕಾಣಿಸುತ್ತಿಲ್ಲ. ಒಂದೆಡೆ ಕೊರೋನಾದಿಂದ ಪತಿ ಮೃತಪಟ್ಟರೆ ಪತ್ನಿ, ಮೂರು ವರ್ಷದ ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮತ್ತೊಂದೆಡೆ ತನಗೇ ಕೊರೋನಾ  ಬಂದಿದ್ದು ತಿಳಿದಾಗ   ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. 

ಕೊರೋನಾಗೆ ಪತಿ ಬಲಿ, ಪತ್ನಿ ಆತ್ಮಹತ್ಯೆ: 

ಬಡ ಕಟುಂಬ ಉದ್ಯೋಗಕ್ಕಾಗಿ ತೆಲಂಗಾಣದಿಂದ ಮಹಾರಾಷ್ಟ್ರದ ನಂದೇಡ್‌ಗೆ ವಲಸೆ ಹೋಗಿತ್ತು. ಪತಿ ಕೊರೋನಾದಿಂದ ಅಸುನೀಗಿದ್ದಾನೆ. ಮೂರು ವರ್ಷದ ಮಗುವಿನೊಂದಿಗೆ ಕಳೆದ ಮಾರ್ಚ್ 13ರ ಮಂಗಳವಾರ ಪತ್ನಿ ಕೆರೆಗೆ ಹಾರಿ, ಪ್ರಾಣ ಕಳೆದುಕೊಂಡಿದ್ದಾಳೆ. 

ಬೇಕಾಬಿಟ್ಟಿ ಕೋವಿಡ್‌ ಚಿಕಿತ್ಸಾ ದರ ವಸೂಲಿಗೆ ಸರ್ಕಾರ ಬ್ರೇಕ್‌..!

ಈ ದಂಪತಿಗೆ ಮೂರು ಮಕ್ಕಳಿದ್ದು, ಇವರಲ್ಲಿ  3 ವರ್ಷದ ಮಗ ತಾಯಿಯೊಂದಿಗೇ ಅಸುನೀಗಿದ್ದಾನೆ. ಮಹಾರಾಷ್ಷ್ರದ ನಾಗ್ಪುರದ ಸುನೆಗಾವ್ ಕೆರೆಯ ಬಳಿ ಈ ಘಟನೆ ನಡೆದಿದ್ದು, ಪತಿಯ ಸಾವಿನಿಂದ ನೊಂದ ಮಹಿಳೆ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ. 

ಇಂಥದ್ದೇ ಘಟನೆಯೊಂದು ತೆಲಂಗಾಣದಲ್ಲಿಯೂ ಸಂಭವಿಸಿದ ವರದಿಯಾಗಿದೆ. ಪತಿಯ ಸಾವಿಗೆ ನೊಂದು, ತನ್ನ ಆರೋಗ್ಯವೂ ಹದಗೆಡುತ್ತಿರುವ ಕಾರಣ, ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಕೊರೋನಾ ಪಾಸಿಟಿವ್ : ಮಹಿಳೆ ಆತ್ಮಹತ್ಯೆ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕೊರೋನಾ ಪಾಸಿಟಿವ್ ವರದಿ ಬೆನ್ನಲ್ಲೇ, ಮೈ ಮೇಲೆ ಸೀಮೆಎಮ್ಣೆ ಸುರಿದುಕೊಂಡು  52 ವರ್ಷದ ಮಹಿಳೆಯೊಬ್ಬಳು ಮಾರ್ಚ್ 13ರ ಮಂಗಳವಾರ ಕೊನೆಯುಸಿರೆಳೆದಿದ್ದಾಳೆ.  ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಹೋಮ್ ಐಸೋಲೇಷನ್‌ನಲ್ಲಿದ್ದರು. ನಾಲ್ಕು ದಿನಗಳ ನಂತರ ಇಂಥದ್ದೊಂದು ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದಾರೆ, ಎನ್ನಲಾಗಿದೆ. 

ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್ ...

ಮೃತ ಮಹಿಳೆ, ಪತಿ (ನಿವೃತ್ತ ವಾಯುಸೇನಾಧಿಕಾರಿ) ಮತ್ತು ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಬದಲಾಪುರ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕೊರೋನಾ ಸೋಂಕು ದೃಢಪಟ್ಟಿದರಿಂದ ಖಿನ್ನತೆಗೆ ಒಳಗಾಗಿದ್ದು ಹೌದು. ಆದರೆ, ಸಾವಿಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲವೆಂದು, ಪೊಲೀಸರು ತಿಳಿಸಿದ್ದಾರೆ. 

ದೇಶದೆಲ್ಲೆಡೆ ಸೋಂಕು:  ಕೊರೋನಾ ಅಟ್ಟಹಾಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ್ಯಾಂತ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ನೈಟ್ ಕರ್ಪ್ಯೂ, ಸೆಮಿ ಲಾಕಡೌನ್, ವಿಕೆಂಡ್ ಲಾಕಡೌನಂಥ ಕ್ರಮಗಗಳಿಗೆ ಮುಂದಾಗಿವೆ. ಕರ್ನಾಟಕದಲ್ಲೂ ಕೊರೋನಾ ರಣಕೇಕೆ ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಅಲ್ಲದೇ ಕೊರೋನಾ ತಡೆಯಲು ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸಿಎಂ ತುರ್ತು ಸಭೆಯನ್ನು ಕರೆದಿದ್ದಾರೆ. ಕೊರೋನಾ ಹರಡುವಿಕೆ ಹತೋಟಿಗೆ ತರಲು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನತಾ ಕರ್ಫ್ಯೂ, ವಿಕೆಂಡ್ ಲಾಕಡೌನ್‌ನಂಥ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಜೊತೆಗೆ ಕೊರೋನಾ ಹೆಚ್ಚಾಗುತ್ತಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವಂತೆಯೂ ತಜ್ಞರು ಸೂಚಿಸಿದ್ದಾರೆ. ರಾಜ್ಯದಲ್ಲಿ ನಿನ್ನೆ 14,738 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 66 ಜನ ಅಸುನೀಗಿದ್ದಾರೆ.  

  ಭಾರತದಲ್ಲಿಯೂ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಏಪ್ರಿಲ್ 15 ರಂದು ದೇಶದ್ಯಾಂತ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಶವಗಳ ಅಂತ್ಯ ಸಂಸ್ಕಾರಕ್ಕೂ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೇ, ಒಂದೇ ಹಾಸಿಗೆ ಮೇಲೆ ಎರಡು-ಮೂರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೊರೋನಾ ಒಂದನೇ ಅಲೆಗಿಂತ ಎರಡನೇ ಅಲೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಶೇ. 1.2% ಸಾವುಗಳು ಸಂಭವಿಸುತ್ತಿದ್ದು, ಇದುವರೆಗೂ ಭಾರತವೊಂದರಲ್ಲಿಯೇ ರೋನಾದಿಂದ 1 ಲಕ್ಷ 74 ಸಾವಿರಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಕೊರೋನಾ ಪಾಸಿಟಿವ್ ಬಂದ ತಕ್ಷಣ ಜನರಲ್ಲಿ ಭಯ ಹೆಚ್ಚುತ್ತಿದ್ದು, ತಮ್ಮ ಸಾವು ಖಚಿತ ಎಂಬ ಯೋಚನೆಗಳೇ ಜನರ ಮತ್ತಷ್ಟು ಸಾವಿಗೆ ಕಾರಣವಾಗಿದೆ. 

Follow Us:
Download App:
  • android
  • ios