ಹುಸೈನಿ ಶಾಪ್‌ನಲ್ಲಿ ನಾನ್‌ವೆಜ್ ಸಮೋಸಾ ಒಳಗೆ ದನದ ಮಾಂಸ, ಮಾಲೀಕ ಸೇರಿ ಸಿಬ್ಬಂದಿ ಅರೆಸ್ಟ್!
ಹುಸೈನಿ ಸಮೋಸಾ ಶಾಪ್ ಅತ್ಯಂತ ಜನಪ್ರಿಯ ಶಾಪ್. ಇಲ್ಲಿ ಸಿಗುವ ಸಮೋಸಾಗೆ ಜನರು ಮುಗಿಬೀಳುತ್ತಾರೆ. ಆದರೆ ಈ ಸಮೋಸಾ ಮಾಲೀಕರ ವಂಚನೆ ಬಯಲಾಗಿದೆ. ನಾನ್‌ವೆಜ್ ಸಮೋಸಾ ಹೆಸರಿನಲ್ಲಿ ದನದ ಮಾಂಸದ ಸಮೋಸಾ ನೀಡುತ್ತಿರುವುದು ಬಹಿರಂಗವಾಗಿದೆ. ಇದೀಗ ಮಾಲೀಕ ಸೇರಿದಂತೆ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಡೋದರ(ಏ.08) ಉತ್ತರ ಭಾರತದಲ್ಲಿ ಸಮೋಸಾ ಸೇರಿದಂತೆ ಹಲವು ತನಿಸುಗಳು ಅತ್ಯಂತ ಜನಪ್ರಿಯ. ಹೀಗಾಗಿ ಸಮೋಸಾ ಶಾಪ್‌ಗಳ ಸಂಖ್ಯೆ ದೊಡ್ಡಿದಿದೆ. ಅದರಲ್ಲೂ ವಡೋದರ ಹುಸೈನಿ ಸಮೋಸಾ ಶಾಪ್ ಅತ್ಯಂತ ಜನಪ್ರಿಯವಾಗಿದೆ. ಇಲ್ಲಿ ಸಮೋಸಾ ಪಡೆಯಲು ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಕಡಿಮೆ ದರದಲ್ಲಿ ಚಿಕನ್ ಸಮೋಸಾ ಮಾರಾಟ ಮಾಡಲಾಗುತ್ತಿತ್ತು. ಎಲ್ಲಾ ಸಮುದಾಯದ ಜನರು ಈ ಸಮೋಸಾಗೆ ಬಾಯಿ ಚಪ್ಪರಿಸುತ್ತಿದ್ದರು. ಆದರೆ ಚಿಕನ್ ಸಮೋಸಾ, ಮಟನ್ ಸಮೋಸಾ ಹೆಸರಿನಲ್ಲಿ ಹುಸೈನಿ ಶಾಪ್ ಮಾಲೀಕರು ದನದ ಮಾಂಸದ ಸಮೋಸಾ ನೀಡುತ್ತಿರುವುದು ಬಹಿರಂಗವಾಗಿದೆ. ಈ ಮಾಹಿತಿ ಪಡೆದು ದಾಳಿ ಮಾಡಿದ ಪೊಲೀಸರು ಸಮೋಸಾ ವಶಕ್ಕೆ, ಅಂಗಡಿಯಲ್ಲಿದ್ದ ಮಾಂಸಗಳನ್ನು ವಶಪಡಿಸಿ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ವರದಿ ಬಂದಿದ್ದು, ಇದು ದನದ ಮಾಂಸ ಅನ್ನೋದು ಖಚಿತವಾಗಿದೆ. ಇತ್ತ ಪೊಲೀಸರು ಹುಸೈನಿ ಮಾಲೀಕ, ಸಿಬ್ಬಂದಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಚಿಕನ್ ಸಮೋಸಾ, ಮಟನ್ ಸಮೋಸಾ ಹೆಸರಿನಲ್ಲಿ ದನದ ಮಾಂಸ ನೀಡುತ್ತಿದ್ದ ಹುಸೈನಿ ಶಾಪ್ ಮಾಲೀಕ ಯೂಸುಫ್ ಶೇಕ್, ನಯೀಮ್ ಶೇಕ್ ಹಾಗೂ ಇತರ ನಾಲ್ವರು ಸಿಬ್ಬಂದಿಗಳಾದ ಹನೀಫ್ ಬಥಿಯಾರ, ದಿಲಾವರ ಪಠಾಣ್, ಮೊಯಿನ್ ಹಬ್ದಾಲ್, ಮೊಯಿನ್ ಶೇಕ್ ಬಂಧಿತರು. ಮಟನ್ ಸಮೋಸಾ ಹೆಸರಿನಲ್ಲಿ ದನದ ಮಾಂಸದ ಸಮೋಸಾಗಳನ್ನು ಮಾರಾಟ ಮಾಡಲಾಗುತ್ತಿತ್ತು.
ಗೋಮಾಂಸ ಹಿಡಿದವರೇ ಅರೆಸ್ಟ್.. ಶ್ರೀರಾಮಸೇನೆಯಿಂದ ಪ್ರೊಟೆಸ್ಟ್: ಅಕ್ರಮ ಸಾಗಾಟ ತಡೆದಿದ್ದೇ ತಪ್ಪಾ..?
ಸಣ್ಣ ಶಾಪ್‌ನಿಂದ ಆರಂಭಗೊಂಡ ಶೇಕ್ ಮಾಲೀಕತ್ವದ ಈ ಉದ್ಯಮ ಇದೀಗ 5 ಅಂತಸ್ತಿನ ಸ್ವಂತ ಕಡ್ಡದಿಂದ ಕಾರ್ಯನಿರ್ವಹಿಸುತ್ತಿದೆ. ದನದ ಮಾಂಸಗಳನ್ನು ಬಳಸಿ ಸಮೋಸ ಮಾಡಲಾಗುತ್ತಿತ್ತು. ಮುಸ್ಲಿಮ್ ಸಮುದಾಯಕ್ಕಿಂತ ಇತರ ಸಮುದಾಯದ ಗ್ರಾಹಕರೇ ಹೆಚ್ಚಿದ್ದರು. ಯೂಸುಫ್ ಶೇಕ್, ನಯೀಮ್ ಶೇಕ್ ತಂದೆಯ ಕಾಲದಿದಂಲೂ ಇದೇ ಉದ್ಯಮ ನಡೆಯುತ್ತಿತ್ತು. ಆಗಲೂ ದನದ ಮಾಂಸವನ್ನೇ ಬಳಸಲಾಗುತ್ತಿತ್ತು ಅನ್ನೋ ಆರೋಪ ಇದೀಗ ಕೇಳಿಬಂದಿದೆ.
ಹುಸೈನಿ ಶಾಪ್‌ನಲ್ಲಿ ವಶಪಡಿಸಿಕೊಂಡ ಸಮೋಸಾ ಹಾಗೂ ದೊಡ್ಡ ದೊಡ್ಡ ರೆಫ್ರಿಜರೇಟರ್‌ನಲ್ಲಿ ಶೇಖರಿಸಿದ್ದ ಮಾಂಸಗಳು ದನದ ಮಾಂಸ ಅನ್ನೋದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಮಹತ್ವದ ಸಾಕ್ಷ್ಯ ಲಭ್ಯಾಗಿದೆ. ಈ ಹುಸೈನಿ ಸಮೋಸಾ ಶಾಪ್‌ಗೆ ಆಹಾರ ಇಲಾಖೆಯಿಂದ ಯಾವುದೇ ಲೈಸೆನ್ಸ್ ಪಡೆದಿಲ್ಲ. ಅನುಮತಿ ಇಲ್ಲದೆ ಇಷ್ಟು ದಿನ ಹುಸೈನಿ ಸಮೋಸಾ ಶಾಪ್ ನಡೆಸಿದ್ದಾರೆ. ಅದರಲ್ಲೂ ಜನರಿಗೆ ಮೀಟ್ ಸಮೋಸಾ ಹೆಸರಿನಲ್ಲಿ ದನದ ಮಾಂಸ ನೀಡಿ ವಂಚಿಸಿರುವ ಪ್ರಕರಣ ದಾಖಲಾಗಿದೆ.
ಕುರಿ ಮಾಂಸದ ಅಂಗಡೀಲಿ ಗೋಮಾಂಸ ಕೇಸ್: ಖರೀದಿಸಿದವರಿಗೆ ಜಾಮೀನು ಸಿಕ್ಕ ಹಿನ್ನೆಲೆ ಮಾರಿದವರಿಗೂ ಜಾಮೀನು
ಹುಸೈನಿ ಶಾಪ್‌ಗೆ ಬೀಗ ಜಡಿಯಲಾಗಿದೆ. ಇದೀಗ ವಡೋದರ ಹಲವು ಭಾಗದಲ್ಲಿ ನ್ಯೂ ಹುಸೈನಿ ಸಮೋಸಾ, ಆಲ್ ನ್ಯೂ ಹುಸೈನಿ ಸಮೋಸಾ, ಹುಸೈನಿ ಬ್ರದರ್ಸ್ ಸಮೋಸಾ ಸೇರಿದಂತೆ ಹಲವು ಶಾಪ್‌ಗಳು ಕಳೆದ ಹಲವು ವರ್ಷಗಳಲ್ಲಿ ತಲೆ ಎತ್ತಿದೆ. ಇದೀಗ ಪೊಲೀಸರು ಇತರ ಕೆಲ ಸಮೋಸಾ ಶಾಪ್‌ಗೆ ದಿಢೀರ್ ದಾಳಿ ನಡೆಸಲು ಸಜ್ಜಾಗಿದ್ದಾರೆ.