ಲೋಕಸಭೆ ಚುನಾವಣೆ ಘೋಷಣೆ ಬಳಿಕ ಖಾಸಗಿ ಬೇಹುಗಾರರಿಗೆ ಭಾರೀ ಬೇಡಿಕೆ!

ಚುನಾವಣೆಗಳು ಚದರಂಗದಾಟದಂತೆ. ಒಬ್ಬರ ನಡೆ ನೋಡಿ ಮತ್ತೊಬ್ಬರು ನಡೆ ಇಡುವುದು. ಇದಕ್ಕೆ ಲೋಕಸಭೆ ಚುನಾವಣೆಯೂ ಹೊರತಲ್ಲ. ಹೀಗಾಗಿಯೇ ಲೋಕಸಭಾ ಚುನಾವಣೆಗಳು ಘೋಷಣೆಯಾಗುತ್ತಲೇ, ದೇಶವ್ಯಾಪಿ ಖಾಸಗಿ ಗೂಢಚರರಿಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. 

Huge demand for private spies after Lok Sabha election announcement gvd

ನವದೆಹಲಿ (ಮಾ.21): ಚುನಾವಣೆಗಳು ಚದರಂಗದಾಟದಂತೆ. ಒಬ್ಬರ ನಡೆ ನೋಡಿ ಮತ್ತೊಬ್ಬರು ನಡೆ ಇಡುವುದು. ಇದಕ್ಕೆ ಲೋಕಸಭೆ ಚುನಾವಣೆಯೂ ಹೊರತಲ್ಲ. ಹೀಗಾಗಿಯೇ ಲೋಕಸಭಾ ಚುನಾವಣೆಗಳು ಘೋಷಣೆಯಾಗುತ್ತಲೇ, ದೇಶವ್ಯಾಪಿ ಖಾಸಗಿ ಗೂಢಚರರಿಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಒಂದೆಡೆ ರಾಜಕೀಯ ಪಕ್ಷಗಳು ಎದುರಾಳಿ ಪಕ್ಷದ ರಾಜಕೀಯ ತಂತ್ರಗಾರಿಕೆ ಪತ್ತೆ ಮಾಡಲು ಮುಂದಾಗಿದ್ದರೆ ಮತ್ತೊಂದೆಡೆ ರಾಜಕೀಯ ನಾಯಕರು ಎದುರಾಳಿ ನಾಯಕರ ಜೊತೆಜೊತೆಗೇ ಸ್ವಪಕ್ಷದ ನಾಯಕರ ಮೇಲೂ ಹದ್ದಿನಗಣ್ಣು ಇಡಲು ಬೇಹುಗಾರರ ಮೊರೆ ಹೋಗಿದ್ದಾರೆ.

ರಾಜಕೀಯ ಪಕ್ಷಗಳು, ತಮ್ಮ ಎದುರಾಳಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮೇಲೆ ಎಂತಹ ಕ್ರಿಮಿನಲ್ ಆಪಾದನೆ ಇದೆ, ಅವರ ಅಕ್ರಮ ಸಂಬಂಧಗಳೂ ಏನಾದರೂ ಇವೆಯೇ? ಯಾವ್ಯಾವ ಹಗರಣ ನಡೆಸಿದ್ದಾರೆ? ಅವರ ಆಪ್ತ ವಲಯದಲ್ಲಿ ಯಾರ್ಯಾರು ಇದ್ದಾರೆ? ಎದುರಾಳಿಗಳ ಜನಶಕ್ತಿ ಹೇಗಿದೆ ಎಂಬುದರ ಮಾಹಿತಿ ಕಲೆಹಾಕಲು ಬೇಹುಗಾರರನ್ನು ಬಳಸುತ್ತಿವೆ.

ಇದರ ಜೊತೆಗೆ ತಮ್ಮ ತಮ್ಮ ಪಕ್ಷದೊಳಗೆ ಹಲವು ವ್ಯವಹಾರಗಳನ್ನು ತಿಳಿಯಲು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಿವೆ. ಸ್ವ ಪಕ್ಷದಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು, ಯಾರಿಗೆ ಹೆಚ್ಚು ಜನಬೆಂಬಲವಿದೆ, ಯಾರು ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ. ನಾಯಕರ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಲು ಪಕ್ಷಗಳು ಅದರ ನಾಯಕರ ವಿರುದ್ಧವೇ ಬೇಹುಗಾರರನ್ನು ಬಿಡುತ್ತಿದೆ.

Lok Sabha Election 2024: ಕಾಂಗ್ರೆಸ್‌ ಟಿಕೆಟ್‌ ಕೈತಪ್ಪುವ ಆತಂಕದಲ್ಲಿ ಕಣ್ಣೀರಿಟ್ಟ ವೀಣಾ ಕಾಶಪ್ಪನವರ್‌!

ಇದರಲ್ಲಿ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಖಾಸಗಿ ಸಂಸ್ಥೆಗಳ ಸಮೀಕ್ಷೆಗೆ ರಾಜಕೀಯ ಪಕ್ಷಗಳು ಹೆಚ್ಚು ಬೇಡಿಕೆ ಇರಿಸುತ್ತಿದೆ. ಇದರ ಆಧಾರದ ಮೇಲೆ ಅಭ್ಯರ್ಥಿಗಳ ಬದಲಾವಣೆ, ಹೊಸ ಮುಖಗಳಿಗೆ ಮಣೆ ಹೀಗೆ ವಿವಿಧ ನಿರ್ಧಾರಗಳನ್ನು ಪಕ್ಷಗಳು ತೆಗೆದುಕೊಳ್ಳುತ್ತದೆ ಎಂದು ಕ್ಷೇತ್ರದ ಪರಿಣತರು ವಿವರಿಸಿದ್ದಾರೆ. ಇದರ ಬೆಲೆಯನ್ನು ಬೇಡಿಕೆ ಆಧಾರದ ಮೇಲೆ ಸಂಸ್ಥೆಗಳು ಪಡೆಯುತ್ತದೆ. ತಮಗೆ ಅನುಕೂಲಕರ ಮಾಹಿತಿ ಸಿಕ್ಕರೆ ಪಕ್ಷಗಳು ಹೆಚ್ಚು ಪಾವತಿ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios