ಭಾರತದ ಎಲ್ಲ ಪಾಲಕರೂ ವಿಲ್ ಬರೆಯೋದಿಲ್ಲ. ಆಸ್ತಿ ಪಾಲು ಮಾಡ್ದೆ ಸತ್ರೆ ಮಕ್ಕಳ ಮಧ್ಯೆ ಕನ್ಫ್ಯೂಸ್ ಶುರುವಾಗುತ್ತೆ. ಕಾನೂನು ಏನು ಹೇಳುತ್ತೆ ಅನ್ನೋದನ್ನು ತಿಳಿದ್ರೆ ಟೆನ್ಷನ್ ಇಲ್ದೆ ಕೆಲ್ಸ ಮುಗಿಸ್ಬಹುದು. 

ಆಸ್ತಿ ವಿಲ್ (Property Will) ಗೆ ಸಂಬಂಧಿಸಿದಂತೆ ಭಾರತದ ಅನೇಕ ಕುಟುಂಬದಲ್ಲಿ ವಿವಾದವಿದೆ. ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಹತ್ತು, ಹದಿನೈದು ವರ್ಷವಾದ್ರೂ ಬಗೆಹರಿಯೋದಿಲ್ಲ. ಹಿರಿಯರು ವಿಲ್ ನೋಂದಾಯಿಸಿದ್ರೆ ಹೇಗೆ ವಿಲ್ ನೋಂದಾಯಿಸಿಲ್ಲ ಅಂದ್ರೆ ಆಸ್ತಿ ಹಂಚಿಕೆ ಹೇಗೆ ಎಂಬ ಬಗ್ಗೆ ಬಹುತೇಕ ಭಾರತೀಯರಿಗೆ ತಿಳಿದಿಲ್ಲ. ಗಂಡು ಮಕ್ಕಳು ಮಾತ್ರವಲ್ಲ ಹೆಣ್ಣು ಮಕ್ಕಳಿಗೂ ಈಗ ಆಸ್ತಿಯಲ್ಲಿ ಹಕ್ಕಿರೋದ್ರಿಂದ ಪ್ರತಿಯೊಬ್ಬರೂ ಕಾನೂನು ತಿಳಿಯೋದು ಮುಖ್ಯ.

ವೈಯಕ್ತಿಕ ಆಸ್ತಿ

ಕಾನೂನಿನ ಪ್ರಕಾರ, 1956 ರ ನಂತರ ಒಬ್ಬ ವ್ಯಕ್ತಿ ತನ್ನ ಸ್ವಂತ ಗಳಿಕೆಯಿಂದ ಆಸ್ತಿ ಸಂಪಾದಿಸಿದ್ದರೆ ಅದನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ಆಸ್ತಿ ಹಿಂದೂ ಅವಿಭಜಿತ ಕುಟುಂಬಕ್ಕೆ (HUF) ಸೇರಿಲ್ಲ. ಅದು ವ್ಯಕ್ತಿಯ ವೈಯಕ್ತಿಕ ಆಸ್ತಿಯಾಗಿದೆ. ಈ ಆಸ್ತಿಯನ್ನು ವ್ಯಕ್ತಿ ಇಷ್ಟಪಟ್ವವರಿಗೆ ನೀಡುವ ಹಕ್ಕನ್ನು ಹೊಂದಿರುತ್ತಾರೆ.

ನೋಂದಾಯಿಸಿದ ವಿಲ್ ಎಷ್ಟು ಮಾನ್ಯ?

ಭಾರತೀಯ ಕಾನೂನು ಸ್ಪಷ್ಟವಾಗಿ ವಿಲ್ ಅನ್ನು ನೋಂದಾಯಿಸಬೇಕಾಗಿಲ್ಲ ಎಂದು ಹೇಳುತ್ತದೆ. ವಿಲ್ ಅನ್ನು ಸರಿಯಾಗಿ ರಚಿಸಿದ್ದರೆ, ಸಾಕ್ಷಿಗಳನ್ನು ಹೊಂದಿದ್ದರೆ ಮತ್ತು ಬಲವಂತ ಅಥವಾ ವಂಚನೆಯಿಲ್ಲದೆ ಮಾಡಲಾಗಿದೆ ಎಂದು ಸಾಬೀತಾದ್ರೆ ಅದನ್ನು ಸಂಪೂರ್ಣವಾಗಿ ಮಾನ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ವಿಲ್ ಅನ್ನು ನೋಂದಾಯಿಸಲಾಗಿಲ್ಲ ಎಂಬ ಕಾರಣಕ್ಕೆ ಅದನ್ನು ತಿರಸ್ಕರಿಸಲಾಗೋದಿಲ್ಲ.

ಆಸ್ಟ್ರೇಲಿಯಾ ವ್ಲಾಗರ್‌ ಬಾಯಲ್ಲಿ ಶ್ರೀರಾಮ, ಭಾರತ ಮಾತೆಯ ಘೋಷಣೆ,

ಹೆಣ್ಣುಮಕ್ಕಳಿಗೆ ಸಮಾನ ಹಕ್ಕು

ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005 ರ ನಂತ್ರ, ಹೆಣ್ಣುಮಕ್ಕಳಿಗೆ ಗಂಡು ಮಕ್ಕಳಂತೆ ಸಮಾನ ಹಕ್ಕು ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ತಂದೆಯ ವಿಲ್ನಲ್ಲಿ ಪಾಲು ನೀಡಿದರೆ, ಅವರು ಅದೇ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ವಿಲ್ ನಲ್ಲಿ ಅವರ ಹೆಸರಿಲ್ಲ ಅಂದ್ರೂ ಹೆಣ್ಣು ಮಕ್ಕಳನ್ನು ಕಾನೂನುಬದ್ಧವಾಗಿ ನಿರ್ಲಕ್ಷಿಸಲಾಗುವುದಿಲ್ಲ. ತಂದೆ ವಿಲ್ ಇಲ್ದೆ ಸತ್ತಿದ್ದರೆ, ಅದನ್ನು ಇನ್ಸ್ಟೆಟ್ ಡೆತ್ ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಗಂಡು ಮಕ್ಕಳು, ಎಲ್ಲಾ ಹೆಣ್ಣುಮಕ್ಕಳು, ತಾಯಿ (ಜೀವಂತಿದ್ದರೆ), ಮತ್ತು ಅಜ್ಜಿ (ಜೀವಂತಿದ್ದರೆ) ಆಸ್ತಿಯಲ್ಲಿ ಸಮಾನ ಪಾಲು ನೀಡಲಾಗುತ್ತದೆ.

ಇನ್ನು ಕೆಲವೊಮ್ಮೆ ಕೆಲ ಆಸ್ತಿಗಳನ್ನು ಮಾತ್ರ ವಿಲ್ನಲ್ಲಿ ಉಲ್ಲೇಖಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ವಿಲ್ನಲ್ಲಿ ಉಲ್ಲೇಖಿಸಲಾದ ಆಸ್ತಿಯನ್ನು ವಿಲ್ ಪ್ರಕಾರ ವಿಂಗಡಿಸಲಾಗುತ್ತದೆ. ಉಲ್ಲೇಖಿಸದ ಆಸ್ತಿಗಳನ್ನು ಕಾನೂನುಬದ್ಧ ಉತ್ತರಾಧಿಕಾರಿಗಳಲ್ಲಿ ಸಮಾನವಾಗಿ ಹಂಚಲಾಗುತ್ತದೆ.

ದುಡ್ಡಿದ್ದರಷ್ಟೇ ಬಂದು-ಬಳಗ! ಸಹಾಯಕ್ಕೆ ಯಾರೂ ಇಲ್ಲದೇ ತಾಯಿಯ ಹೆಣ ಹೊತ್ತು, ಚಿತೆ ಸಿದ್ದಪಡಿಸಿದ ಇಬ್ಬರು ಹೆಣ್ಣು ಮಕ್ಕಳು! ವಿಡಿಯೋ ವೈರಲ್

ಮುಖ್ಯವಾಗಿ ತಿಳಿಯಬೇಕಾದ ವಿಷ್ಯ

• ನೋಂದಣಿ ಮಾಡದ ವಿಲ್ ಕೂಡ ಸಂಪೂರ್ಣವಾಗಿ ಮಾನ್ಯವಾಗಿರುತ್ತದೆ.

• ಹೆಣ್ಣುಮಕ್ಕಳಿಗೆ ಗಂಡು ಮಕ್ಕಳಂತೆ ಸಮಾನ ಕಾನೂನು ಹಕ್ಕುಗಳಿವೆ.

• ವಿಲ್ ಇದ್ದರೆ, ಆಸ್ತಿಯನ್ನು ಅದಕ್ಕೆ ಅನುಗುಣವಾಗಿ ವಿಂಗಡಿಸಲಾಗುತ್ತದೆ.

• ವಿಲ್ನಲ್ಲಿ ಸೇರಿಸದ ಆಸ್ತಿಯನ್ನು ಎಲ್ಲಾ ಉತ್ತರಾಧಿಕಾರಿಗಳಲ್ಲಿ ಸಮಾನವಾಗಿ ವಿಂಗಡಿಸಲಾಗುತ್ತದೆ.

• ಸರಿಯಾದ ಸಮಯದಲ್ಲಿ ವಿಲ್ ಮಾಡೋದು ಬಹಳ ಮುಖ್ಯ. ನೀವು ಸರಿಯಾದ ಟೈಂಗೆ ಸ್ಪಷ್ಟವಾಗಿ ವಿಲ್ ಬರೆಯುವುದರಿಂದ, ನಿಮ್ಮ ನಿಧನದ ನಂತ್ರ ಆಸ್ತಿ ಹಂಚಿಕೆ ಸುಲಭವಾಗುತ್ತದೆ. ಇಲ್ಲವೆಂದ್ರೆ ಕುಟುಂಬ ದೀರ್ಘಕಾಲದ ಕಾನೂನು ವಿವಾದದಲ್ಲಿ ಸಮಯ ಹಾಳ್ಮಾಡ್ಬೇಕಾಗುತ್ತದೆ.

• ಕುಟುಂಬದಲ್ಲಿ ಬಹು ಉತ್ತರಾಧಿಕಾರಿಗಳಿದ್ದರೆ ಅಂದ್ರೆ ಅನೇಕ ಮಕ್ಕಳಿದ್ದರೆ ವಿಲ್ ಬರೆಯೋದು ಇನ್ನೂ ಮುಖ್ಯ.