Asianet Suvarna News Asianet Suvarna News

Covid Politics: ಕೊರೋನಾ ಸಂಕಷ್ಟದಲ್ಲೂ ರಾಜಕೀಯ, ಲಸಿಕೆ ಲೆಕ್ಕಾಚಾರದಿಂದ ಬಯಲಾಯ್ತು ಪಕ್ಷಗಳ ಬಂಡವಾಳ!

* ಕೊರೋನಾ ಸಂಕಷ್ಟ ಕಾಲದಲ್ಲೂ ಪಕ್ಷಗಳಿಂದ ರಾಜಕೀಯ

* ಲಸಿಕೆ ಅಂಕಿ ಅಂಶದಲ್ಲಿ ಬಯಲಾಯ್ತು ಮಹತ್ವದ ಅಂಶ

* ಮೊದಲ, ಎರಡನೇ ಡೋಸ್ ನೀಡೋ ಮೊದಲೇ ಬೂಸ್ಟರ್‌ ಡೋಸ್‌ ಮಾತೇಕೆ?

How politics has an impact on performance during the covid crisis pod
Author
Bangalore, First Published Nov 29, 2021, 4:26 PM IST

ನವದೆಹಲಿ(ನ.29): ಕಾಂಗ್ರೆಸ್ (Congress) ಅಥವಾ ಅದರ ಮಿತ್ರಪಕ್ಷಗಳು ಆಳುವ ಯಾವುದೇ ರಾಜ್ಯವು ಶೇಕಡಾ 90 ಕ್ಕಿಂತ ಹೆಚ್ಚು ಜನರಿಗೆ ಮೊದಲ ಡೋಸ್ ಮತ್ತು ಶೇಕಡಾ 50 ಕ್ಕಿಂತ ಹೆಚ್ಚು ಜನರಿಗೆ ಎರಡನೇ ಡೋಸ್ ನೀಡಲು ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ಮೊದಲ (First Dose) ಮತ್ತು ಎರಡನೇ ಡೋಸ್‌ಗಳನ್ನು (Secoond Dose) ಸಾಕಷ್ಟು ಜನರಿಗೆ ನೀಡಲು ಸಾಧ್ಯವಾಗದ ಈ ರಾಜ್ಯಗಳು ಈಗ ಬೂಸ್ಟರ್ ಡೋಸ್‌ಗೆ ಒತ್ತಾಯಿಸುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಕನಿಷ್ಠ 7 ಬಿಜೆಪಿ ಆಡಳಿತದ ರಾಜ್ಯಗಳು ಶೇ. 90ಕ್ಕಿಂತ ಹೆಚ್ಚು ಮೊದಲ ಡೋಸ್‌ ಲಸಿಕೆ ನಿಡಿ ಪೂರೈಸಿದೆ ಹಾಗೂ 8 ಬಿಜೆಪಿ ಆಡಳಿತದ ರಾಜ್ಯಗಳು ಎರಡನೇ ಡೋಸ್‌ನ ಶೇ. 50ರಷ್ಟು ಮುಟ್ಟಿವೆ.

ಕಾಂಗ್ರೆಸ್ ಅಥವಾ ಅದರ ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಲಸಿಕೆ ಪ್ರಮಾಣ

ರಾಜ್ಯ ಮೊದಲ ಡೋಸ್‌ ಪ್ರಮಾಣ ಎರಡನೇ ಡೋಸ್ ಪ್ರಮಾಣ
ಜಾರ್ಖಂಡ್ 66.2 % 30.8 %
ಪಂಜಾಬ್ 72.5 % 32.8 %
ತಮಿಳುನಾಡು 78.1 % 42.65 %
ಮಹಾರಾಷ್ಟ್ರ 80.11 %, 42.5 %
ಛತ್ತೀಸ್‌ಗಢ 83.2% 47.2%
ರಾಜಸ್ಥಾನ 84.2 % 46.9%
ಪಶ್ಚಿಮ ಬಂಗಾಳ 86.6 % 39.4 %

ಬಿಜೆಪಿ ಆಡಳಿತವಿರುವ ರಾಜ್ಯಗಳ ಲಸಿಕೆ ಪ್ರಮಾಣ

ರಾಜ್ಯ ಮೊದಲ ಡೋಸ್‌ ಪ್ರಮಾಣ ಎರಡನೇ ಡೋಸ್ ಪ್ರಮಾಣ
ಹಿಮಾಚಲ ಪ್ರದೇಶ 100 %, 91.9 %
ಗೋವಾ 100 % 87.9%
ಗುಜರಾತ್ 93.5 % 70.3 %
ಉತ್ತರಾಖಂಡ 93.0 % 61.7 %
ಮಧ್ಯಪ್ರದೇಶ 92.8 % 62.9 %
ಕರ್ನಾಟಕ 90.9% 59.1%
ಹರ್ಯಾಣ 90.04% 48.3%
ಅಸ್ಸಾಂ 88.9 % 50 %
ತ್ರಿಪುರಾ 80.5% 63.5%
     

 ರಾಷ್ಟ್ರಪತಿ ಕೋವಿಂದ್ VVIP ಡ್ಯೂಟಿ ಮಾಡುತ್ತಿದ್ದ 19  ಪೊಲೀಸರಿಗೆ ಕೊರೋನಾ, ಭಾರೀ ಆತಂಕ!

ಉತ್ತರಾಖಂಡಕ್ಕೆ (Uttarakhand) ಆಗಮಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (President Ram Nath Kovind) ಅವರ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದ 19 ಪೊಲೀಸರಿಗೆ ಕೊರೋನಾ (Covid 19) ಸೋಂಕು ಕಾಣಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ಪೊಲೀಸರನ್ನು ಐಸೋಲೇಟ್ (Isolation) ಮಾಡಲಾಗಿದೆ. ರಾಷ್ಟ್ರಪತಿಯವರು ಆಗಮಿಸುವ ಮೊದಲೇ, ಅವರನ್ನು ಕರ್ತವ್ಯ ತೆಗೆದು ಹಾಕಿ ಐಸೋಲೇಶನ್‌ಗೆ ಕಳುಹಿಸಲಾಗಿತ್ತು. ಆದರೆ ಅವರು ಕರ್ತವ್ಯದಲ್ಲಿರುವಾಗ, ಅವರನ್ನು ಅನೇಕ ಸ್ಥಳಗಳಲ್ಲಿ ಪೋಸ್ಟ್ ಮಾಡಲಾಗಿತ್ತು, ಹೀಗಿರುವಾಗ ಅವರು ಅನೇಕ ಜನರ ಸಂಪರ್ಕಕ್ಕೆ ಬಂದಿದ್ದಾರೆ. ವಿವಿಐಪಿ (VVIP) ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸುಮಾರು 400 ಪೊಲೀಸರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.

ಈ ಜಿಲ್ಲೆಗಳಲ್ಲಿ ಪೋಲಿಸರು ಕೋವಿಡ್-19 ಪಾಸಿಟಿವ್

ಭಾನುವಾರ ಬೆಳಗ್ಗೆ 19 ಪೊಲೀಸರಿಗೆ ಕೋವಿಡ್ ಸೋಂಕು (Coronavirus) ದೃಢಪಟ್ಟಿದೆ. ಪರೀಕ್ಷಾ ವರದಿ ಬಂದ ತಕ್ಷಣ ಪೊಲೀಸರು ಹಾಗೂ ಆಡಳಿತ ಮಂಡಳಿಯಲ್ಲಿ ಆತಂಕ ಉಂಟಾಗಿದೆ. ಭಾನುವಾರ ಪಾಸಿಟಿವ್ ಬಂದ ಯಾವುದೇ ಪೊಲೀಸರನ್ನು ವಿಐಪಿ ಕರ್ತವ್ಯಕ್ಕೆ ನಿಯೋಜಿಸದಿರುವುದು ಸಮಾಧಾನದ ಸಂಗತಿ. ಚಮೋಲಿ, ರುದ್ರಪ್ರಯಾಗ, ಡೆಹ್ರಾಡೂನ್ (Dehradun) ಮತ್ತು ಪೌರಿ ಜಿಲ್ಲೆಗಳ 19 ಪೊಲೀಸ್ ಸಿಬ್ಬಂದಿ ಕೊರೋನಾ ಸೋಂಕಿತರಲ್ಲಿ ಸೇರಿದ್ದಾರೆ ಎಂದು ಯಮಕೇಶ್ವರ ಬ್ಲಾಕ್‌ನ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಜೀವ್ ಕುಮಾರ್ ತಿಳಿಸಿದ್ದಾರೆ. ಇಲಾಖೆಯು ಸೋಂಕಿತ ಸಿಬ್ಬಂದಿಯನ್ನು ಕರ್ತವ್ಯದಿಂದ ಹಿಂದಕ್ಕೆ ಕಳುಹಿಸಿದೆ. ಮುಂದಿನ 14 ದಿನಗಳ ಕಾಲ ಎಲ್ಲಾ ಯೋಧರು ಹೋಮ್ ಐಸೋಲೇಶನ್‌ನಲ್ಲಿರುತ್ತಾರೆ ಎಂದಿದ್ದಾರೆ.

ಈ ಪೊಲೀಸರು ನೂರಾರು ಜನರ ಸಂಪರ್ಕದಲ್ಲಿದ್ದರು

ವಿಐಪಿ ಕರ್ತವ್ಯಕ್ಕೆ ಬಂದಿದ್ದ ಈ ಪೊಲೀಸರು ಇತರ ಪೊಲೀಸರು, ಆಶ್ರಮದ ನೌಕರರು, ಸ್ವರ್ಗಾಶ್ರಮ ಮಾರುಕಟ್ಟೆಯ ಅಂಗಡಿಕಾರರು ಸೇರಿದಂತೆ ಇತರ ಜನರ ಸಂಪರ್ಕಕ್ಕೆ ಬಂದಿದ್ದರು. ಇವರ ಸಂಪರ್ಕಕ್ಕೆ ಬಂದವರ ಪಟ್ಟಿಯನ್ನು ಆರೋಗ್ಯ ಇಲಾಖೆ ಸಿದ್ಧಪಡಿಸುತ್ತಿದೆ. ಇವರೆಲ್ಲರ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.

Follow Us:
Download App:
  • android
  • ios